ಹಾಸನದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಮುಖ್ಯ ಶಿಕ್ಷಕನಿಗೆ ಧರ್ಮದೇಟು – ಬಂಧನ

Team Newsnap
1 Min Read
Sexual harassment of a student in Hassan - teacher arrested ಹಾಸನದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಮುಖ್ಯ ಶಿಕ್ಷಕನಿಗೆ ಧರ್ಮದೇಟು - ಬಂಧನ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಹಿನ್ನೆಲೆ ಮುಖ್ಯ ಶಿಕ್ಷಕನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಜರುಗಿದೆ.

ಸಂಕೇನಹಳ್ಳಿ ಸಮೀಪದ ತರಳಬಾಳು ವಿದ್ಯಾಸಂಸ್ಥೆಗೆ ಸೇರಿದ ಶಿವನಂಜುಂಡೇಶ್ವರ ಶಾಲೆಯ ಮುಖ್ಯ ಶಿಕ್ಷಕ ನರೇಂದ್ರ, ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಪದೇ ಪದೇ ತನ್ನ ಕಚೇರಿಗೆ ಕರೆದು ಕಸ ಗುಡಿಸುವಂತೆ ಹೇಳುತ್ತಿದ್ದ. ಅಲ್ಲದೇ ವಿದ್ಯಾರ್ಥಿನಿಯರ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದ.FSL ವರದಿಯಲ್ಲಿ ಚಂದ್ರು ಸಾವಿನ ಸ್ಫೋಟಕ ಸತ್ಯ: ಕೊಲೆ ಅಲ್ಲ ಎಂಬುದು ಅಷ್ಟೇ ನಿಜ ?

ನ. 7 ರಂದು ಅರ್ಧ ವಾರ್ಷಿಕ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿನಿಯನ್ನು ತನ್ನ ಕಚೇರಿಗೆ ಕರೆದು ಕೈ ಹಿಡಿದು ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದ ಎನ್ನಲಾಗಿದೆ.

ವಿದ್ಯಾರ್ಥಿನಿ ಮುಜುಗರ ಹಾಗೂ ಹೆದರಿಕೆಯಿಂದ ಈ ವಿಷಯವನ್ನುಯಾರಿಗೂ ತಿಳಿಸಿರಲಿಲ್ಲ. ಈ ವಿಚಾರ ಕೆಲ ಸಹಪಾಠಿಗಳಿಗೆ ಗೊತ್ತಾದ ಬಳಿಕ ವಿದ್ಯಾರ್ಥಿನಿ ತನ್ನ ತಾಯಿ ಹಾಗೂ ದೊಡ್ಡಪ್ಪನ ಮಗನಿಗೆ ವಿಷಯ ತಿಳಿಸಿದ್ದಾಳೆ. ನವೆಂಬರ್ 10 ರಂದು ವಿದ್ಯಾರ್ಥಿನಿ ಪೋಷಕರು ಈ ಸಂಬಂಧ ಮುಖ್ಯಶಿಕ್ಷಕನನ್ನು ವಿಚಾರಿಸಿ ಪೊಲೀಸ್ ಠಾಣೆಗೆ ಕರೆದಿದ್ದಾರೆ. ಪೊಲೀಸ್ ಠಾಣೆಗೆ ಬರಲು ಒಪ್ಪದಿದ್ದಾಗ ಆತನಿಗೆ ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರು ರಕ್ಷಣೆ ನೀಡಿ ಆತನನ್ನು ಠಾಣೆಗೆ ಕರೆದುಕೊಂಡು ಹೋದರು

ನಂತರ ಪ್ರಕರಣ ದಾಖಲಿಸಿ ಆರೋಪಿ ಶಿಕ್ಷಕನನ್ನು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಶಿವನಂಜುಂಡೇಶ್ವರ ವಿದ್ಯಾ ಸಂಸ್ಥೆಯು ಮುಖ್ಯಶಿಕ್ಷಕ ನರೇಂದ್ರನನ್ನು ಅಮಾನತು ಮಾಡಲು ಮುಂದಾಗಿದೆ ಎಂದು ಯಲಹಂಕ ತರಳಬಾಳು ವಿದ್ಯಾಸಂಸ್ಥೆ ಅಧ್ಯಕ್ಷ ಪಂಚಾಕ್ಷರಯ್ಯ ತಿಳಿಸಿದ್ದಾರೆ.

Share This Article
Leave a comment