October 7, 2022

Newsnap Kannada

The World at your finger tips!

actress,kashmir files,high court

Court instructs actress Sai Pallavi to attend trial ನಟಿ ಸಾಯಿ ಪಲ್ಲವಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚನೆ #Thenewsnap #Latest_News #kannada #India #Kashmir_Files #Film_star #Kashmir_Pandith #Sai_pallavi #high_court #Mandya #Mysuru #Bengaluru #NEWS

ನಟಿ ಸಾಯಿ ಪಲ್ಲವಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚನೆ

Spread the love

ಕಾಶ್ಮೀರ ಪಂಡಿತರ ಹತ್ಯೆಯನ್ನು ಗೋವು ಹತ್ಯೆಯ ಹಂತಕರಿಗೆ ಹೋಲಿಕೆ ಮಾಡಿದ್ದ ಸಾಯಿ ಪಲ್ಲವಿಯ ವಿರುದ್ಧ ಹಲವು ಕಡೆ ದೂರು ದಾಖಲಾಗಿತ್ತು. ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಿದ್ದರು. ಅದನ್ನು ರದ್ದುಗೊಳಿಸುವಂತೆ ಸಾಯಿ ಪಲ್ಲವಿ ಕೋರ್ಟ್ ಮೆಟ್ಟಿಲೇರಿದ್ದರು. ಸಾಯಿ ಪಲ್ಲವಿಯ ಮನವಿಯನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿದೆ.

ಹೈದರಾಬಾದ್ ಸುಲ್ತಾನ್ ಬಜಾರ್ ಸರ್ಕಲ್ ಇನ್ಸ್ ಪೆಕ್ಟರ್ ಕೊಟ್ಟಿರುವ ನೋಟಿಸ್ ಅನ್ನು ರದ್ದುಗೊಳಿಸುವಂತೆ ಸಾಯಿ ಪಲ್ಲವಿಯ ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಕನ್ನೆಗಂಟಿ ಲಲಿತಾ, ‘ಅರ್ಜಿದಾರರು ಅಪರಾಧದ ಕುರಿತು ನಿರ್ದಿಷ್ಟಪಡಿಸದ ದುರುದ್ದೇಶಪೂರಿತ ಅರ್ಜಿಯ ಆಧಾರದ ಮೇಲೆ ದೂಷಾರೋಪಣೆಗಾಗಿ ನೋಟಿಸ್ ನೀಡಲಾಗಿದೆ. ಈ ಕುರಿತು ಸತ್ಯಾಸತ್ಯತೆ ಅರಿವುದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.ಇದನ್ನು ಓದಿ –ಮಂಡ್ಯದ PES ಎಂಜಿನಿಯರಿಂಗ್ ಕಾಲೇಜ್ ನಲ್ಲಿ 4.46 ಕೋಟಿ ಅವ್ಯವಹಾರ : ಇಬ್ಬರ ಬಂಧನ

ಹೈದರಾಬಾದ್ ಬಜರಂಗದಳದ ಸದಸ್ಯ ಅಖಿಲ್ ಎನ್ನುವವರು ಸಾಯಿ ಪಲ್ಲವಿಯನ್ನು ವಿಚಾರಣೆ ನಡೆಸುವಂತೆ ಸುಲ್ತಾನ್ ಬಜಾರ್ ಸರ್ಕಲ್ ಇನ್ಸೆಪೆಕ್ಟರ್ ಗೆ ದೂರು ನೀಡಿದ್ದರು. ಅಲ್ಲದೇ, ಇನ್ನೂ ಹಲವು ಕಡೆ ದೂರುಗಳು ದಾಖಲಾಗಿದ್ದವು. ಹಾಗಾಗಿ ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಕುರಿತು ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದರೂ ದೂರುಗಳು ಮಾತ್ರ ನಿಂತಿರಲಿಲ್ಲ.

error: Content is protected !!