ಮಂಡ್ಯದ PES ಎಂಜಿನಿಯರಿಂಗ್ ಕಾಲೇಜ್ ನಲ್ಲಿ 4.46 ಕೋಟಿ ಅವ್ಯವಹಾರ : ಇಬ್ಬರ ಬಂಧನ

Team Newsnap
1 Min Read

ಮಂಡ್ಯನಗರದ ಪ್ರತಿಷ್ಠಿತ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರದ ಪ್ರಕರಣವು ಕೊನೆಗೂ ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿದೆ.

ಕಾಲೇಜಿನಲ್ಲಿ ನಕಲಿ ದಾಖಲೆಸೃಷ್ಠಿ ಮಾಡಿ 4.46ಕೋಟಿ ರೂ. ಹೆಚ್ಚು ಹಣವನ್ನು ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಕಾಲೇಜಿನ ಇಬ್ಬರು ಸಿಬ್ಬಂದಿಗಳನ್ನು ಸೈಬರ್, ಆರ್ಥಿಕ, ಮಾದಕ ದ್ರವ್ಯ ಕ್ರೈಂ
ಬ್ರಾಂಚ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಪಿಇಎಸ್ ಕಾಲೇಜಿನ ಸಹಾಯಕ ಆಡಳಿತಾಧಿಕಾರಿ ಜೆ.ಶೇಷಪ್ಪ ಹಾಗೂ ನಗದು ಶಾಖೆಯ ವಿಭಾಗದ ಸಹಾಯಕ ಎಂ.ಸಿ.ಸತೀಶ್ ಬಂಧಿತರು. ಈ ಹಗರಣದ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ. ಅಮರನಾಥ್​​ ಗುಹೆ ಬಳಿಭಾರೀ ಮೇಘ ಸ್ಫೋಟ : ಐದು ಮಂದಿ ಸಾವು

ಕಾಲೇಜಿನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ಅನುದಾನವನ್ನು ನಕಲಿ ದಾಖಲೆ ಸೃಷ್ಟಿಸಿ ಗುಳುಂ ಮಾಡಿರುವ ಆರೋಪ ಹೊತ್ತಿರುವ ಆರೋಪಿಗಳು ಕಾಲೇಜಿನ ವಿವಿಧ ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲೂ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪಿಇಎಸ್ ಕಾಲೇಜಿನ ಶಿಸ್ತು ಪ್ರಾಧಿಕಾರಿ ಹಾಗೂ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ ಹಾಗೂ ವಕೀಲ ರಾಜಶೇಖರ್ ಅವರನ್ನು ಆಂತರಿಕ ತನಿಖಾಧಿಕಾರಿಯಾಗಿ ನೇಮಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು. ಅಡುಗೆ ಎಣ್ಣೆ ದರ 15 ರು ಇಳಿಸಲು ಕೇಂದ್ರ ಸರ್ಕಾದ ನಿರ್ಧಾರ

ತನಿಖೆಯಲ್ಲಿ ಎಸ್ಟೇಟ್ ಆಫೀಸರ್ ಆರ್.ಎಂ.ಶಿವರಾಮು, ಸಹಾಯಕ ಆಡಳಿತಾಧಿಕಾರಿ ಜೆ.ಶೇಷಪ್ಪ, ನಗದು ಸಹಾಯಕ ಎಂ.ಸಿ.ಸತೀಶ್, ಶಿವರಾಮು ಅವರ ನೆಂಟರಾದ ಹೃತ್ವಿಕ್, ಕೆ.ಸಿ.ನಿರಂಜನ್ ಸೇರಿದಂತೆ ಒಟ್ಟು ೧೧ ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿದೆ.

ಇಬ್ಬರನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಪಿಇಎಸ್ ಕಾಲೇಜಿನ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಬಸವರಾಜು, ನಿವೃತ್ತ ಪ್ರಾಂಶುಪಾಲರಾದ ಡಾ.ವಿ.ಶ್ರೀಧರ್, ಎಚ್.ವಿ.ರವೀಂದ್ರ, ಹಾಲಿ ಪ್ರಾಂಶುಪಾಲ ಡಾ.ಮಹಾಲಿಂಗೇಗೌಡರನ್ನೂ ವಿಚಾರಣೆ ಮಾಡಲಾಗಿದೆ.

ಆದರೆ ಇದರಲ್ಲಿ ಶಿವರಾಮು, ಜೆ.ಶೇಷಪ್ಪ, ಎಂ.ಸಿ.ಸತೀಶ್, ಹೃತ್ವಿಕ್, ನಿರಂಜನ್, ನೇಮಿನಾಥ್ ಸೇರಿದಂತೆ ೧೧ ಮಂದಿಯ ವಿರುದ್ಧ ಮಾತ್ರ ಆರೋಪಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಪೋಲಿಸ್ ಮೂಲಗಳು ಹೇಳಿವೆ.

Share This Article
Leave a comment