ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕರ್ನಾಟಕದ ಭಕ್ತರಿಗೆ ಸರ್ಕಾರದಿಂದ ಸಹಾಯವಾಣಿ

Team Newsnap
1 Min Read
Govt helpline for Karnataka devotees stuck in Amarnath Yatra ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕರ್ನಾಟಕ ಭಕ್ತರಿಗೆ ಸರ್ಕಾರದಿಂದ ಸಹಾಯವಾಣಿ #Thenewsnap #Latest_news #Jammu #Kashmir #Amarnath #Death #Could_blast #Karnataka #Government #Helpline #India #Mandya #mysuru

ಸಾವಿನ ಸಂಖ್ಯೆ 15ಕ್ಕೆ ಏರಿಕೆ,40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಮೇಘಸ್ಫೋಟದಿಂದ ಸುಮಾರು ಎರಡು ಸಾವಿರ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ

ದೇಶಾದ್ಯಂತ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ . ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಭಾಗದಲ್ಲಿ ಮೇಘಸ್ಫೋಟಗೊಂಡಿದ್ದು, ನಿನ್ನೆ ಸಂಜೆ ಏಕಾಏಕಿ ಸೃಷ್ಟಿಯಾದ ಪ್ರವಾಹದಿಂದ ನದಿ ತಟದಲ್ಲಿ ಶಿಬಿರಗಳು ಕೊಚ್ಚಿ ಹೋಗಿವೆ.ಇದನ್ನು ಓದಿ –ನಟಿ ಸಾಯಿ ಪಲ್ಲವಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚನೆ

ಕಣಿವೆ ತಟದಲ್ಲಿ ಹರಿಯುತ್ತಿದ್ದ ನದಿ ಒಂದೇ ಸಮನೆ ಉಕ್ಕಿ ಹರಿದಿದ್ದು ಅಮರನಾಥ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.NDRF, SDRF, BSF ಸೇರಿದಂತೆ ಸೇನಾ ಸಹಾಯದಿಂದ 10 ತಂಡಗಳನ್ನು ರಕ್ಷಣೆಗಾಗಿ ರಚಿಸಲಾಗಿದ್ದು ಕ್ಷಿಪ್ರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

2 ವರ್ಷಗಳ ನಂತರ ಅಮರನಾಥ ಯಾತ್ರೆ ಮತ್ತೆ ಪ್ರಾರಂಭವಾಗಿದ್ದು,ಯಾತ್ರೆಗೆ ಜೂನ್ 30 ರಂದು ಚಾಲನೆ ಸಿಕ್ಕಿತ್ತು ಮೊದಲ ತಂಡದಲ್ಲಿ 4,890 ಭಕ್ತರು ಯಾತ್ರೆ ಕೈಗೊಂಡಿದ್ದರು.43 ದಿನಗಳ ಯಾತ್ರೆಯು ಅಗಸ್ಟ್ 11 ರಂದು ಆರಂಭವಾಗಿದ್ದು ಕೊನೆಗೊಳ್ಳಲಿದೆ.ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮು ಬೇಸ್ ಕ್ಯಾಂಪ್‍ನಿಂದ 4,890 ಯಾತ್ರಾರ್ಥಿಗಳ ಮೊದಲ ಬ್ಯಾಚ್‍ಗೆ ಚಾಲನೆ ನೀಡಿದ್ದರು.

ಕರ್ನಾಟಕದಿಂದಲೂ ಸಾಕಷ್ಟು ಭಕ್ತರು ಅಮರನಾಥ ಯಾತ್ರೆಗೆ ತೆರಳಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಹೆಲ್ಪ್‍ಲೈನ್‍ನನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಹೆಲ್ಪ್ ಲೈನ್ ನಂಬರ್ – 080-1070, 22340676.

Share This Article
Leave a comment