December 5, 2022

Newsnap Kannada

The World at your finger tips!

WhatsApp Image 2022 11 12 at 6.42.22 PM

Expensive watch shipment: Actor Shah Rukh Khan questioned by customs officials at airport ದುಬಾರಿ ವಾಚ್ ಸಾಗಾಟ: ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳಿಂದ ನಟ ಶಾರುಖ್ ಖಾನ್ ವಿಚಾರಣೆ

ದುಬಾರಿ ವಾಚ್ ಸಾಗಾಟ: ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳಿಂದ ನಟ ಶಾರುಖ್ ಖಾನ್ ವಿಚಾರಣೆ

Spread the love

ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದ ಘಟನೆ ನಡೆದಿದೆ.

ಕೆಲವು ದುಬಾರಿ ವಾಚ್‌ ಗಳ ಬಗ್ಗೆ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಶಾರುಖ್ ತಂಡವನ್ನು ಗಂಟೆಗಳ ಕಾಲ ತಡೆದರು. ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡುವ ಮೊದಲು ಅವರು 6.83 ಲಕ್ಷ ರೂ ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ.ಹಾಸನದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಮುಖ್ಯ ಶಿಕ್ಷಕನಿಗೆ ಧರ್ಮದೇಟು – ಬಂಧನ

ಶಾರ್ಜಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಶಾರುಖ್ ಖಾನ್ ಹಿಂತಿರುಗುತ್ತಿದ್ದರು. ಖಾಸಗಿ ಜೆಟ್‌ ನಲ್ಲಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಬಂದಿಳಿದಿದ್ದರು.

ಶಾರುಖ್ ಖಾನ್ ಮತ್ತು ಅವರ ಜೊತೆಗಿದ್ದವರು ಟರ್ಮಿನಲ್‌ ನಿಂದ ಹೊರಡುವಾಗ ಲಗೇಜ್‌ ನಲ್ಲಿ ಐಷಾರಾಮಿ ಕೈಗಡಿಯಾರಗಳು ಕಂಡುಬಂದಿವೆ.

ಶಾರುಖ್ ಮತ್ತು ಅವರ ಮ್ಯಾನೇಜರ್ ಅವರನ್ನು ಅಧಿಕಾರಿಗಳ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಹೊರಡಲು ಅನುಮತಿ ನೀಡಿದ್ದರು. ಆದರೆ ಅವರ ಅಂಗರಕ್ಷಕ ಸೇರಿದಂತೆ ಕೆಲವು ಸದಸ್ಯರನ್ನು ಇಡೀ ರಾತ್ರಿ ವಿಚಾರಣೆಗಾಗಿ ಇರಿಸಲಾಗಿತ್ತು. ಅವರುಗಳು ಹೊರಡಲು ಬೆಳಿಗ್ಗೆ ಅನುಮತಿ ನೀಡಲಾಯಿತು.

ಸುಮಾರು 18 ಲಕ್ಷ ರು ಮೌಲ್ಯದ ಆರು ದುಬಾರಿ ವಾಚ್‌ ಗಳ ಪ್ಯಾಕೇಜಿಂಗ್‌ ಗಳು ಶಾರುಖ್ ಮತ್ತು ಅವರ ಜೊತೆಯಲ್ಲಿದ್ದವರ ಬ್ಯಾಗ್ ನಲ್ಲಿ ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ.

ಶಾರುಖ್ ಖಾನ್ ಅವರು ನಿನ್ನೆ ಶಾರ್ಜಾ ಇಂಟರ್‌ ನ್ಯಾಶನಲ್ ಬುಕ್ ಫೇರ್ 2022 ರಲ್ಲಿ ಭಾಗವಹಿಸಿದ್ದರು.

error: Content is protected !!