ಭೂ
ತಾಯ
ಒಡಲು
ಸುಡುತಿರೇ
ಬಿಸಿಲ ಬೇಗೆ
ಕೃಪೆ ತೋರಿ ನೀನು
ಬಾರೋ ವರುಣ ದೇವಾ
ಸುರಿಸು ಸೋನೆ ಹನಿಯ
ಉಸಿರು ನೀಡುವ ಹಸಿರು
ತೊಟ್ಟು ಕಂಗೊಳಿಸಲಿ ಧರೆಯು
ನಿತ್ಯ ನಯನ ಮೋಹಕ ನೋಟವು
ನಿನ್ನಾಗಮನ ತರಲಿ ಹರುಷವು
ಜೀವ ಸಂಕುಲದಿ ಮಿಂಚಿನ ಸಂಚಾರವು
ಅನ್ನದಾತನ ಮುಖದಿ ಮೂಡಲಿ ಹೂ ನಗು
ಬೆಳೆಯಲಿ ಧವಸ ಧಾನ್ಯ ನೀಗಲಿ ಹಸಿವು
ಉಕ್ಕಿ ಹರಿಯಲಿ ಜಲಮೂಲ ನಿನ್ನಯ ವರವು.
More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ