ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ಕುಡಿಸಬೇಡಿ : ಸದ್ಗುರು ಜಗ್ಗಿ ವಾಸುದೇವ್

Team Newsnap
1 Min Read

ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು ಎಂದು ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.

ಶಾಲೆಗಳಲ್ಲಿ ಡ್ರೆಸ್ ಕೋಡ್‍ನಲ್ಲಿ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನೀವು ಧರಿಸುವ ಹಿಜಬ್, ಬುರ್ಖಾ, ಸೀರೆ ಮತ್ತು ನೀವು ತಿನ್ನುವ ಖಿಚಡಿ ಅಥವಾ ಬಿರಿಯಾನಿ ಎಲ್ಲವೂ ಮಣ್ಣಿನಿಂದ ಬರುತ್ತದೆ. ಆದ್ದರಿಂದ ಮಣ್ಣಿಗೆ ಅದ್ಭುತವಾಗಿ ಒಂದುಗೂಡಿಸುವ ಶಕ್ತಿಯಿದೆ. ನಮ್ಮನ್ನು ಒಟ್ಟಿಗೆ ಸೇರಿಸುವ ಜೀವನದ ಅಂಶಗಳನ್ನು ನೋಡುವ ಬದಲು, ನಾವು ನಿರಂತರವಾಗಿ ನಮ್ಮನ್ನು ವಿಭಜಿಸುವ ಅಂಶಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ.

ಮಣ್ಣು ಸಾರ್ವತ್ರಿಕ ವಸ್ತುವಾಗಿದೆ. ನೀವು ಯಾರು, ಯಾವ ಧರ್ಮ, ಜನಾಂಗ, ರಾಷ್ಟ್ರೀಯತೆಗೆ ಸೇರಿದವರು ಎಂಬುದು ಮುಖ್ಯವಲ್ಲ. ನೀವು ಮಣ್ಣಿನಿಂದ ಬಂದು, ಮರಳಿ ಮಣ್ಣಿಗೆ ಹೋಗುತ್ತೀರಾ. ಆದ್ದರಿಂದ ಇದು ಮಣ್ಣು ಒಂದು ಪ್ರಮುಖ ಒಗ್ಗೂಡಿಸುವ ಮೂಲವಾಗಿದೆ ಎಂದರು.

ಹಿಂದಿನ ಪೀಳಿಗೆಯವರು ಬದುಕಿದ ಪೂರ್ವಾಗ್ರಹಗಳೊಂದಿಗೆ ಮಕ್ಕಳು ಬೆಳೆಸಬಾರದು. ನೀವು ಶಾಲೆಗಳಲ್ಲಿದ್ದಾಗ ನಿಮ್ಮನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಮಕ್ಕಳಿಗೆ ನೀವು ಹಿಜಬ್ ಹೆಸರಿನಲ್ಲಿ ಭಜನೆಯ ವಿಷವನ್ನು ತಿನ್ನಿಸಬಾರದು ಎಂದು ಹೇಳಿದ್ದಾರೆ.

Share This Article
Leave a comment