ಇಂದು ಸಿದ್ದು ಕೋಲಾರ ಯಾತ್ರೆ : ವಿಧಾನಸಭಾ ಚುನಾವಣೆ ಅಖಾಡಕ್ಕೆ ಕೋಲಾರವೇ ಫೈನಲ್ ? ಕಾರ್ಯಕ್ರಮ ವಿವರ

Team Newsnap
1 Min Read
Siddhu Kolar Yatra today: Is Kolar the final stage for assembly elections? ಇಂದು ಸಿದ್ದು ಕೋಲಾರ ಯಾತ್ರೆ : ವಿಧಾನಸಭಾ ಚುನಾವಣೆ ಅಖಾಡಕ್ಕೆ ಕೋಲಾರವೇ ಫೈನಲ್ ? ಕಾರ್ಯಕ್ರಮ ವಿವರ

ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರವೇ ಸೂಕ್ತ ಕ್ಷೇತ್ರ ಎಂಬ ಅಭಿಪ್ರಾಯಕ್ಕೆ ಸ್ಥಳೀಯ ಕೈ ನಾಯಕರು ಬಂದ ಬೆನ್ನಲ್ಲೇ ಇಂದು ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ.

ಈ ಭೇಟಿ ಒಂದು ರೀತಿಯಲ್ಲಿ ಸಿದ್ದರಾಮಯ್ಯ ಶಕ್ತಿಪ್ರದರ್ಶನ ಹೌದು. ಮತ್ತೊಂದು ಕ್ಷೇತ್ರ ಸಮೀಕ್ಷೆ ಬಳಿಕ ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಭೇಟಿ ವಿಶೇಷವಾಗಿದೆ.ದೆಹಲಿ, ಸುತ್ತಮುತ್ತ ಭೂಕಂಪನ; ಮನೆಯಿಂದ ಹೊರಗೆ ಓಡಿಬಂದ ಜನ

ಭಾನುವಾರ ಕೋಲಾರ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯನವರ ಮಾಸ್ಟರ್​ ಪ್ಲಾನ್​

ಕಾರ್ಯಕ್ರಮಗಳ ವಿವರ :

1) ಕೋಲಾರ ನಗರದ ಅಧಿದೇವತೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

2) ಮೆಥೋಡಿಸ್ಟ್​ ಚರ್ಚ್​ಗೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

3) ಕಾಲೇಜು ವೃತ್ತದಲ್ಲಿನ ವಾಲ್ಮಿಕಿ ಮಹರ್ಷಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

4) ಇಟಿಸಿಎಂ ಸರ್ಕಲ್​ ನಲ್ಲಿರುವ ಸಂಗೊಳ್ಳಿರಾಯಣ್ಣ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

5) ಕ್ಲಾಕ್ ಟವರ್ ಬಳಿ ಇರುವ ಕುತುಬ್ ಶಾ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

6) ಕೈವಾರ ತಾತಯ್ಯನವರ ವಿಗ್ರಹಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.

7) ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯಲ್ಲಿ ಕೋಲಾರಕ್ಕೆ ಕೊಟ್ಟ ಕೆಸಿ ವ್ಯಾಲಿ ನೀರಾವರಿ ಯೋಜನೆಯ ನರಸಾಪುರ ಕೆರೆಗೆ ಬೇಟಿ ನೀಡಿ ಜಿಲ್ಲೆಯ ಜನರಿಗೆ ತಮ್ಮ ಕೊಡುಗೆಯನ್ನು ನೆನಪಿಸುವ ಕೆಲಸವನ್ನೂ ಮಾಡಲಿದ್ದಾರೆ.

Share This Article
Leave a comment