December 2, 2021

Newsnap Kannada

The World at your finger tips!

ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೆ ಪಕ್ಷ ನಿಷ್ಠೆ- ವ್ಯಕ್ತಿ ನಿಷ್ಠೆಯೂ ಇಲ್ಲ – ಸಚಿವೆ ಶೋಭಾ

Spread the love

ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೆ ಪಕ್ಷ ನಿಷ್ಠೆನೂ ಇಲ್ಲ ವ್ಯಕ್ತಿ ನಿಷ್ಠೆಯೂ ಇಲ್ಲ. ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು

ಮಂಡ್ಯ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವೆ ರಾಜಕಾರಣದಲ್ಲಿ ವ್ಯಕ್ತಿ ಅಥವಾ ಪಕ್ಷ ನಿಷ್ಠೆ ಇರಬೇಕು.
ಹೆಚ್ಚಿನವರಿಗೆ ಪಕ್ಷ ನಿಷ್ಠೆ ಕೆಲವರಿಗೆ ವ್ಯಕ್ತಿ ನಿಷ್ಠೆ ಇರುತ್ತದೆ. ಆದರೆ ಈ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೆ ಪಕ್ಷ ನಿಷ್ಠೆನೂ ಇಲ್ಲ ವ್ಯಕ್ತಿ ನಿಷ್ಠೆಯೂ ಇಲ್ಲ. ಎಂದು ಕುಟುಕಿದರು

ಪಕ್ಷ ನಿಷ್ಠೆ ಇದ್ದಿದ್ರೆ ಕಾಂಗ್ರೆಸ್ ಬಿಟ್ಟು ಸೋಮಶೇಖರ್ ಬಳಿ ಬರುತ್ತಿರಲಿಲ್ಲ. ಇಲ್ಲ ವ್ಯಕ್ತಿ ನಿಷ್ಠೆ ಇದ್ದಿದ್ರೆ ಸೋಮಶೇಖರ್ ಬಿಟ್ಟು ಹೋಗ್ತಾ ಇರಲಿಲ್ಲ.ಎರಡು ಇಲ್ಲದ ವ್ಯಕ್ತಿಯನ್ನ ಮಂಡ್ಯದ ಜನ ನಂಬುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.

ಲಾಭಕ್ಕಾಗಿ ಬರುವ ಅವಕಾಶವಾದಿಗಳನ್ನು ಮಂಡ್ಯದ ಜನ ಹತ್ತಿರ ಸೇರಿಸಬಾರದು.
ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ವಿರುದ್ಧ ಶೋಭ ಕರಂದ್ಲಾಜೆಯೂ ಕಿಡಿಕಾರಿದರು.

error: Content is protected !!