ಸುಳ್ಳು ಹೇಳುವುದರಲ್ಲಿ ಸಿದ್ದರಾಮ್ಯನಿಗೆ ನೊಬೆಲ್ ಪ್ರಶಸ್ತಿ ಸಿಗುತ್ತೆ – ಸಚಿವ ಈಶ್ವರಪ್ಪ

Team Newsnap
1 Min Read
Image source : google

ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಇಟ್ಟು ಡಿಕೆಶಿ- ಸಿದ್ಧರಾಮಯ್ಯಗೂ ಪಂದ್ಯ ನಡೆದರೆ
ಸಿದ್ದರಾಮಯ್ಯ ಗ್ಯಾರಂಟಿ ಗೆಲ್ಲುತ್ತಾರೆ ಸಚಿವ ಈಶ್ವರಪ್ಪ ಭಾನುವಾರ ಗೇಲಿ ಮಾಡಿದರು.

ಮಂಡ್ಯದಲ್ಲಿ ಜನ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ , ಕಾಂಗ್ರೆಸ್ಸಿನವರು ದೊಡ್ಡ ಸುಳ್ಳುಗಾರರು. ಅದಕ್ಕೆ ಉದಾಹರಣೆ ಎಂದರೆ ಕೊವಿಡ್ ಬಂದಾಗ ಮೋದಿ ಸರ್ಕಾರ ಹಳ್ಳಿಗಳಿಗೆ ವ್ಯಾಕ್ಸಿನ್ ಕೊಟ್ಟರು. ಆವಾಗ ಈ
ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಆ ವ್ಯಾಕ್ಸಿನ್ ಮುಟ್ಟಬೇಡಿ ಅದು ಮೋದಿದೂ ಎಂದು ಗೇಲಿ ಮಾಡಿದರು.

ಆ ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಗಂಡಸ್ಥನ ಹೋಗಿಬಿಡುತ್ತೆ ಎಂದು ಅಪಪ್ರಚಾರ ಮಾಡಿದರು. ಕೊನೆಗೆ ಜನರೇ ಜಾಗೃತಿಯಾಗಿ ವ್ಯಾಕ್ಸಿನ್ ಹಾಕಿಸಿಕೊಂಡರು.ಆಗ ಇದೇ ಸಿದ್ದು, ಡಿಕೆ ಬೆಂಬಲಿಗರು ಕದ್ದು ಬಂದು ಲಸಿಕೆ ಪಡೆದರು ಎಂದರು .

ಕೊವಿಡ್ ವಿರುದ್ಧ ಹೋರಾಟದಲ್ಲಿ ಭಾರತ ಮೊದಲ ಸ್ಥಾನ.ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನ.
ನೂರು ಕೋಟಿ ಲಸಿಕೆ ಗುರಿಯಾಗಿತ್ತಿದ್ದಂತೆ ಪ್ರಪಂಚ ಮೋದಿಯವರಿಗೆ ಅಭಿನಂದನೆ ಸಲ್ಲಿಸಿತು.ಕಾಂಗ್ರೆಸ್ ನಾಯಕರು ಇವರು ಸುಳ್ಳು ಹೇಳುತ್ತಿದ್ದಾರೆಂದು ಟೀಕಿಸಿದರು

ಮೋದಿಯವರನ್ನು ವಿಶ್ವ ನಾಯಕ ಎಂದು ಪ್ರಪಂಚ ಒಪ್ಪಿಕೊಂಡಿದೆ. ಕಾಂಗ್ರೆಸ್ಸಿನವರು ಕೆಟ್ಟ ಪದ ಬಳಸಿ ಏಕವಚನದಲ್ಲಿ ಮೋದಿ ಬಗ್ಗೆ ಮಾತನಾಡುತ್ತಾರೆ. ಇವರುಗಳು ಹಂಗೆ ಹಿಂಗೆ ಸಾಯುವುದಿಲ್ಲ ನೋಡ್ತಾ ಇರಿ ಎಂದು ಈಶ್ವರಪ್ಪ ಕಟುವಾಗಿ ಟೀಕಿಸಿದರು

ಬಡವರು, ಸೈನಿಕರು ಮೋದಿ ಅವರನ್ನು ಮೆಚ್ಚಿದ್ದಾರೆ. ಇವರು ಏಕವಚನದಲ್ಲಿ ಮೋದಿಗೆ ಮಾತನಾಡುತ್ತಾರೆ. ಸುಳ್ಳು ಹೇಳಿ ದೇಶವನ್ನ ದಾರಿ ತಪ್ಪಿಸುತ್ತಿದ್ದಾರೆ. ಇವತ್ತು ದೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ದೇವೇಗೌಡರ ರೂಪದಲ್ಲಿ ಪ್ರಾದೇಶಿಕ ಪಕ್ಷವಾಗುತ್ತಿದೆ.

ನಮ್ಮ ವೇದಿಕೆಯಲ್ಲಿ ಕುಳಿತ ಅನೇಕರು ಮೊದಲು ಬಿಜೆಪಿಯಲ್ಲಿರಲಿಲ್ಲ. ದರಿದ್ರ ಕಾಂಗ್ರೆಸ್ಸು ಬೇಡ, ದರಿದ್ರ ಜೆಡಿಎಸ್ ಬೇಡ ಎಂದು ಬಿಜೆಪಿಗೆ ಬಂದಿದ್ದೀರಾ ಎಂದರು.

Share This Article
Leave a comment