ಮೈಸೂರು ಪ್ಯಾಲೇಸ್‍ನಲ್ಲಿ ನಮಾಜ್ ಪ್ರವಾಸಿ ಮುಸ್ಲಿಂಮರು

Team Newsnap
1 Min Read

ರಾಜ್ಯದಲ್ಲಿ ಹಿಜಬ್ – ಕೇಸರಿ ಶಾಲು ಸಂಘರ್ಷ ನಡುವೆಯೇ ಮೈಸೂರು (Mysore) ಅರಮನೆಯಲ್ಲೇ ಪ್ರವಾಸಿಗರು ನಮಾಜ್ ಮಾಡಿದ ಪ್ರಸಂಗ ನಡೆದಿದೆ.

Mysore Palace

ಪ್ರವಾಸಿಗರು ಗುಜರಾತ್‍ನಿಂದ ಅರಮನೆಗೆ ಬಂದಿದ್ದರು. ಅಲ್ಲದೆ ಅರಮನೆಯಲ್ಲೇ ಕೈ-ಕಾಲು ತೊಳೆದುಕೊಂಡು ನಮಾಜ್ ಕುಳಿತರು.

ತಲೆಗೆ ಟೋಪಿ ಬಟ್ಟೆ ಕಟ್ಟಿಕೊಂಡು 10 ಜನರ ತಂಡ ನಮಾಜ್ ಮಾಡಿದೆ. ನಮಾಜ್ ಮಾಡಿದ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.

ಇಂದು ರಾಜ್ಯದ್ಯಂತ ಪ್ರಾಕ್ಟಿಕಲ್ ಪರೀಕ್ಷೆ ನಡೆದಿದೆ, ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ನಿನ್ನೆಯೇ ಮಹತ್ವದ ಆದೆಶವೊಂದನ್ನು ಹೊರಡಿಸಿತ್ತು. ಹಿಜಬ್ ಧರಿಸಿ ಬಂದರೆ ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ರಾಜ್ಯದ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿತ್ತು. ಆದರೂ ಕೆಲವೆಡೆ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಬಂದು ಕಿರಿಕ್ ಮಾಡಿದ್ದಾರೆ.

Share This Article
Leave a comment