ದೆಹಲಿ, ಸುತ್ತಮುತ್ತ ಭೂಕಂಪನ; ಮನೆಯಿಂದ ಹೊರಗೆ ಓಡಿಬಂದ ಜನ

Team Newsnap
1 Min Read

ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಕೆಲವು ನಗರಗಳಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ, ಭೂಮಿ ಕಂಪಿಸಿದಂತೆ ಭಾಸವಾಗುತ್ತಿದ್ದಂತೆ ಜನರು ಮನೆಗಳು ಹಾಗೂ ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ.

ಕಳೆದೊಂದು ವಾರದಲ್ಲಿ ನವದೆಹಲಿಯಲ್ಲಿ ಈ ರೀತಿಯ ಭೂಕಂಪನದ ಅನುಭವ ಎರಡನೇ ಬಾರಿ ಆಗುತ್ತಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ.

ಈ ವಾರದ ಆರಂಭದಲ್ಲಿ ದೆಹಲಿ ಪ್ರದೇಶದಲ್ಲಿ ಅನುಭವಿಸಿದ ಭೂಕಂಪದ ತೀವ್ರತೆಗಿಂತ ಕಡಿಮೆಯಾಗಿದೆ. ಈ ಭೂಕಂಪನದ ಆಳ ಮತ್ತೆ ಭೂಮಿಯ ಮೇಲ್ಮೈಯಿಂದ 10 ಕಿಲೋ ಮೀಟರ್ ಕೆಳಗಿರುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ. ನೋಯ್ಡಾ ಮತ್ತು ಗುರುಗ್ರಾಮದಲ್ಲಿ ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿವೆ.

ಕಳೆದ ಬುಧವಾರ ನಸುಕಿನ ಜಾವ ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತು. ಇದರ ಬೆನ್ನಲ್ಲೇ ದೆಹಲಿ-ಎನ್‌ಸಿಆರ್ ಪ್ರದೇಶದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಯಿತು. ಬುಧವಾರ ನಸುಕಿನ 1.57ರ ಸುಮಾರಿಗೆ ಭೂಕಂಪ ಸಂಭವಿಸಿತು, ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಪ್ರಕಾರ ನೇಪಾಳ ಭೂಕಂಪದ ಕೇಂದ್ರಬಿಂದುವಾಗಿತ್ತು.

ನೇಪಾಳದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಮಾಹಿತಿಯ ಪ್ರಕಾರ, ನೇಪಾಳದಲ್ಲಿ ಮಂಗಳವಾರ ರಾತ್ರಿ 8.52 ಕ್ಕೆ 4.9 ತೀವ್ರತೆಯ ಮೊದಲ ಭೂಕಂಪವಾಗಿತ್ತು. ನಂತರ 9.41 ಕ್ಕೆ 3.5 ತೀವ್ರತೆಯ ಭೂಕಂಪ ದಾಖಲಾಯಿತು. ಬುಧವಾರ ಮುಂಜಾನೆ 1.57ಕ್ಕೆ 6.3 ತೀವ್ರತೆಯ ಮೂರನೇ ಭೂಕಂಪನ ಸಂಭವಿಸಿದ್ದು, ಇದರ ಕಂಪನವು ದೆಹಲಿಯಲ್ಲಿ ಅನುಭವವಾಯಿತು.

Share This Article
Leave a comment