December 19, 2024

Newsnap Kannada

The World at your finger tips!

hanuma jayanthi

ಅಂಜನಿ ಪುತ್ರ ಆಂಜನೇಯನ ಶ್ರದ್ದಾ ಭಕ್ತಿಯೇ ಪ್ರೇರಣಾ ಶಕ್ತಿ

Spread the love

ಕೇಸರಿ ನಂದನ, ಆಂಜನೇಯ, ವಾಯುಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಹನುಮಂತನ ಕುರಿತಂತ ಸಂಗತಿಗಳು.

ಶ್ರೀರಾಮನಿಗಾಗಿ ಹನುಮಂತನು ತೋರಿದ ಪ್ರೀತಿ ನಿಸ್ವಾರ್ಥ, ಶ್ರದ್ಧಾ ಮತ್ತು ಭಕ್ತಿಯಿಂದ ಕೂಡಿರುವುದಾಗಿದೆ. ತನ್ನ ಯಜಮಾನನಿಗಾಗಿ ಪ್ರಾಣವನ್ನು ಕೊಡಲು ಲೆಕ್ಕಿಸದ ಮಹಾನ್‌ ವೀರನೀತ, ತ್ಯಾಗಮಯಿ ಈತ. ತನ್ನ ಎದೆಯನ್ನೇ ಸೀಳಿ ತನ್ನ ನಿಷ್ಠಾವಂತೆ ಭಕ್ತಿಯನ್ನು ಮೆರೆದ ತ್ಯಾಗವಂತ. ಹಿಂದೂ ಧರ್ಮದಲ್ಲಿ ಮಾತ್ರವಲ್ಲದೇ, ಜೈನ ಮತ್ತು ಬೌದ್ಧ ಧರ್ಮದಲ್ಲೂ ಗುರುತಿಸಿಕೊಂಡಿರುವ ಹನುಮಂತ, ವಾಯುಪುತ್ರ, ಶಿವನ ಅವತಾರವೇ ಆಂಜನೇಯ.

ಶಿವನ ಅವತಾರವೆಂದು ಪರಿಗಣಿಸಲಾಗುವ ಹನುಮಂತನು ಶ್ರೀರಾಮನ ಪರಮ ಭಕ್ತ. ಲಂಕೆಯಿಂದ ಸೀತೆಯನ್ನು ಸುರಕ್ಷತವಾಗಿ ಮರಳಿ ತರಲು ನಡೆದ ಯುದ್ಧದಲ್ಲಿ ಈತನ ಪಾತ್ರ ಪ್ರಮುಖವಾದುದ್ದಾಗಿದೆ. ಶ್ರೀ ರಾಮಾನುಜಾಚಾರ್ಯರು (Sri Ramanujacharya)

ಪುರಾಣಗಳ ಪ್ರಕಾರ ಹನುಮಂತನ ಜನನ

ಪುರಾಣಗಳಲ್ಲಿ ಹೇಳಿರುವಂತೆ ಹನುಮನ ತಾಯಿ ದೇವಿ ಅಂಜನಾ. ಈಕೆಯನ್ನು ಪಂಜಿಕಾಸ್ಥಲ ಎನ್ನುವ ಶಾಪಗ್ರಸ್ಥ ಆಕಾಶ ಕಾಲ್ಪನಿಕ ಎಂದು ಹೇಳಲಾಗುತ್ತದೆ. ಈಕೆಯ ಕೆಲವು ಕೆಲಸಗಳಿಂದ ಶಾಪಕ್ಕೆ ಒಳಗಾಗಿ ಮಂಗಗಳ ರಾಜಕುಮಾರಿಯಾಗಿ ಜನಿಸುತ್ತಾಳೆ. ಅವಳು ಶಾಪಕ್ಕೆ ಒಳಗಾಗುವ ಸಂದರ್ಭದಲ್ಲಿ ನೀನು ಜಿವನ ಯಾವುದಾದರೊಂದು ಅವತಾರಕ್ಕೆ ಜನ್ಮದಾತೆಯಾದರೆ ಮಾತ್ರ ನೀನು ಶಾಪದಿಂದ ಮುಕ್ತಿ ಹೊಂದುವೆ ಎಂದು ಹೇಳಲಾಗಿತ್ತು. ನಂತರ ಅಂಜನಾ ಮಂಗಗಳ ಮುಖ್ಯಸ್ಥನಾದ ಕೇಸರಿಯನ್ನು ವಿವಾಹವಾದಳು ಹಾಗೂ ಹನುಮಂತ ಎನ್ನುವ ದೈವಿಕ ಶಕ್ತಿಯುಳ್ಳ ಮಗುವಿಗೆ ಜನ್ಮ ನೀಡುತ್ತಾಳೆ. ಅಂಜನಾ ಮತ್ತು ಕೇಸರಿ ದಂಪತಿಗಳ ಮಗನಾದ್ದರಿಂದ ಹನುಮಂತನನ್ನು ಆಂಜನೇಯ ಮತ್ತು ಕೇಸರಿ ನಂದನ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಗಾಳಿ ದೇವರಾದ ವಾಯು ದೇವನು ಹನುಮಂತನ ಜನನದಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ ಹನುಮಂತನನ್ನು ವಾಯುಪುತ್ರ ಎಂದೂ ಕೂಡ ಕರೆಯಲಾಗುತ್ತದೆ.

ಹನುಮಾನ್‌ ಪದದ ಅರ್ಥ

ಸಂಸ್ಕೃತದಲ್ಲಿ ಹನುಮಾನ್‌ ಎಂದರೆ ವಿರೂಪಗೊಂಡ ದವಡೆ ಎಂದರ್ಥ. ಹನು ಎಂದರೆ ‘ದವಡೆ’ ಮಾನ್‌ ಎಂದರೆ ‘ವಿರೂಪಗೊಂಡಿದೆ’ ಎಂದು ಹೇಳಲಾಗಿದೆ. ಸೂರ್ಯ ಮತ್ತು ಇಂಧ್ರನೊಂದಿಗೆ ಕಾದಾಟ ನಡೆಸಿರುವುದರಿಂದ ಹನುಮಾನ್‌ ಗೆ ಈ ಹೆಸರು ಬರಲು ಕಾರಣವಾಯಿತು. ಒಮ್ಮೆ ಹನುಮಾನ್‌ನು ಸೂರ್ಯನನ್ನು ಹಣ್ಣೆಂದು ತಪ್ಪಾಗಿ ತಿಳಿದು ತಿನ್ನಲು ಮುಂದಾಗುತ್ತಾನೆ. ಸೂರ್ಯನನ್ನು ಹನುಮಾನ್‌ನಿಂದ ರಕ್ಷಿಸಲು ಇಂದ್ರ ದೇವನು ತನ್ನ ಆಯುಧದಿಂದ ಹನುಮಾನ್‌ನ ಮೇಲೆ ಹಲ್ಲೆ ನಡೆಸುತ್ತಾನೆ. ಇಂದ್ರನ ವಜ್ರಾಯುಧದ ಹೊಡೆತವು ಹನುಮಾನ್‌ನ ದವಡೆಗೆ ಬಿದ್ದು ಆತನ ದವಡೆಯು ವಿರೂಪಗೊಳ್ಳುತ್ತದೆ. ಅಂದಿನಿಂದ ಆಂಜನೇಯನನ್ನು ಹನುಮಾನ್‌ ಎಂದು ಕರೆಯಲಾಗುತ್ತದೆ. ಮಂಡ್ಯದ PES ಎಂಜಿನಿಯರಿಂಗ್ ಕಾಲೇಜ್ ನಲ್ಲಿ 4.46 ಕೋಟಿ ಅವ್ಯವಹಾರ : ಇಬ್ಬರ ಬಂಧನ

ಭಗವಾನ್‌ ಹನುಮಂತನು ಶಿಸ್ತನ್ನು ಪ್ರೀತಿಸುತ್ತಾನೆ. ಅದಕ್ಕಾಗಿಯೇ ಹನುಮಂತನ ಭಕ್ತರು ಸಹ ಶಿಸ್ತನ್ನು ಅನುಸರಿಸುತ್ತಾರೆ. ಹನುಮಂತನು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ಬಹುಬೇಗ ಈಡೇರಿಸುತ್ತಾನೆ. ಅಂದರೆ, ಹನುಮಂತನು ತನ್ನ ಭಕ್ತರನ್ನು ಸಂಕಟಗಳಿಂದ ದೂರವಿಡುತ್ತಾನೆ. ಹನುಮಂತನ ತನ್ನೆಲ್ಲಾ ಭಕ್ತರ ಸಂಕಟಗಳನ್ನು ದೂರಾಗಿಸುವುದರಿಂದ ಆತನನ್ನು ಸಂಕಟ ಮೋಚನ ಎಂದು ಕರೆಯುತ್ತಾರೆ.

ಹನುಮಾನ್ ಚಾಲೀಸಾ

ಹನುಮಾನ್ ಚಾಲೀಸಾವು ರಾಮನ ಭಂಟ, ಅಪ್ರತಿಮ ಸಾಹಸಿ, ಅದಮ್ಯ ಚೇತನ ಹನುಮನ ಲೀಲೆಗಳನ್ನು ಮತ್ತು ಆತನ ಖ್ಯಾತಿಯನ್ನು ಸಾರುವ ಒಂದು ಜನಪ್ರಿಯ ಕೃತಿಯಾಗಿದೆ. ಭಕ್ತಿಯ ಪರಾಕಾಷ್ಠೆಗೆ ನಮ್ಮನ್ನು ಕೊಂಡೊಯ್ಯುವ ಈ ಅದ್ಭುತ ಕೃತಿಯನ್ನು ರಚಿಸಿದವರು ಶ್ರೀ ರಾಮಚಂದ್ರನ ಪರಮ ಭಕ್ತರಾದ ತುಳಸಿದಾಸರು.

ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ. ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಮಂಗಳವಾರವನ್ನು ಹನುಮಂತನನ್ನು ನೆನೆಯಲು ವಿಶೇಷ ದಿನವಾಗಿ ಪರಿಗಣಿಸಲಾಗಿದೆ. ಈ ದಿನದಂದು ಭಕ್ತಿಯಿಂದ ಹನುಮಂತನನ್ನು ನೆನೆದರೆ ಮತ್ತು ಪೂಜಿಸಿದರೆ ಹನುಮಂತನ ಕೃಪೆಗೆ ಪಾತ್ರರಾಗುತ್ತೇವೆ ಎಂದು ವೇದಗಳು ತಿಳಿಸುತ್ತವೆ. ಅಂತೆಯೇ ಈ ದಿನಂದು ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಕೂಡ ಹನುಮಂತನು ನಮ್ಮನ್ನು ಸರ್ವ ವಿಘ್ನಗಳಿಂದ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಹನುಮಾನ್ ಚಾಲೀಸಾವು ಸಾಡೇ ಸಾಥಿಯಂತಹ ಶನಿ ದೋಷ ನಿವಾರಣೆಗೆ ಕೂಡ ಕಾರಣವಾಗಿದೆ. ಅಂತೆಯೇ ಉತ್ತಮ ಆರೋಗ್ಯ ಮತ್ತು ಮನಃಶಾಂತಿಯನ್ನು ತರುತ್ತದೆ.

hanuman temeple

ದುಷ್ಟ ಶಕ್ತಿಗಳನ್ನು ನಾಶ ಮಾಡುವುದು

ಭಗವಾನ್‌ ಹನುಮಂತನನ್ನು ದುಷ್ಟ ಶಕ್ತಿಗಳನ್ನು ನಾಶ ಮಾಡುವ ಮತ್ತು ದುಷ್ಟ ಶಕ್ತಿಗಳ ಶಕ್ತಿಗಳನ್ನು ನಾಶಮಾಡುವ ದೇವರು ಎಂದು ಪರಿಗಣಿಸಲಾಗುತ್ತದೆ. ನೀವು ದುಃಸ್ವಪ್ನಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಹನುಮಾನ್‌ ಚಾಲೀಸಾವನ್ನಿಟ್ಟು ಮಲಗಬೇಕು. ಇದರಿಂದ ರಾತ್ರಿ ಭಯಾನಕ ಕನಸುಗಳು ಬೀಳುವುದಿಲ್ಲ. ಅಷ್ಟು ಮಾತ್ರವಲ್ಲ, ಭಯ ಹುಟ್ಟಿಸುವಂತಹ ಆಲೋಚನೆಗಳನ್ನು ಕೂಡ ದೂರಾಗಿಸುತ್ತದೆ.

ಆಸೆಗಳು ಈಡೇರುವುದು

ಹನುಮಾನ್‌ ಚಾಲೀಸಾವನ್ನು ಕೇಳುವುದರಿಂದ ಅಥವಾ ನಾವೇ ಸ್ವತಃ ಓದುವುದರಿಂದ ಊಹಿಸಲು ಸಾಧ್ಯವಿಲ್ಲದಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಓರ್ವ ವ್ಯಕ್ತಿಯು 40 ಪದ್ಯಗಳ ಹನುಮಾನ್‌ ಚಾಲೀಸಾವನ್ನು ಶ್ರದ್ಧಾ – ಭಕ್ತಿಯಿಂದ ಪಠಿಸುವುದರಿಂದ ಮನೋಕಾಮನೆಗಳು ಈಡೇರುವುದು. ಹನುಮಾನ್‌ ಚಾಲೀಸಾವನ್ನು ನಿಯಮಿತವಾಗಿ ಪಠಿಸಿದರೆ ಹನುಮಂತನ ಆಶೀರ್ವಾದ ದೊರೆಯುವುದು ಮತ್ತು ಆತನ ಅದ್ಭುತ ಶಕ್ತಿ ಸಿಗುವುದು.

Copyright © All rights reserved Newsnap | Newsever by AF themes.
error: Content is protected !!