ದೊಡ್ಡಪತ್ರೆ ( Mexican mint plant)

Team Newsnap
5 Min Read

ನಮ್ಮ ಹಿರಿಯರು ಹೇಳುವ ಸಾಮಾನ್ಯ ಮಾತು ಎಂದರೆ “ಹಿತ್ತಲ ಗಿಡ ಮದ್ದಲ್ಲ” ಎನ್ನುವುದು ಎಷ್ಟು ನಿಜ ಎಂದೆನಿಸುತ್ತದೆ ಅಲ್ಲವೇ ?

ಹಿತ್ತಲಗಿಡ ಮದ್ದಲ್ಲ ಎನ್ನುವ ಹಾಗೆ ಮನೆಯ ಅಂಗಳದಲ್ಲಿ ಸಿಗುವ ಅನೇಕ ಎಲೆಗಳು ನಮ್ಮ ಆರೋಗ್ಯ ರಕ್ಷಣೆ ಮಾಡುತ್ತವೆ. ಅವುಗಳ ಮಹತ್ವ ಮತ್ತು ಬಳಕೆ ಲಾಭಗಳು ಕೆಲವೊಮ್ಮೆ ಅರಿವಿಗೆ ಬರುವುದಿಲ್ಲ.

WhatsApp Image 2022 02 21 at 11.25.48 PM

ದೊಡ್ಡಪತ್ರೆ (Dodda Patre) ಬಗ್ಗೆ ನಿಮಗೆ ಏನು ಗೊತ್ತು ? ಪ್ರಯೋಜನ ಏನು ? :

1) ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಮೆಯಾಗುವುದು.

2) . ಪುದೀನಾ ಎಲೆಗಳು ನಮ್ಮ ಆರೋಗ್ಯ ಕಾಪಾಡುವಲ್ಲಿ ಆಯುರ್ವೇದ ಪದ್ಧತಿಯಲ್ಲಿ ಸಹಕಾರಿಯಾಗಿದೆ. ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನ.

3) ಮನೆಯ ಅಂಗಳದಲ್ಲಿ ಬೆಳೆಯುವ ದೊಡ್ಡಪತ್ರೆ ಕೂಡ ರೋಗನಿರೋಧಕ ಶಕ್ತಿ ಹೆಚ್ಚಳ ಮಾಡಿ ನಮ್ಮನ್ನು ಹಲವಾರು ರೋಗಗಳಿಂದ ರಕ್ಷಣೆ ಮಾಡಲು ಸಹಾಯಕಾರಿ. ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯುತ್ತೇವೆ. ಜ್ವರ , ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು.

4) ಮನೆಗಳಲ್ಲಿ ಹೂವಿನ ಕುಂಡದಲ್ಲಿಯೂ ಇದನ್ನು ಬೆಳೆಸಬಹಹುದು. ಎಲೆಗಳು ಹಸಿರಾಗಿ ದಪ್ಪವಾಗಿರುತ್ತದೆ. ಎಲೆಯಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಔಷಧೀಯ ಗುಣವಿದೆ. ದೊಡ್ಡಪತ್ರೆಯಿಂದ ಕಾಡುತ್ತಿದ್ದ ಮಹಾಮಾರಿ ಕಾಲರಾ ರೋಗವನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆಯಂತೆ.

5) ಅನೇಕ ಆರೋಗ್ಯಕರ ದೊಡ್ಡಪತ್ರೆಯ ಆರೋಗ್ಯಕರ ಪ್ರಯೋಜನಗಳು ದೊಡ್ಡಪತ್ರೆ ಹಚ್ಚ ಹಸಿರಿನಿಂದ ಕೂಡಿದ, ದಪ್ಪವಾದ ಎಲೆಗಳನ್ನು ಹೊಂದಿರುವ ಇದು ಘಾಡವಾದ ವಾಸನೆನ್ನು ಹೊಂದಿದೆ.

6) ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರು ಕೂಡ ಈ ಎಲೆಯನ್ನು ಬಳಸೋದ್ರಿಂದ ನೆಗಡಿ, ಕಫ, ತಲೆಭಾರ, ಅಜೀರ್ಣ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಕೂಡ ಇದನ್ನು ನೀಡುತ್ತಾರೆ.

7) ದೊಡ್ಡಪತ್ರೆ ಎಲೆಗಳಿಂದ ನಾನಾ ಖಾದ್ಯಗಳನ್ನು ಕೂಡ ಸಿದ್ಧಪಡಿಸಬಹುದು. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ದೊಡ್ಡಪತ್ರೆ ಎಲೆಗಳಿಂದ ಕೆಲವು ಖಾದ್ಯಗಳನ್ನು ತಯಾರಿಸುತ್ತಾರೆ. ಬಾಯಿಗೆ ರುಚಿಸೋ ಜೊತೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

8) ದೊಡ್ಡಪತ್ರೆಯಿಂದ ತಂಬುಳಿ, ದೋಸೆ, ಚಟ್ನಿ, ಬೋಂಡಾ,ಕಷಾಯ ಹೀಗೆ ನಾನಾ ವಿಧದ ಅಡುಗೆಯಲ್ಲಿ ಬಳಸುತ್ತಾರೆ.

ಪ್ರಯೋಜನಗಳು ಹೀಗಿವೆ :

1.ಚರ್ಮದ ಸೋಂಕು ಕಡಿಮೆ ಮಾಡಲು: ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು. ಮೈ ಮೇಲೆ ಪಿತ್ತದ ಗಂದೆಗಳು ಎದ್ದಾಗ ದೊಡ್ಡಪತ್ರೆಯ ಎಲೆಯ ರಸವನ್ನು ಸೇವಿಸುವುದು ಮತ್ತು ರಸವನ್ನು ಮೈ ಗೆ ಹಚ್ಚಿಕೊಳ್ಳುವುದರಿಂದ ಗಂದೆ ಕಡಿಮೆಯಾಗುತ್ತದೆ.

2.ಜೀರ್ಣ ಶಕ್ತಿ ಹೆಚ್ಚಳ: ಬಹುತೇಕರಲ್ಲಿ ಜೀರ್ಣ ಶಕ್ತಿಯ ಸಮಸ್ಯೆ ಕಾಡುತ್ತಿರುತ್ತದೆ. ಹೀಗಾಗಿ ಸುಲಭವಾಗಿ ಜೀರ್ಣ ಶಕ್ತಿ ಹೆಚ್ಚಳ ಮಾಡಿಕೊಳ್ಳಲು ಪ್ರತಿನಿತ್ಯ ದೊಡ್ಡಪತ್ರೆಯ ಎಲೆಯನ್ನು ಉಪ್ಪಿನೊಂದಿಗೆ ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ.

3.ಕಟ್ಟಿದ ಮೂಗಿನಿಂದ ನಿವಾರಣೆ: ಒಮ್ಮೆ ಮೂಗು ಕಟ್ಟಿದ್ದು ಅಂದರೆ ಬಹುತೇಕರಿಗೆ ಉಸಿರಾಡಲು ಕಷ್ಟ.. ಇಂತಹ ಸಂದರ್ಭದಲ್ಲಿ ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ ಮೂಗಿನಿಂದ ನಿವಾರಣೆಯನ್ನು ಹೊಂದಬಹುದು.

  1. ಗ್ಯಾಸ್ಟ್ರಿಕ್‌ ತಡೆಯುತ್ತದೆ:
    ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕಾಡುವ ಸಮಸ್ಯೆಯೆಂದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆ. ನಿಯಮಿತವಾಗಿ ದೊಡ್ಡಪತ್ರೆ ಎಲೆಯನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಬಹುದು.ದೇಹದಿಂದ ವಿಷವನ್ನು ಹೊರ ಹಾಕುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ.

5. ಮಕ್ಕಳ ಜ್ವರ ನಿವಾರಣೆ: ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಕಡಿಮೆಯಾಗುತ್ತದೆ .

  1. ಕಣ್ಣಿನ ಉರಿ ಕಡಿಮೆ ಮಾಡಲು: ದೊಡ್ಡಪತ್ರೆ ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆ ಸೇರಿಸಿ ಇದನ್ನು ನಿತ್ಯ ತಲೆಗೆ ಹಾರೊಂದಿಗೆ ಕಣ್ಣುರಿ ಕಡಿಮೆಯಾಗುತ್ತದೆ.
  2. ಭೇದಿ ನಿಯಂತ್ರಣಕ್ಕೆ: ದೊಡ್ಡಪತ್ರೆ ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಜೇನು ಅಥವಾ ಕಲ್ಲುಸಕ್ಕರೆಯನ್ನು ಸೇರಿಸಿ ದಿನಕ್ಕೆ 3 ಬಾರಿ ಕುಡಿಯುವುದರಿಂದ ಭೇದಿಯು ಕಡಿಮೆಯಾಗುತ್ತದೆ.
  3. ಕಫ ನಿವಾರಣೆಗೆ: ದೊಡ್ಡಪತ್ರೆಯ ಹಸಿ ಎಲೆಯ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ.

9. ಪಿತ್ತದ ಸಮಸ್ಯೆ ದೂರ ಮಾಡಲು: ದೊಡ್ಡಪತ್ರೆಯ ಎಲೆಗಳನ್ನು, ಒಂದೆರಡು ಕರಿಮೆಣಸು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಜಜ್ಜಿ ರಸವನ್ನು ತೆಗೆಯಬೇಕು. ಈ ರಸವನ್ನು ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಪಿತ್ತ ಮತ್ತು ಪಿತ್ತದ ಸಮಸ್ಯೆಗಳಿಂದ ಸುಲಭವಾಗಿ ದೂರವಾಗಬಹುದು.

10 ದೊಡ್ಡಪತ್ರೆ ಎಲೆಯ ರಸ ತೆಗೆದು ಒಂದು ವಾರದ ವರೆಗೆ ಪ್ರತಿದಿನ ಸೇವಿಸುವುದರಿಂದ ಹಳದಿ ಕಾಮಾಲೆ ರೋಗ
ಕಡಿಮೆಯಾಗುತ್ತದೆ.

11 ದೊಡ್ಡಪತ್ರೆಯ ರಸವನ್ನು ಮೊಸರಿನಲ್ಲಿ ಬೆರೆಸಿ ಮುಖ, ಕೈಕಾಲುಗಳಿಗೆ ಹಚ್ಚಿಕೊಳ್ಳವುದರಿಂದ ಕಾಂತಿಯುಕ್ತವಾಗುತ್ತದೆ.

ಒಟ್ಟಿನಲ್ಲಿ ಆರೋಗ್ಯದ ಗಣಿಯಾಗಿರುವ ಬಹುಉಪಯೋಗಿ ದೊಡ್ಡಪತ್ರೆಯನ್ನು ಮನೆಯಲ್ಲಿ pot ಗಳಲ್ಲಿ ಬೆಳೆಸುವುದರಿಂದ ಸ್ವಲ್ಪ ಮಟ್ಟಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

TAMBULI

ದೊಡ್ಡಪತ್ರೆ ತಂಬುಳಿ ಮಾಡುವುದು ಹೇಗೆ ? ವಿಧಾನ:

  • 15-20 ದೊಡ್ಡಪತ್ರೆ ಎಲೆಗಳು
  • 1/2 ಟೀಸ್ಪೂನ್ ಜೀರಿಗೆ
  • 1/2 ಟೀಸ್ಪೂನ್ ಕಾಳು ಮೆಣಸು.
  • 1/2 ಕಪ್ ತೆಂಗಿನತುರಿ.
  • 1 ಕಪ್ ಮೊಸರು.
  • 1/2 ಒಣ ಮೆಣಸಿನಕಾಯಿ.
  • 2 ಟೀಸ್ಪೂನ್ ಅಡುಗೆ ಎಣ್ಣೆ.
  • 1/4 ಟೀಸ್ಪೂನ್ ಸಾಸಿವೆ.
  • ಉಪ್ಪು ರುಚಿಗೆ ತಕ್ಕಷ್ಟು.

ದೊಡ್ಡಪತ್ರೆ ಎಲೆಗಳನ್ನು ತೊಳೆದು, ಬಟ್ಟೆಯಲ್ಲಿ ಒರಸಿ, ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. ಜೀರಿಗೆ ಸಿಡಿದ ಕೂಡಲೇ ದೊಡ್ಡಪತ್ರೆ ಹಾಕಿ.

ಸೊಪ್ಪು ಬಾಡಿದ ಕೂಡಲೇ ತೆಂಗಿನತುರಿ ಹಾಕಿ stove off ಮಾಡಿ. ಹುರಿದ ಎಲೆ, ಜೀರಿಗೆ ಮತ್ತು ಕಾಳುಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ತೆಂಗಿನ ತುರಿಯೊಂದಿಗೆ ರುಬ್ಬಿ. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ.

The leaves have many traditional medicinal uses, especially for the treatment of coughs, sore throats, nasal congestion, infections, rheumatism, fever, chronic asthma, hiccup, bronchitis, convulsions, epilepsy, skin ulcerations, insect bite, skin allergy, wounds and diarrheic. Also it helps in cancer prevention, kidney health, regulating digestion and to improve liver health. You can read more about medicinal uses at the end of this article. Now let us get on to the collection of recipes from Doddapathre leaves.

Share This Article
Leave a comment