ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಸಿದ್ಧರಾಗಿ– ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳ ಕರೆ

Team Newsnap
1 Min Read
Mandya MLA Ravi's discipline lesson from Chunchanagiri shri 'ಶರ್ಟ್ ಬಟನ್ ಹಾಕಿ' ಮಂಡ್ಯ ಶಾಸಕ ರವಿಗೆ ಚುಂಚನಗಿರಿ ಶ್ರೀಗಳ ಶಿಸ್ತಿನ ಪಾಠ

ರಾಜ್ಯದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯಕ್ಕೆ ಶೇ.4 ಮೀಸಲಾತಿ ಸಾಕಾಗುವುದಿಲ್ಲ, ಶೇ.8 ಮೀಸಲಾತಿ ಹೆಚ್ಚಳ ಮಾಡಬೇಕು. ಇದಕ್ಕಾಗಿ ಹೋರಾಟ ರೂಪಿಸಲಾಗುತ್ತಿದೆ.

ಎಲ್ಲರೂ ಸಿದ್ಧರಾಗಿ ಎಂದು ಹೇಳುವ ಮೂಲಕ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿಗಳು ಮೀಸಲಾತಿ ಹೋರಾಟದ ಕಿಡಿ ಹೊತ್ತಿಸಿದ್ದಾರೆ.15 ಸಾವಿರ ರು ಲಂಚ ಸ್ವೀಕರಿಸುವ ವೇಳೆ ಕಡೂರು BEO ಜಯಣ್ಣ ಲೋಕಾಯಕ್ತ ಬಲೆಗೆ

ಕೋಲಾರದಲ್ಲಿ ಒಕ್ಕಲಿಗರ ಸಮುದಾಯದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು ಒಕ್ಕಲಿಗರ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.

ಒಕ್ಕಲಿಗ ಸಮುದಾಯಕ್ಕೆ ಶೇ.12 ಮೀಸಲಾತಿ ನೀಡಬೇಕು. ನಮ್ಮ ಸಮುದಾಯಕ್ಕೆ ಶೇ.4 ಮೀಸಲಾತಿ ಸಾಕಾಗುವುದಿಲ್ಲ ಎಂಬ ಕೂಗು ಹಿಂದಿನಿಂದಲೂ ಇದೆ. ಆದರೆ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಮಾತನಾಡುವುದು ಬೇಡ ಎಂದು ಸುಮ್ಮನಿದ್ದೆವು. ಈಗ ಸಂವಿಧಾನದ ಚೌಕಟ್ಟಿನಲ್ಲಿ ಸರ್ಕಾರ ಮೀಸಲಾತಿ ಹೆಚ್ಚಿಸುವುದಾದರೇ ನಮಗೂ ಶೇ.8 ಮೀಸಲಾತಿ ಹೆಚ್ಚಿಸಬೇಕು. ಕಾನೂನು ಸಮ್ಮತವಾಗಿ ನಮ್ಮ ಬೇಡಿಕೆ ಈಡೇರದಿದ್ದರೇ, ಹಂತ-ಹಂತವಾಗಿ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಒಕ್ಕಲಿಗರು ರಾಜಕೀಯವಾಗಿ ಮಾತ್ರ ಬೆಳೆದರೆ ಸಾಲದು. ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಮುಂದೆ ಹೋರಾಟದ ಸನ್ನಿವೇಶ ಎದುರಾದರೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಕರೆ ನೀಡಿದರು.

Share This Article
Leave a comment