ಸಂಧ್ಯಾರತಿ ಇರಲಿ – ಸಲಾಂ ಕೈ ಬಿಡಿ – ಮೇಲುಕೋಟೆ ಸ್ಥಾನಿಕರಿಂದ ಡಿಸಿಗೆ ಮನವಿ

Team Newsnap
1 Min Read

ಚಲುವನಾರಾಯಣಸ್ವಾಮಿಗೆ ನಿತ್ಯ ಸಂಜೆ ವೇಳೆ ಸಲ್ಲುವ ಸಂಧ್ಯಾಆರತಿ ಜೊತೆಯಲ್ಲಿ ಸಲಾಂ ಆರತಿ ಹೆಸರನ್ನು ತೆಗೆಯುವಂತೆ ಮೇಲುಕೋಟೆ ಸ್ಥಾನಿಕರು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಂಧ್ಯಾರತಿ ಹೆಸರನ್ನು ಉಳಿಸಿಕೊಂಡು ಸಲಾಂ ಕೈ ಬಿಡಬೇಕು. ತ್ರಿಕಾಲದಲ್ಲಿ ದೇವರಿಗೆ ಆರತಿ ಮಾಡುವ ಪದ್ಧತಿ ಎಲ್ಲಾ ದೇವಾಲಯದಲ್ಲಿ ಇದೆ.

ಸಂಜೆ ವೇಳೆ ಮೇಲುಕೋಟೆ ದೇವಾಲಯದಲ್ಲಿ ಸಂಧ್ಯಾರತಿಯನ್ನು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರಲಾಗಿದೆ ಎಂದು ಸ್ಥಾನಿಕ ಶ್ರೀನಿವಾಸ್ ಹೇಳಿದ್ದಾರೆ.

ಸಂಧ್ಯಾರತಿಗೆ ಯಾರ ಆಕ್ಷೇಪಣೆ ಇಲ್ಲ. ಆದರೆ ಇಲ್ಲಿ ಹೇಳಲಾಗುವ ಸಲಾಂ ಪದಕ್ಕೆ ಎಲ್ಲರ ಆಕ್ಷೇಪಣೆ ಉಇದೆ. ಸಲಾಂ ಪದ ರದ್ದು ಮಾಡಲು ಹಲವು ವರ್ಷಗಳಿಂದ ಕೂಗಿದೆ. ಈ ವಿಚಾರವಾಗಿ ಸರ್ಕಾರ ಪರಿಶೀಲನೆ ಮಾಡಿ ಸಲಾಂ ಪದ ತೆಗೆಯಬೇಕು ಎಂದು ಮನವಿ ಮಾಡಿದರು.

ಮುಸ್ಲಿಂ ದಾಳಿಕೋರರಿಂದ ದಾಳಿಯಾದ ಸಂದರ್ಭದಲ್ಲಿ ಅಥವಾ ಟಿಪ್ಪುವಿನ ಕಾಲದಲ್ಲಿ ಸಂಧ್ಯಾರತಿಗೆ ಸಲಾಂ ಪದ ಸೇರಿದೆ. ಮೂಲ ಮೂರ್ತಿಗೆ ಆರತಿಯಾಗುವ ಸಂದರ್ಭದಲ್ಲಿ ದೇವಾಲಯದ ಹೊರಗಡೆ ದೀವಟಿಗೆ ಸಲಾಂ ಮಾಡಲಾಗುತ್ತೆ. ಬಳಿಕ ದೇವಾಲಯ ಗರ್ಭಗುಡಿಯ ಬಳಿಯು ದೀವಟಿಗೆ ಸಲಾಂ ಮಾಡಲಾಗುತ್ತೆ. ಚಲುವನಾರಾಯಣ ಸ್ವಾಮಿ ಎಲ್ಲಾ ಉತ್ಸವ ಮುಗಿಸಿ ಆಸ್ಥಾನಕ್ಕೆ ಬರುವ ವೇಳೆ ಈ ದೀವಟಿಗೆ ಸಲಾಂ ಮಾಡಲಾಗುತ್ತೆ ಎಂದರು.

Share This Article
Leave a comment