ಮಂಡ್ಯ ಜಿಲ್ಲೆಯಲ್ಲಿ ಅನಧೀಕೃತ ಟ್ಯೂಷನ್ ಕೇಂದ್ರ ರದ್ದು – ಡಿಡಿಪಿಐ ಆದೇಶ

Team Newsnap
1 Min Read

ಮಂಡ್ಯ ಜಿಲ್ಲೆಯಲ್ಲಿ ಅನಧೀಕೃತ ಟ್ಯೂಷನ್ ಗಳನ್ನು ಕೂಡಲೇ ಬಂದ್ ಮಾಡಬೇಕು ಮತ್ತು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕರು ಟ್ಯೂಷನ್ ಮಾಡಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಮಂಡ್ಯ DDPI ಜವರೇಗೌಡರು ಎಚ್ಚರಿಸಿದ್ದಾರೆ.

ಮಳವಳ್ಳಿ ಟ್ಯೂಷನ್ ಗೆ ಹೋದ ಬಾಲಕಿಯ ಮೇಲೆ ಅತ್ಯಾಚಾರ – ಹತ್ಯೆ ಪ್ರಕರಣ ಬೆನ್ನಲ್ಲೇ ಕೊನೆಗೂ ಎಚ್ಚೆತ್ತ ಶಿಕ್ಷಣ ಇಲಾಖೆ ಅನಧಿಕೃತ ಟ್ಯೂಷನ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅನುಮತಿ ಪಡೆಯದೆ ಟ್ಯೂಷನ್ ನಡೆಸಿದರೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಡಿಡಿಪಿಐ ಜವರೇಗೌಡ ಸುತ್ತೋಲೆ ಹೊರಡಿಸಿದ್ದಾರೆ .ನ.10 ರಂದು ಬೆಂಗಳೂರಿಗೆ ಪ್ರಧಾನಿ : 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ

ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸಂಸ್ಥೆಯ‌ ಮೇಲ್ವಿಚಾರಕನಿಂದಲೇ ನಡೆದಿದ್ದ ಪೈಶಾಚಿಕ ಕೃತ್ಯದ ನಂತರ ಬಿಇಓ ನೀಡಿದ ವರದಿ ಆಧರಿಸಿ ಅನಧೀಕೃತವಾಗಿ ನಡೆಯುತ್ತಿದ್ದ ಟ್ಯೂಷನ್ ಸೆಂಟರ್ ರದ್ದು ಮಾಡಲು ನಿರ್ಧರಿಸಲಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಅಕ್ರಮ ಟ್ಯೂಷನ್ ಸೆಂಟರ್ ಪತ್ತೆ ಮಾಡುವಂತೆ ಡಿಡಿಪಿಐ ಸೂಚಿಸಿದ್ದಾರೆ.

ಅನಧಿಕೃತ ಟ್ಯೂಷನ್ ಕಂಡು ಬಂದರೆ ಮತ್ತು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕರು ಟ್ಯೂಷನ್ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಶಿಕ್ಷಣ ಇಲಾಖೆ ಎಚ್ಚರ ವಹಿಸುತ್ತದೆ ಎಂಬ ಭರವಸೆಯನ್ನು ಡಿಡಿಪಿಐ ನೀಡಿದ್ದಾರೆ.

Share This Article
Leave a comment