ಲೊ ಬ್ಲಡ್ ಪ್ರೆಷರ್ ಮುನ್ನೆಚ್ಚರಿಕೆ ಕ್ರಮಗಳು | Low Blood Pressure

Team Newsnap
5 Min Read
Blood pressure

ಹೆಚ್ಚು ಆಹಾರ ಸೇವನೆಯು ಕಡಿಮೆ ರಕ್ತದೊತ್ತಡಕ್ಕೆ (Low Blood Pressure) ಕಾರಣವಾಗುತ್ತದೆ ಏಕೆಂದರೆ ನಮ್ಮ ದೇಹವು ಜೀರ್ಣಿಸಿಕೊಳ್ಳಲು ಹೆಚ್ಚು ಶಕ್ತಿಯನ್ನು ಬಳಸುತ್ತದೆ.

ಸರಿಯಾದ ಆಹಾರ ಮತ್ತು ನಿಯಮಿತ ವ್ಯಾಯಾಮವು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ನಮಗೆ ಸಹಾಯ ಮಾಡುತ್ತದೆ.

Blood pressure
Blood pressure

ರಕ್ತದೊತ್ತಡ ತೀರಾ ಕಡಿಮೆಯಾಗಿ ಮೂರ್ಛೆ ಹೋಗುವುದು , ತಲೆ ತಿರುಗುವಿಕೆ ಮತ್ತು ದೃಷ್ಟಿ ಮಂದವಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಹೃದಯಾಘಾತ (Heart attacks) ಅಥವಾ ಪಾರ್ಶ್ವವಾಯುವಿಗೆ (Strokes) ಕಾರಣವಾಗಬಹುದು, ಹೃದಯ ಮತ್ತು ಮೆದುಳಿಗೆ( Heart and Brain) ದೀರ್ಘಕಾಲದ ಹಾನಿ ಉಂಟುಮಾಡಬಹುದು ಅಥವಾ ಇದು ಕೆಲವೊಮ್ಮೆ ಸಾವಿಗೆ (Death) ಕಾರಣವಾಗಲಿದೆ .

ಗಾಬರಿಯಾಗುವ ಅಗತ್ಯವಿಲ್ಲ. ರಕ್ತದೊತ್ತಡವು ತೀರಾ ಕಡಿಮೆ ಆದರೆ ಅದನ್ನು ಹೆಚ್ಚಿಸಿಕೊಳ್ಳಲು ಯಾವ ಯಾವ ಆಹಾರ ಪದಾರ್ಥಗಳನ್ನು ನೀವು ಸೇವಿಸಬೇಕು ಎಂದು ನೀವು ಸುಲಭವಾಗಿ ತಿಳಿಯಬಹುದು. ರಕ್ತದೊತ್ತಡ – ಒತ್ತಡದ ಜಗತ್ತಿನಲ್ಲಿ ರಕ್ತಕ್ಕೂ ಒತ್ತಡವಿದೆ! | Blood Pressure.

ಆಹಾರ ಸೇವಿಸುವಾಗ ಈ 8 ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟಕ್ಕೆ ಹೆಚ್ಚಿಸಲು ಸುಲಭವಾಗುತ್ತದೆ.

 1. ಸೀಮಿತ ಆಹಾರ ಸೇವನೆ
  • ಬೆಳಗ್ಗಿನ ಉಪಾಹಾರ ಬಿಟ್ಟರೆ ಈ ಸಮಸ್ಯೆ ಉಂಟಾಗುತ್ತದೆ .ಊಟ ಬಿಟ್ಟು ಬಿಡುವುದು ನಂತರ ಸರಿದೂಗಿಸಲು ಅತಿಯಾಗಿ ತಿನ್ನುವುದಕ್ಕೆ ಕಾರಣವಾಗಬಹುದು. ಸೇವಿಸುವ ಆಹಾರದ ಒಟ್ಟಾರೆ ಪ್ರಮಾಣವನ್ನು ನೀವು ಕಡಿಮೆ ಮಾಡದಿದ್ದರೂ, ದಿನವಿಡೀ ಸಣ್ಣ ಪ್ರಮಾಣದ ಊಟವು ನಿಮ್ಮ ಜೀರ್ಣಕ್ರಿಯೆ ಮತ್ತು ರಕ್ತದ ಹರಿವು ಎರಡಕ್ಕೂ ಆರೋಗ್ಯಕರವಾಗಿರುತ್ತದೆ. ಊಟಕ್ಕೆ ಕುಳಿತಾಗ ಅತಿಯಾಗಿ ತಿಂದರೆ ಅದನ್ನು ಜೀರ್ಣಿಸಿಕೊಳ್ಳಲು ನಿಮ್ಮ ದೇಹವು ಹೆಚ್ಚಿನ ಶಕ್ತಿ ತೆಗೆದುಕೊಳ್ಳುತ್ತದೆ, ಇದು ನಿಮ್ಮ ರಕ್ತದೊತ್ತಡ ಕುಸಿತಕ್ಕೆ ಕಾರಣವಾಗಲಿದೆ.
 2. ಹೆಚ್ಚು ನಿಯಮಿತವಾಗಿ ನೀರನ್ನು ಸೇವಿಸುವುದು
  • ಕುಡಿಯುವ ನೀರು ಅತ್ಯುತ್ತಮ ಮನೆಮದ್ದು .ಬಿಸಿ ವಾತಾವರಣದಲ್ಲಿ ಅಥವಾ ವ್ಯಾಯಾಮ ಮಾಡುವಾಗ ನಿಮ್ಮ ನೀರಿನ ಸೇವನೆಯು ಹೆಚ್ಚಾಗಿರಬೇಕು . ಹೆಚ್ಚಿನ ವೈದ್ಯರು ಪ್ರತಿದಿನ ಕನಿಷ್ಠ 2 ಲೀಟರ್ (ಸರಿ ಸುಮಾರು ಎಂಟು ಗ್ಲಾಸ್) ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ.
 3. ಉಪ್ಪಿನ ಅಂಶ ಇರುವ ಆಹಾರ ಸೇವನೆ
  • ಸೇವಿಸುವ ಆಹಾರದಲ್ಲಿ ಹೆಚ್ಚಿನ ಉಪ್ಪಿನಾಂಶ ಇದ್ದರೇ ರಕ್ತದೊತ್ತಡ ಹೆಚ್ಚುವುದು.ನಿಮ್ಮ ಆದ್ಯತೆಗೆ ಅನುಗುಣವಾಗಿ ನಿಮ್ಮ ಊಟಕ್ಕೆ ನೀವು ಉಪ್ಪನ್ನು ಸೇರುವುದು ಉತ್ತಮ.
 4. ಹೆಚ್ಚಾಗಿ ವಿಟಮಿನ್ ಬಿ9 ಇರುವ ಆಹಾರ ಸೇವನೆ
  • ಬಿ9 ವಿಟಮಿನ್ ಕೊರತೆಯು ಅನೇಕ ರೋಗಲಕ್ಷಣಗಳನ್ನು ಹೊಂದಿರುತ್ತದೆ. ರಕ್ತಹೀನತೆ ಮತ್ತು ರಕ್ತದೊತ್ತಡ ಕಡಿಮೆ ಮಾಡುತ್ತದೆ.ಮೊಸರು , ಕೋಸುಗಡ್ಡೆ , ದ್ವಿದಳ ಧಾನ್ಯಗಳು ಮತ್ತು ಕಡಲೆಗಳಂತಹ ಆಹಾರಗಳಲ್ಲಿ ವಿಟಮಿನ್ ಬಿ9 ಅಂಶವಿರುತ್ತದೆ .
 5. ಕಾಫಿ ಸೇವನೆಯು ಕಡಿಮೆ ರಕ್ತದೊತ್ತಡ ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಕೆಫೀನ್ ಅಂಶ ಇರುವ ಕಾಫಿ ಮತ್ತು ಚಹಾದಂತಹ ಬಿಸಿಯಾದ ಪಾನೀಯಗಲ ಸೇವನೆ ಹೃದಯ ಬಡಿತ ಹೆಚ್ಚಿಸುತ್ತದೆ. ಈ ಪರಿಣಾಮವು ಸಾಮಾನ್ಯವಾಗಿ ಅಲ್ಪಾವಧಿಯದ್ದಾಗಿರುತ್ತದೆ ಮತ್ತು ಕೆಫೀನ್ ಸೇವನೆಯು ಪ್ರತಿಯೊಬ್ಬರ ರಕ್ತದೊತ್ತಡದ ಮೇಲೆ ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.
 6. ಹೆಚ್ಚಾಗಿ ವಿಟಮಿನ್ ಬಿ12 ಇರುವ ಆಹಾರ ಸೇವನೆ
  • ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ವಿಟಮಿನ್ ಬಿ12 ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ. ವಿಟಮಿನ್ ಕೊರತೆಯು ರಕ್ತಹೀನತೆಗೆ ಪ್ರಮುಖ ಕಾರಣವಾಗಲಿದೆ. ವಿಟಮಿನ್ ಬಿ 12 ಕೊರತೆ ನಿವಾರಣೆಗೆ ದಿನವೂ ಒಂದು ಕಪ್ ಮೊಸರು, ಒಂದು ಕಪ್ ಹಾಲು, ಓಟ್ಸ್, ಓಟ್ ಮೀಲ್ ಮತ್ತು ಇತರ ಧಾನ್ಯಗಳು, ಒಂದು ಕಪ್ ಸೋಯಾ ಹಾಲು ಅಥವಾ ಬಾದಾಮಿ ಹಾಲು, ಮೊಟ್ಟೆ ಸೇವಿಸಿ. ಇವುಗಳು ನಿಮಗೆ ವಿಟಮಿನ್ ಬಿ 12 ಮತ್ತು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಒದಗಿಸುತ್ತವೆ.
 7. ಮದ್ಯ ಸೇವನೆ ಹಿಡಿತವಿರಲಿ
  • ಹೆಚ್ಚು ಮದ್ಯಪಾನ ಮಾಡುವುದರಿಂದ ನಿಮ್ಮ ರಕ್ತದ ಪ್ರಮಾಣ ಕಡಿಮೆ ಮಾಡುವ ಮೂಲಕ ನಿಮ್ಮ ರಕ್ತದೊತ್ತಡ ಕಡಿಮೆಯಾಗುವುದು. ನಿರ್ಜಲೀಕರಣ ತಪ್ಪಿಸಲು ಪ್ರತಿ ಗ್ಲಾಸ್ ಮದ್ಯ ಕುಡಿದ ನಂತರ 1 ಲೋಟ ನೀರು ಕುಡಿಯುವುದು ಉತ್ತಮ.
 8. ಕಡಿಮೆ ಕಾರ್ಬೋಹೈಡ್ರೇಟ್ ಆಹಾರ
  • ಇತರ ಆಹಾರಗಳಿಗೆ ಹೋಲಿಸಿದರೆ ಕಾರ್ಬೋಹೈಡ್ರೇಟ್‌ಗಳ ಆಹಾರ ಬಹಳ ಬೇಗನೆ ಜೀರ್ಣವಾಗುತ್ತವೆ. ಇದು ರಕ್ತದೊತ್ತಡದಲ್ಲಿ ತ್ವರಿತ ಕುಸಿತಕ್ಕೆ ಕಾರಣವಾಗುತ್ತದೆ.

Low Blood Pressure Low Blood Pressure Low Blood Pressure

fruits bag
coconut water

low Blood Pressure Precautionary measures ರಕ್ತದೊತ್ತಡದ ಮುನ್ನೆಚ್ಚರಿಕೆ ಕ್ರಮಗಳು #LowBP #Bloodpressure #Health #kannadanews #BP #bloodpressure #health #diabetes #healthylifestyle #hypertension #highbloodpressure #hearthealth #heartdisease #cholesterol #healthy #bloodpressurecontrol #weightloss #fitness #heart #wellness #nutrition #healthyliving #bloodpressuremonitor #healthcare #healthyfood #heartattack #medical #stroke #medicine #type #bloodsugar #bloodpressureproblems #doctor #cancer #obesity Low Blood Pressure Low Blood Pressure

ಲೋ ಬ್ಲಡ್‌ ಪ್ರೆಷರ್‌ (Low Blood Pressure)

ಲೋ ಬ್ಲಡ್‌ ಪ್ರೆಷರ್‌ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಮಸ್ಯೆ. ಮುಖ್ಯವಾಗಿ ಅತೀ ಕಡಿಮೆ. ರಕ್ತದೊತ್ತಡಕ್ಕೆ ಲೋ ಬಿಪಿ ಎನ್ನುತ್ತೇವೆ. ಸಾಮಾನ್ಯವಾಗಿ ಆರೋಗ್ಯವಂತರಲ್ಲಿ ರಕ್ತದೊತ್ತಡ 120/80 ಮಟ್ಟದಲ್ಲಿರುತ್ತದೆ. ಅದು 90/60ಗಿಂತ ಕಡಿಮೆ ಇದ್ದಾಗ ಅದು ಲೋ ಬಿಪಿ. ಲೋ ಬ್ಲಡ್‌ ಪ್ರೆಷರ್‌ ವಿಶೇಷವಾಗಿ ಹಿರಿಯ ವಯಸ್ಕರಲ್ಲಿ ಕಾಯಿಲೆಯ (ಹೃದಯಕ್ಕೆ, ಮೆದುಳಿಗೆ ಅಥವಾ ಇತರೆ ಅಂಗಗಳಿಗೆ ಸರಿಯಾಗಿ ರಕ್ತ ಹೋಗದಿರುವುದರ ಸೂಚಕವಾಗಿರುತ್ತದೆ) ದೀರ್ಫಕಾಲದಿಂದ ಲೋ ಬಿಪಿ ಇದ್ದು ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇದಲ್ಲಿ ಹೆಚ್ಚು ಕಡಿಮೆ ಆಗಿ ಗಂಭೀರ ಸ್ಥಿತಿ ಆಗಬಹುದು.

ಲೋ ಬ್ಲಡ್‌ ಪ್ರೆಷರ್‌ ಕಾರಣವೇನು?

WhatsApp Image 2023 08 06 at 1.58.42 AM
ವಿಪರೀತ ಬಿಸಲು

ಆತೀ ಕಡಿಮೆ ರಕ್ತದೊತ್ತಡಕ್ಕೆ ಕಾರಣ ಸ್ಪಷ್ಟವಿಲ್ಲ.

 • ವಿಪರೀತ ಬಿಸಲು
 • ಥೈರಾಯಿಡ್‌ (ಕಡಿಮೆ /ಹೆಚ್ಚಾದಾಗ)
 • ಗರ್ಭಾಧಾರಣೆ
 • ಡಯಾಬಿಟಿಸ್‌ / ಬ್ಲಡ್‌ ಶುಗರ್‌ ಕಡಿಮೆಯಾಗುವುದು
 • ಹೃದಯ ವೈಪಲ್ಯ, ಹೃದಯದ ಲಯ ತಪ್ಪಿದಾಗ, ರಕ್ತನಾಳಗಳು ವಿಶಾಲ ಅಥವಾ ಅಗಲವಾದಾಗ.
 • ಲಿವರ್‌ ಕಾಯಿಲೆ

ಇದ್ದಕ್ಕಿದ್ದಂತೆ ಬೀಪಿ ಕಡಿಮೆಯಾದರೆ ಪ್ರಾಣಾಪಾಯ ತರಬಲ್ಲದು. ತೀವ್ರ ರಕ್ತಸ್ರಾವ, ದೇಹದ ಉಷ್ಣತೆ ಅತೀ ಕಡಿಮೆ ಆದಾಗ, ಅತೀ ಉಷ್ಣವಾದಾಗ, ಹೃದಯ ಸ್ನಾಯುವಿನ ಕಾಯಿಲೆ, ಹೃದಯ ವೈಪಲ್ಯವಾದಾಗ, ತೀವ್ರ ರಕ್ತದ ಸೋಂಕು, ವಾಂತಿಯ ಕಾರಣ ಡಿಹೈಡ್ರೇಷನ್‌ ಆದಾಗ, ಅತಿಸಾರ ಅಥವಾ ಜ್ವರ. ಮದ್ಯಪಾನ, ಔಷಧ ಅಲರ್ಜಿ ಇವು ರಕ್ತದೊತ್ತಡ ಕಡಿಮೆಯಾಗಲು ಕಾರಣಗಳಾಗಿವೆ.

ಯಾರ್ಯಾರಿಗೆ ಬರಬಹುದು?

ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧ ತೆಗೆದುಕೊಳ್ಳುವವರಲ್ಲಿ ಪೋಸ್ಟುರಲ್‌ ಹೈಪೋಟೆನ್ಸನ್‌ ಅತಿ ಸಾಮಾನ್ಯ. ಗರ್ಭಧಾರಣೆ, ವಿಪರೀತ ಭಾವನ್ಮಾತಕ ವ್ಯಕ್ತಿತ್ವ, ರಕ್ತನಾಳಗಳು ಕಠಿಣವಾದಾಗ ಅಥವಾ ಡಯಾಬಿಟಿಸ್‌. ಹಿರಿಯ ವಯಸ್ಕರಲ್ಲಿ ಇದು ತೀರಾ ಕಾಡುತ್ತದೆ, ಅದರಲ್ಲೂ ವಿಪರೀತ ಬ್ಲಡ್‌ಪೆಷರ್‌ ಇರುವವರಲ್ಲಿ. ಪೋಸ್ಟುರಲ್‌ ಹೈಪೊಟೆನ್ಸನ್‌ಗೆ ಕಾರಣಗಳು ಹಲವಾರು. ದೇಹದ ದ್ರವ ಕಡಿಮೆ ಆದಲ್ಲಿ, ಆಹಾರ ಇಲ್ಲದಿದ್ದರೆ, ಬಿಸಿಲಲ್ಲಿ ಬಹುಕಾಲ ನಿಂತಾಗ ಅಥವಾ ತೀರಾ ದಣಿವಾದಾಗ, ಕೆಲವರಲ್ಲಿ ವಯಸ್ಸಿನ ಕಾರಣದಿಂದಲೂ ಔಷಧ, ಆಹಾರ, ಮಾನಸಿಕ ಒತ್ತಡಗಳಿಂದ ಹೀಗಾಗುವುದಂಟು ಹಲವಾರು ಔಷಧಗಳು ಹೈಯುರಿಟಿಕ್ಸ್‌, ಬೀಟಾ ಬ್ಲಾಕರ್ಸ್‌, ಕ್ಯಾಲ್ಡಿಯಂ ಚಾನೆಲ್‌ ಬ್ಲಾಕರ್ಸ್‌, ಏಸ್‌ ಇನ್‌ಹಿಬಿಟರ್ಸ್‌ ಹೈಪೊಟೆನ್ಸನ್‌ ಉಂಟು ಮಾಡುತ್ತದೆ ಎಂದು ಹೇಳಬಹುದು.ಆದ್ದರಿಂದ ಲೋ ಬಿಪಿಯನ್ನು ಯಾರೂ ಕೂಡ ನಿರ್ಲಕ್ಷಿಸಲಾಗದು. ಹಾಗಾಗಿ ಸೂಕ್ತ ವೇಳೆಯಲ್ಲೇ ವೈದ್ಯರನ್ನು ಕಂಡು ಚಿಕಿತ್ಸೆಗೆ ಮುಂದಾಗುವುದು ಒಳಿತು. ಅಡುಗೆ ಅರಮನೆಹೊಸ ರುಚಿ

ಕಡಿಮೆ ಬಿಪಿ ಸಂಭವಿಸಿದಾಗ ಏನು ಮಾಡಬೇಕು ?

ಬೀಪಿ ಕಡಮೆ ಆಗಿ ಪ್ರಜ್ಞಾಹೀನರಾಗಿದ್ದಲ್ಲಿ ಈ ಅಗಾಂತ ಭಂಗಿಯಲ್ಲಿ ಮಂಗಿಸಿ. ತಲೆದಿಂಬುಗಳು ಅಥವಾ ಪುಟ್ಟ ಸ್ಟೂಲ್‌ ಇದ್ದಲ್ಲಿ ಅದನ್ನು ಪಾದದ ಕೆಳಗೆ ಇರಿಸಿ. ಕಾಲನ್ನು ಎತ್ತರದಲ್ಲಿ ಇಟ್ಟಾಗ ರಕ್ತದ ಸಂಚಾರ ಹೃದಯಕ್ಕೆ ಆಗಿ ಬೀಪಿ ನಾರ್ಮಲ್‌ ಸ್ಥಿತಿಗೆ ಬರುತ್ತದೆ. ವ್ಯಕ್ತಿಯನ್ನು ಆದಷ್ಟು ಬೆಚ್ಚಗೆ ಮತ್ತು ಹಿತವಾಗಿರುವಂತೆ ನೋಡಿಕೊಳ್ಳಿ. ವ್ಯಕ್ತಿಗೆ ಕತ್ತಿನ ಭಾಗದಲ್ಲಿ ಏನೂ ಗಾಯವಾಗಿಲ್ಲ ಎಂದಿದ್ದರೆ ಮಾತ್ರ ತಲೆಯನ್ನು ಒಂದು ಕಡೆ ತಿರುಗಿಸಿ. ವೈದ್ಯರಿಗೆ ಆಂಬ್ಯುಲೆನ್‌ಸ್‌ಗೆ ಕೂಡಲೇ ಪೋನ್‌ ಮಾಡಿ ಚಿಕಿತ್ಸೆಗೆ ಅನುವಾಗಬೇಕು. ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತಿ.

Share This Article
Leave a comment