ಚಿತ್ತದ ಸುತ್ತ ಸುಳಿಯುತ್ತಿರುವ ಸಣ್ಣ
ಚಿಟ್ಟೆಯನ್ನ ನಿರ್ಲಕ್ಷಿಸಿ. ಪಾಪ ಎಂದು
ಮೈ-ಮರೆತೊಡೆ. ಸಣ್ಣ-ಕೀಟವೇ
ಸೊಳ್ಳೆಯಾಗಿ ಮನುಜನ ಬೆವರವಾಸನೆ
ಗ್ರಹಿಸಿ ಕಣ್ಣಿಗೆ ಕಾಣಿಸದಂತೆ..
ನೋವು ಅರಿವಿಗೆ ಬಾರದಂತೆ..
ನೆತ್ತರು ಹೀರವ ಕೀಟ..
ಗೂಡು-ಕಟ್ಟುವ ಗೋಜಿಗವಿಲ್ಲ
ಗಿಡ-ಮರಗಳಡೆಲೆವ ಪರಿಪಾಟಲಿಲ್ಲ.
ಸಂದಿ-ಗೊಂದಿಗಳಲಿ..
ತಗ್ಗು ಕೊಳಚೆಗಳಲಿ..
ನಿಂತ ತಿಳಿನೀರ ಕುಣಿಗಳಲಿ. ನೀರ
ಮೇಲಣ. ನೀರೊಳ. ಗಾಳಿಯೊಳ
ನಾಲಕ್ಕು ಹಂತದ ಜೀವನ ಚಕ್ರದಿ
ಸಂತಾನೋತ್ಪತ್ತಿಯ ಉತ್ತಾನ..
ತಿಳಿನೀರ ಮೇಲಣ ಬೆಳ್ಳಿ ಮೊಟ್ಟೆಗಳ
ಖಣಜ ಸ್ಕಲಿಸಿ ಕಪ್ಪಾಗಿ ದಿನ ಕಳೆಯಲು
ಮಿಟುಕು ಹುಳವಾಗಿ ಸಣ್ಣ ರೆಕ್ಕೆಗಳ
ಕೀಟವಾಗಿ ರೆಕ್ಕೆಗಳುದುರಿ ನೆತ್ತರು
ಹೀರುವ ಪರವಾಲಂಬಿ ರಕ್ತ-ಭಕ್ಷಾಸುರ.
ಸೊಳ್ಳೆಗಳ ನಿಗ್ರಹಿಸಲು ಹೊಗೆಯ
ಬುಗ್ಗೆಗೆ ಮೊರೆ-ಹೋಗುವ ಮನುಜ
ಕಾರ್ಬನ್ ಯುಕ್ತ ಹೊಗೆಯ ನಿಗ್ರಾಣಿಸಿ
ಶ್ವಾಸಕೋಶ ಸಂಬಂಧಿತ ದುಗುಡವ
ಭರಿಸುವ ಮನುಜ..
….✍️ ಸುರೇಶ ಫ ಮಲ್ಲಾಡದ..
ರಟ್ಟೀಹಳ್ಳಿ/ಸರ್ವಜ್ಞನ-ಮಾಸೂರು.
ಹಾವೇರಿ..
- ರಾಜ್ಯದ ಹವಾಮಾನ ವರದಿ (Weather Report) 22-05-2022
- ಮುಂಬೈ ಇಂಡಿಯನ್ ಗೆ ರೋಚಕ ಗೆಲುವು – RCB ಸೆಮಿಫೈನಲ್ಸ್ ಗೆ DC ತಂಡ ಟೂರ್ನಿಯಿಂದ ಹೊರಕ್ಕೆ
- ಲೀಯಾ – ಪೀಟರ್ ‘ ಬರ್ತ್ ಡೇ’ ಶಾಪಿಂಗ್ಗೆ ಹೋಗಿದ್ದ ಪ್ರೇಮಿಗಳು : ಯುವಕನಿಂದ ಮಾಹಿತಿ
- ದೇಶದ ಜನತೆಗೆ ಸಿಹಿ ಸುದ್ದಿ:ಪೆಟ್ರೋಲ್, ಗ್ಯಾಸ್, ಸಿಮೆಂಟ್, ಗೊಬ್ಬರ, ಪ್ಲಾಸ್ಟಿಕ್, ಉಕ್ಕು ದರ ಇಳಿಕೆ
- ಕೇಂದ್ರ ಸರ್ಕಾರದಿಂದ ಅಬಕಾರಿ ಸುಂಕ ಇಳಿಕೆ! ಪೆಟ್ರೋಲ್ ಪ್ರತಿ ಲೀಟರ್ ಗೆ ₹ 8 ಡೀಸೆಲ್ ₹ 6 ಕಡಿತ
More Stories
ನೇರ ನುಡಿ ಸಾಹಿತಿ ಡಿಎಸ್ ನಾಗಭೂಷಣ್ ನಿಧನ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಪದಚ್ಯುತಿ
ಕನ್ನಡ ಕವಿಕಣ್ಣಿನ ಯುಗಾದಿ