ಮಾಜಿ ಸಚಿವ, ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೋಳಿ, ಬಿಜೆಪಿಗೆ ಗುಡ್ ಬೈ – JDS ಗೆ ಸೇರ್ಪಡೆ ?

Team Newsnap
1 Min Read
Former Minister, Gokak MLA Ramesh Jarkiholi, Goodbye to BJP - Joining JDS? ಮಾಜಿ ಸಚಿವ, ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೋಳಿ, ಬಿಜೆಪಿಗೆ ಗುಡ್ ಬೈ - JDS ಗೆ ಸೇರ್ಪಡೆ ?

ಮಾಜಿ ಸಚಿವ, ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೋಳಿ, ಬಿಜೆಪಿಗೆ ಗುಡ್ ಬೈ ಹೇಳುವ ಕಾಲ ಬಂದಿದೆ.

ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕ ತರಲು ಆಪರೇಷನ್‌ ಕಮಲಕ್ಕೆ ಸಾಥ್ ನೀಡಿದ ಜಾರಕಿಹೋಳಿ ಸಚಿವ ಸ್ಥಾನ ಕಳೆದುಕೊಂಡ ನಂತರ ಮತ್ತೆ ಬಿಜೆಪಿಯಲ್ಲಿ ಮೂಲೆಗುಂಪಾದರು.ದುಬಾರಿ ವಾಚ್ ಸಾಗಾಟ: ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳಿಂದ ನಟ ಶಾರುಖ್ ಖಾನ್ ವಿಚಾರಣೆ

ಸಚಿವ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಲು ಬಿಜಿಪಿ ನಾಯಕರು ಒಪ್ಪದಿರುವುದಕ್ಕೆ ರಮೇಶ್ ಜಾರಕಿಹೋಳಿ ಅಸಮಾಧಾನಗೊಂಡು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್‌ ಸೇರಲು ನಿರ್ಧರಿಸಿದ್ದಾರೆ.

ಜೆಡಿಎಸ್‌ ವರಿಷ್ಠ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಜಾರಕಿಹೋಳಿ ಸೇರ್ಪಡೆಯು ಅವರ ಪ್ರಭಾವ ಹೊಂದಿರುವ ಉತ್ತರ ಕರ್ನಾಟಕ
ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಜೆಡಿಎಸ್ ‌ ಲೆಕ್ಕಾಚಾರ ಹಾಕಿರುವ ಬಗ್ಗೆ ಜೆಡಿಎಸ್‌ ಮುಖಂಡರೊಬ್ಬರು ವಿವರಿಸಿದರು.

ಬೆಳಗಾವಿಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಜಾರಕಿಹೋಳಿ ಭಾಗವಹಿಸಿಲ್ಲ, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಯೋಜನೆಗಳ ಭಾಗವಾಗಿಲ್ಲ ಎಂದು ಸೂಚಿಸುತ್ತದೆ.

27 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಜಾರಕಿಹೋಳಿ ಅವರ ನಿರ್ಗಮನವ ಬಿಜೆಪಿಯ ಅವಕಾಶಗಳಿಗೆ ಧಕ್ಕೆ ತರುವ ಸಾಧ್ಯತೆಯಂತೂ ನಿಚ್ಚಳವಾಗಿದೆ.

Share This Article
Leave a comment