ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ…’
ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ. ರಾಜ್ಯ ಪುನರ್ ವಿಂಗಡಣೆಯಾದಾಗ ಕಾಸರಗೋಡು ಕೇರಳದ ಪಾಲಾಯಿತು. ತೀವ್ರ ಹಳಹಳಿಸಿದ ಪೈಗಳು ತಮ್ಮ ಹೆಸರಿನೊಂದಿಗೆ ಸದಾ ಮಂಜೇಶ್ವರ ಎಂದು ‘ಎಂ’ ಸೇರಿಸಿಕೊಂಡರು.
ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು 1883 ರ ಮಾರ್ಚ್ 23 ರಂದು ಮಂಜೇಶ್ವರದಲ್ಲಿ ಜನಿಸಿದರು, ತಂದೆ ಮಂಗಳೂರಿನ ಸಾವುಕಾರ ತಿಮ್ಮಪ್ಪ ಹಾಗೂ ತಾಯಿ ದೇವಕಿಯಮ್ಮ.
ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂ. ಗೋವಿಂದ ಪೈ. ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಬಿ.ಎ. ವ್ಯಾಸಂಗವನ್ನು ಮಾಡುತ್ತಿದ್ದರು. ಸ್ವಂತ ವ್ಯಾಸಂಗದಲ್ಲೇ ಕನ್ನಡ, ಇಂಗ್ಲಿಷ್, ಗ್ರೀಕ್, ಫ್ರೆಂಚ್, ಸಂಸ್ಕೃತ, ಜರ್ಮನ್, ಪ್ರಾಕೃತ ಮೊದಲಾದ ದೇಶ – ವಿದೇಶಗಳ ಭಾಷೆಗಳನ್ನು ಕಲಿತರು.
ಸಂಶೋಧನೆಯಲ್ಲಿ ತೊಡಗಿದ ಗೋವಿಂದ ಪೈ ಅವರು ಹಳಗನ್ನಡ ವಿದ್ವಾಂಸರೂ ಕವಿಗಳೂ ಆಗಿದ್ದರು. ಗೋವಿಂದ ಪೈ ಅವರು ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ಬಂಗಾಲಿ, ಸಂಸ್ಕೃತ, ಪಾಳಿ, ಮರಾಠಿ, ಜರ್ಮನ್ ಸೇರಿದಂತೆ ಒಟ್ಟು 25 ಭಾಷೆ ಕಲಿತಿದ್ದರು. ಮೈಸೂರು ವಿ.ವಿ. ಇವರಿಗೆ ನೀಡಬೇಕೆಂದಿರುವ ಗೌರವ ಡಾಕ್ಟರೇಟ್ ನ್ನು ಅವರು ನಯವಾಗಿ ತಿರಸ್ಕರಿಸಿದರು.
ಗೋವಿಂದ ಪೈ ಅವರಿಗೆ ಸಾಹಿತ್ಯ ಪರಿಷತ್ತು 1951 ರಲ್ಲಿ ಬೊಂಬಾಯಿಯಲ್ಲಿ ನಡೆದ 34 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಪುರಸ್ಕರಿಸಿತು. ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿತು. ಪೈಯವರನ್ನು 1949 ರಲ್ಲಿ ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು ರಚಿಸಿದ, ‘ಕುಲವಧು’ ಚಿತ್ರಕ್ಕಾಗಿ ಬಳಸಿಕೊಳ್ಳಲಾದ, ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಕನ್ನಡದ ಕೋಗಿಲೆ ಎಸ್ ಜಾನಕಿ ಹಾಡಿರುವ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ’ ಹಾಡು. ಕನ್ನಡ ಭಾಷೆ ಜೀವಂತವಿರುವ ತನಕ ಈ ಹಾಡು ಕನ್ನಡಿಗರ ಮನದಲ್ಲಿ ಮಾರ್ದನಿಸುತ್ತಲೇ ಇರುತ್ತದೆ.
ಗೋವಿಂದ ಪೈ ಅವರು ಮಂಜೇಶ್ವರದಲ್ಲಿ 6-9-1963 ರಲ್ಲಿ ನಿಧನರಾದರು. ಗೋವಿಂದ ಪೈ ಅವರ ಕೈ ಬರಹದಲ್ಲಿ ಕವಿತೆ ತಾಯೆ ಬಾರ ಮೊಗವ ತೋರ.
More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ