ಶ್ರೀ ರಾಮಾನುಜಾಚಾರ್ಯರು (Sri Ramanujacharya)

Team Newsnap
3 Min Read

ಶ್ರೀ ರಾಮಾನುಜಾಚಾರ್ಯರು ಕ್ರಿ.ಶ. 1017 ಮದ್ರಾಸಿನ ಸಮೀಪದ ಶ್ರೀಪೆರಂಬದೂರು ಎಂಬಲ್ಲಿ ಜನಿಸಿದರು. ತಂದೆ ಕೇಶವ ಸೋಮಯಾಜಿ ( ಕೇಶವದೀಕ್ಷಿತರು) ತಾಯಿ ಕಾಂತಿಮತಿ. ರಾಮಾನುಜರು ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು.

ರಾಮಾನುಜರು ಅದೈತ ಗುರುಗಳಾದ ಯಾದವ ಪ್ರಕಾಶರ ಶಿಷ್ಯರಾದರು. ರಾಮಾನುಜರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಅವರು ಹಲವಾರು ಸಂದರ್ಭದಲ್ಲಿ ಧರ್ಮ ಮತ್ತು ತತ್ವಗಳ ವಿಚಾರಗಳಲ್ಲಿ ಗುರುಗಳ ಅಭಿಪ್ರಾಯವನ್ನು ಒಪ್ಪುತ್ತಿರಲಿಲ್ಲ. ಪರಿಣಾಮವಾಗಿ ಗುರು ಶಿಷ್ಯರ ಮಧ್ಯೆ ಭಿನ್ನಾಭಿಪ್ರಾಯ ಬೆಳೆಯಿತು. ರಾಮಾನುಜರು ಗುರುವನ್ನ ತ್ಯಜಿಸಿ ಮನೆಗೆ ಹಿಂತಿರುಗಿದರು.

ರಾಮಾನುಜರು 16 ವರ್ಷ ವಯಸ್ಸು ಆಗುವುದರೊಳಗೆ ವೇದ, ಶಾಸ್ತ್ರಗಳ ಪರಿಪೂರ್ಣತೆಯನ್ನು ಪಡೆದಿದ್ದರು, 16ನೇ ವಯಸ್ಸಿನಲ್ಲಿ ತಂಗಮ್ಮನನ್ನು ವಿವಾಹವಾದರು.

ಗುರುವನ್ನು ತ್ಯಜಿಸಿದ ನಂತರ ರಾಮಾನುಜರು ಸ್ವಅಧ್ಯಯನವನ್ನು ಮುಂದುವರಿಸಿದರು. ಬಹುಬೇಗನೆ ಅವರ ಕೀರ್ತಿ ರಾಷ್ಟ್ರದ ಉದ್ದಗಲಕ್ಕೂ ಪಸರಿಸಿತು.ಅವರು ಒಬ್ಬ ಮಹಾನ್ ವಿದ್ವಾಂಸರಾಗಿ ರೂಪುಗೊಂಡರು. ತಮಿಳುನಾಡಿನ ಶ್ರೀರಂಗ ಮಠದ ಯುಮುನಾಚಾರ್ಯರು ತನ್ನ ಉತ್ತರಾಧಿಕಾರಿಯಾಗಲು ಆಹ್ವಾನಿಸಿದರು. ಈ ಸಂದರ್ಭದಲ್ಲಿ ರಾಮಾನುಜರಿಗೆ ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆ ಉಂಟಾಗತ್ತು. ಆಧ್ಯಾತ್ಮಿಕ ವಿಚಾರದ ಕಡೆಗೆ ಆಕರ್ಷಿತರಾಗಿದ್ದರು.

ರಾಮಾನುಜರು ಕುಟುಂಬವನ್ನು ತ್ಯಜಿಸಿ ಸನ್ಯಾಸಿಯಾದರು. ಅವರು ಶ್ರೀರಂಗ ತಲುಪುವ ಮೊದಲೇ ಯಮನಾಚಾರ್ಯರು ಸ್ವರ್ಗಸ್ತರಾಗಿದ್ದರು. ಅಂದಿನ ಕಾಲದಲ್ಲಿ ಘಟಿಕಾ ಸ್ಥಾನವಾಗಿದ್ದ ಕಾಂಚೀಪುರದಲ್ಲಿ ಉನ್ನತ ವೇದಾಂತ ಶಾಸ್ತ್ರಗಳ ಹಲವು ಸಿದ್ಧಾಂತಗಳನ್ನು ಅಧ್ಯಯನ ಮಾಡಿ ತಮ್ಮ 24ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿ ಶ್ರೀರಂಗಂನ ರಂಗನಾಥ ದೇವಾಲಯದ ಮಠದಲ್ಲಿ ಶ್ರೀ ಯಾಮಾನಾಚಾರ್ಯರ ಉತ್ತರಾಧಿಕಾರಿಯಾದರು. ರಾಮಾನುಜರು ಶ್ರೀರಂಗ ಮಠದ ಆಚಾರ್ಯ ಪೀಠವನ್ನೇರಿ ಅಲ್ಲಿ ವೈಷ್ಣವ ಪಂಥವನ್ನು ಪ್ರಚಾರಗೊಳಿಸಿದರು.

ರಾಮಾನುಜರು ಹಲವಾರು ಕೃತಿಗಳನ್ನು ತನ್ನ ವೈಷ್ಣವ ತತ್ವಗಳನ್ನು ರಚಿಸಿದ್ದಾರೆ. ಅವರು ಮೂರು ತತ್ವ ಶಾಸದ ಕೃತಿಗಳು ವೇದಾಂತ ಸಂಗ್ರಹ, ವೇದಾಂತಸಾರ, ವೇದಸೂತ್ರ ಇವುಗಳಲ್ಲಿ ಮೋಕ್ಷಗಳಿಸಲು ಭಕ್ತಿ ಮಾರ್ಗದ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಅವರ ಇತರ ಕೃತಿಗಳೆಂದರೆ ಗೀತಾಭಾಷ್ಯ, ಶ್ರೀಭಾಷ್ಯ, ಶ್ರೀರಂಗಗದ್ಯ,ಶರಣಾಗತಿ ಗದ್ಯ, ನಿತ್ಯಗ್ರಂಥ, ವೈಕುಂಠ ಗದ್ಯ ಇತ್ಯಾದಿ. ವಿಶಿಷ್ಟಾದೈತ ತತ್ವ.

ರಾಮಾನುಜರು ಪ್ರತಿಪಾಸಿದ ತತ್ವವನ್ನು ವಿಶಿಷ್ಟಾ ದೈತ ಎಂದು ಕರೆಯಲಾಗಿದೆ. ದೇವರು ಜಗತ್ತು ಮತ್ತು ಆತ್ಮಗಳ ಮಧ್ಯೆ ಇರುವ ಸಂಬಂಧಗಳನ್ನು ವಿವರಿಸುವ ರೀತಿಯೇ ಅವರ ತತ್ವದ ಕೇಂದ್ರ ಬಿಂದುವಾಗಿದೆ. ಅವರ ಅಭಿಪ್ರಾಯದಲ್ಲಿ ಮೂರು ಶಾಶ್ವತ ತತ್ವಗಳಿವೆ. ದೇವರು (ಬ್ರಹ್ಮನ್), ಆತ್ಮ (ಚಿತ್) ಮತ್ತು ಜಡಜಗತ್ತು (ಅಚಿತ್). ಇವು ಮೂರು ಬೇರೆ ಬೇರೆಯಾಗಿವೆ ಹಾಗೂ ಸಮಾನವಾಗಿವೆ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಒಂದಕ್ಕೊಂದು ಹತ್ತಿರದ ಸಂಬಂಧವಿದೆ. ಇವು ಒಂದೇ ದೇಹದಂತಿದೆ. ಇದಕ್ಕಾಗಿ ರಾಮಾನುಜರ ತತ್ವವನ್ನು ವಿಶಿಷ್ಟಾ ದೈತ ಎನ್ನಲಾಗಿದೆ.

ರಾಮಾನುಜರ ಅಭಿಪ್ರಾಯದಲ್ಲಿ ಕರ್ಮ ಅಥವಾ ಕ್ರಿಯೆ ವ್ಯಕ್ತಿಯನ್ನು ಶಾಶ್ವವಾದ ದಾಸ್ಯಕ್ಕೆ ಕೆರೆದೊಯ್ಯುತ್ತದೆ ಹಾಗೂ ಮೋಕ್ಷಗಳಿಸಲು ಇದು ಸಹಕಾರಿಯಲ್ಲ. ಜ್ಞಾನದ ಮೂಲಕ ವ್ಯಕ್ತಿ ಮಾಯೆಯಿಂದ ಬಿಡುಗಡೆ ಪಡೆದು ಸರ್ವಜ್ಞ ಪದವಿ ಗಳಿಸುತ್ತಾನೆ, ಆದರೆ ಭಕ್ತಿಯ ಮೂಲಕ ವ್ಯಕ್ತಿಯ ವೈಕುಂಠ ಪ್ರವೇಶಿಸಿ ಶಾಶ್ವತ ಆನಂದವನ್ನು ಗಳಿಸ ಬಹುದು. ಆದುದರಿಂದ ಮೋಕ್ಷಗಳಿಸಲು ಹಾಗೂ ವೈಕುಂಠ ಪ್ರವೇಶಿಸಲು ಅತ್ಯಂತ ಶ್ರೇಷ್ಠ ಮಾರ್ಗವೆಂದರೆ ಭಕ್ತಿಯಾಗಿದೆ ಎಂದು ಅವರು ಜಗತ್ತಿಗೆ ಸಾರಿದರು.

ರಾಮಾನುಜರು ಪ್ರತಿಪಾದಿಸಿದ ತತ್ವವನ್ನು ವಿಶಿಷ್ಟಾ ದೈತ ಎಂದು ಕರೆಯಲಾಗಿದೆ. ದೇವರು ಜಗತ್ತು ಮತ್ತು ಆತ್ಮಗಳ ಮಧ್ಯೆ ಇರುವ ಸಂಬಂಧಗಳನ್ನು ವಿವರಿಸುವ ರೀತಿಯೇ ಅವರ ತತ್ವದ ಕೇಂದ್ರ ಬಿಂದುವಾಗಿದೆ. ಅವರ ಅಭಿಪ್ರಾಯದಲ್ಲಿ ಮೂರು ಶಾಶ್ವತ ತತ್ವಗಳಿವೆ. ದೇವರು (ಬ್ರಹ್ಮನ್), ಆತ್ಮ (ಚಿತ್) ಮತ್ತು ಜಡಜಗತ್ತು (ಅಚಿತ್). ಇವು ಮೂರು ಬೇರೆ ಬೇರೆಯಾಗಿವೆ ಹಾಗೂ ಸಮಾನವಾಗಿವೆ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಒಂದಕ್ಕೊಂದು ಹತ್ತಿರದ ಸಂಬಂಧವಿದೆ. ಇವು ಒಂದೇ ದೇಹದಂತಿದೆ. ಇದಕ್ಕಾಗಿ ರಾಮಾನುಜರ ತತ್ವವನ್ನು ವಿಶಿಷ್ಟಾ ದೈತ ಎನ್ನಲಾಗಿದೆ.

ರಾಮಾನುಜರು ತಮ್ಮ ಜೀವಿತದ ಉತ್ತರಾರ್ಧದ ಐವತ್ತು ವರ್ಷ ಶ್ರೀರಂಗವನ್ನು ಬಿಟ್ಟು ಮತ್ತೆಲ್ಲಿಗೂ ಹೋಗಲಿಲ್ಲ. ತಮ್ಮ ದೇಹ ಬಿಟ್ಟು ಹೊರಡುವ ಕಾಲದಲ್ಲಿ ಅದನ್ನು ಮುಂಚಿತವಾಗಿ ಶಿಷ್ಯರಿಗೆ ತಿಳಿಸಿ ಸಂದೇಶ ನೀಡಿದರು. 1137ನೇ ಶನಿವಾರ ಮಧ್ಯಾಹ್ನ ಮಾಘಶುದ್ಧ ಸಪ್ತಮಿಯ ದಿನ ಆಚಾರ್ಯರು ಭಗವಂತನ ಪಾದಾರವಿಂದ ಸೇರಿದರು.

ramanuja 1

ತೆಲಂಗಾಣದ ಹೈದರಾಬಾದ್‌ ಬಳಿ 11ನೇ ಶತಮಾನದ ಭಕ್ತಿ ವೈಷ್ಣವ ಮತ್ತು ಕ್ರಾಂತಿಕಾರಿ ಸಮಾಜ ಸುಧಾರಕ ರಾಮಾನುಜಾಚಾರ್ಯರ ಪಂಚ ಲೋಹಗಳಿಂದ ಮಾಡಿರುವ 216 ಅಡಿ ಎತ್ತರದ “ಸಮಾನತೆಯ ಪ್ರತಿಮೆ”(Statue of Equality) ಭವ್ಯ-ಬೃಹತ್ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5 . 2022 ರಂದು ಅನಾವರಣಗೊಳಿಸಿದ್ದಾರೆ.

Share This Article
Leave a comment