ಹಾಸನ A C ಯಿಂದಲೇ ಜಿಪಂ ನೌಕರನಿಗೆ ಕಪಾಳಮೋಕ್ಷ : ಜನರ ಆಕ್ರೋಷ

Team Newsnap
1 Min Read
Hassan A C slapped the GIP employee: People's outrage ಹಾಸನ A C ಯಿಂದಲೇ ಜಿಪಂ ನೌಕರನಿಗೆ ಕಪಾಳಮೋಕ್ಷ : ಜನರ ಆಕ್ರೋಷ

ಸರ್ಕಾರಿ ನೌಕರನಿಗೆ ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್ ಕಪಾಳ ಮೋಕ್ಷ ಮಾಡಿ ದರ್ಪ ತೋರಿದ ಘಟನೆ ಹಾಸನಾಂಬೆ ದೇಗುಲದಲ್ಲಿ ಜರುಗಿದೆ.

ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ನಡೆದ ಈ ಘಟನೆಯಲ್ಲಿ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡರಿಗೆ ಹಾಸನದ ಉವಿಭಾಗಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ.

ನೂರಾರು ಜನರು ಒಳ ಬರುತ್ತಿದ್ದಾಗ ಅವರ ಜೊತೆಯಲ್ಲಿಯೇ ಜಿಲ್ಲಾ ಪಂಚಾಯಿತಿ ನೌಕರ ಶಿವೇಗೌಡರು ಬಂದಿದ್ದರು. ಆ ವೇಳೆ ಎಸಿ ಜಗದೀಶ್ ಆತನನ್ನು ತಡೆದು, ಯಾಕೋ ಓಡಿ ಬರುತ್ತಿದ್ದಿಯಾ, ನಿನಗೆ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದನೆ ಮಾಡಿ ಕಪಾಳ ಮೋಕ್ಷ ಮಾಡಿದ್ದಾರೆ.ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದ ಮಹಿಳೆ ಮೇಲೆ ಹರಿದ ಬಸ್ – ಚಿಕಿತ್ಸೆ ಫಲಿಸದೇ ಸಾವು : ಚಾಲಕನ ಬಂಧನ

ತಾನು ಜಿ.ಪಂ. ನೌಕರ ಎಂದು ಶಿವೇಗೌಡ ಗುರುತಿನ ಚೀಟಿ ತೋರಿಸಿದ್ದಾರೆ. ಆದರೆ ಎಸಿ ಜಗದೀಶ್ ಕೊರಳಲ್ಲಿ ಧರಿಸಿದ್ದ ಕಾರ್ಡ್ ಕಿತ್ತು ಎಸೆದಿದ್ದು, ಶಿವೇಗೌಡ ಕುಟುಂಬದವರ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾರೆ.

ಸಣ್ಣ ಕಾರಣಕ್ಕೆ ನೂರಾರು ಭಕ್ತರು, ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದ ಎಸಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ ಅಧಿಕಾರಿಯ ದರ್ಪವನ್ನು ಜನರು ಖಂಡಿಸಿದ್ದಾರೆ.

Share This Article
Leave a comment