March 31, 2023

Newsnap Kannada

The World at your finger tips!

BEO Jayanna

15 ಸಾವಿರ ರು ಲಂಚ ಸ್ವೀಕರಿಸುವ ವೇಳೆ ಕಡೂರು BEO ಜಯಣ್ಣ ಲೋಕಾಯಕ್ತ ಬಲೆಗೆ

Spread the love

ಶಾಲೆಯೊಂದಕ್ಕೆ ನಿಯೋಜನೆ ಮಾಡಲು ಶಿಕ್ಷಕರೊಬ್ಬರಿಂದ 15 ಸಾವಿರ ರು ಲಂಚ ಪಡೆಯುವಾಗ ಕಡೂರು (BEO) ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್. ಜಯಣ್ಣ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಸಹ ಶಿಕ್ಷಕ ಎನ್.ಎಸ್. ರಾಜಪ್ಪ ಅವರಿಂದ 15 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಜಯಣ್ಣ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರುಗಳಾದ ಸಚಿನ್ ಮತ್ತು ಬಿ.ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: 6 ಮಂದಿ ಯಾತ್ರರ್ಥಿಗಳ ದುರಂತ ಸಾವು

ತಾಲೂಕಿನ ಜಿ.ತಿಮ್ಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿದ್ದ ರಾಜಪ್ಪ ಅವರನ್ನು ಗರ್ಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಲು ಕ್ಷೇತ್ರ ಶಿಕ್ಷಣಾಕಾರಿಗಳು ಹಣದ ಬೇಡಿಕೆ ಇಟ್ಟಿದ್ದಾರೆ, ಇಂದು ಈ ಸಂಬಂಧ ಶಿಕ್ಷಕ ರಾಜಪ್ಪ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿ. ತಿಮ್ಮಾಪುರ ಗೇಟ್‌ನಲ್ಲಿ 15 ಸಾವಿರ ಲಂಚ ನೀಡುವಾಗ ಸಿಕ್ಕಿ ಬಿದ್ದಿದ್ದಾರೆ.

ಕಡೂರು ತಾಲೂಕಿನ ಹುಲೇಗೊಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ರಾಜಪ್ಪ ಇವರನ್ನು ಜಿ.ತಿಮ್ಮಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮಾಡಲಾಗಿತ್ತು. 6 ತಿಂಗಳು ಅಲ್ಲಿ ಕೆಲಸ ಮಾಡಿದ ರಾಜಪ್ಪ. ಸಿಂಗಟಗೆರೆ ಶಾಲೆಗೆ ಪುನಃ ನಿಯೋಜನೆ ಮಾಡಿದ್ದು, ಅವರು ಅಲ್ಲಿಗೆ ತೆರಳದೆ ಗೈರು ಹಾಜರಾಗಿದ್ದರು. ಹಾಸನ A C ಯಿಂದಲೇ ಜಿಪಂ ನೌಕರನಿಗೆ ಕಪಾಳಮೋಕ್ಷ : ಜನರ ಆಕ್ರೋಷ

ಮತ್ತೆ ಲಿಂಗ್ಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಿದ್ದು ಶಾಲೆಯಿಂದ ಶಾಲೆಗೆ ಬದಲಾವಣೆ ಆಗುತ್ತಿದ್ದ ಹಿನ್ನಲೆಯಲ್ಲಿ ಅವರು ಬೇಸತ್ತಿದ್ದರು ಎಂದು ಹೇಳಲಾಗಿದೆ.

ದಿಢೀರ್ ಘಟನೆಯಿಂದ ಶಿಕ್ಷಕವರ್ಗದಲ್ಲಿ ಈ ವಿಚಾರ ಕಾಡ್ಗಿಚ್ಚಿನಂತೆ ಹರಡಿದ್ದು, ಗಣಪತಿ ಪೆಂಡಾಲ್ ಆವರಣದಲ್ಲಿರುವ ಬಿಇಒ ಕಚೇರಿಯ ಬಳಿ ಶಿಕ್ಷಕರ ಗುಂಪು ಸೇರಿದ್ದರು. ಗುಂಪು ಗುಂಪಾಗಿ ಗುಸು-ಗುಸು ಮಾತನಾಡಿಕೊಳ್ಳುತ್ತಿದ್ದ ದೃಶ್ಯವು ಕಂಡುಬಂದಿತು. ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿಯಾದ ಚೇತನ್, ಸಲೀಂ, ಲೋಕೇಶ್, ವಿಜಯಭಾಸ್ಕರ್, ಸವಿನಯ, ರವಿಚಂದ್ರ ಇದ್ದರು.

error: Content is protected !!