ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದ ಮಹಿಳೆ ಮೇಲೆ ಹರಿದ ಬಸ್ – ಚಿಕಿತ್ಸೆ ಫಲಿಸದೇ ಸಾವು : ಚಾಲಕನ ಬಂಧನ

Team Newsnap
1 Min Read
Bus accident in Bangalore : driver arrested ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದ ಮಹಿಳೆ ಮೇಲೆ ಹರಿದ ಬಸ್ - ಚಿಕಿತ್ಸೆ ಫಲಿಸದೇ ಸಾವು : ಚಾಲಕನ ಬಂಧನ

ಬೆಂಗಳೂರಿನಲ್ಲಿ ನಿನ್ನೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಸ್ ಅಡಿ ಸಿಲುಕಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಉಮಾದೇವಿ ರಸ್ತೆಗುಂಡಿಗೆ ಬಲಿಯಾದ ಮಹಿಳೆ.

ಮಾಗಡಿ ರಸ್ತೆಯ ಸುಜಾತ ಥಿಯೇಟರ್ ಬಳಿ ಗುಂಡಿ ತಪ್ಪಿಸಲು ಹೋಗಿ ಕೆಎಸ್​ಆರ್​ಟಿಸಿ ಬಸ್​ನಡಿ ತಾಯಿ-ಮಗಳು ಸಿಲುಕಿದ್ದಳು. ಬಸ್ ಅಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಮಗಳನ್ನು ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಇದನ್ನು ಓದಿ –ಮಂಡ್ಯ ಜಿಲ್ಲೆಯಲ್ಲಿ ಅನಧೀಕೃತ ಟ್ಯೂಷನ್ ಕೇಂದ್ರ ರದ್ದು – ಡಿಡಿಪಿಐ ಆದೇಶ

ಉಮಾ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.ಇಂದು ಬೆಳಿಗ್ಗೆ 10 ಗಂಟೆಗೆ ಮೃತದೇಹವನ್ನು ಕುಂಟಬಸ್ಥರಿಗೆ ವೈದ್ಯರು ಹಸ್ತಾಂತರ ಮಾಡಲಿದ್ದಾರೆ.

ಬಸ್ ಚಾಲಕನ ವಿರುದ್ಧ FIR – ಬಂಧನ :

ಪ್ರಕರಣ ಸಂಬಂಧ KSRTC ಬಸ್ ಚಾಲಕ ಮಾರುತಿ ರಾವ್ ಬಂಧಿಸಿದ್ದಾರೆ. ಮಲ್ಲೇಶರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಉಮಾದೇವಿ ಪುತ್ರಿ ವನಿತಾ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮಾರುತಿ ರಾವ್ ವಿರುದ್ಧ FIR ದಾಖಲಾಗಿದೆ.

Share This Article
Leave a comment