ನನ್ನ ವಿಶೇಷ ಕತ೯ವ್ಯ ಅಧಿಕಾರಿಯನ್ನು ಒಂದು ವಾರದ ಹಿಂದೆಯೇ ಕಿತ್ತು ಹಾಕಿದ್ದೇನೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಜನ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದಿನೇಶ್ ಗೂಳಿಗೌಡನ ಬಗ್ಗೆ ನಮ್ಮ ಪಕ್ಷದ ಹಿರಿಯರು ಕರೆ ಮಾಡಿ ನಮ್ಮ ಹುಡುಗನನ್ನು ನಿಮ್ಮ ಇಲಾಖೆಗೆ ತೆಗೆದುಕೊಳ್ಳಿ ಎಂದು ಸಲಹೆ ಕೊಟ್ಟರು.
ಅವರ ಮಾತಿಗೆ ಗೌರವ ಕೊಟ್ಟು ಆತನನ್ನು ವಿಶೇಷ ಅಧಿಕಾರಿ ಮಾಡಿಕೊಂಡೆ. ಆದರೆ ಆತ ವಾರದ ಹಿಂದೆ ನಮ್ಮ ಮನೆಗೆ ಬಂದವನು MLC ಟಿಕೆಟ್ ಆಕಾಂಕ್ಷಿತ. ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದೇನೆ ಎಂದು ಹೇಳಿದ್ದ.ಅಕೂಡಲೇ
ತಕ್ಷಣ ಆತನನ್ನು ತೆಗೆದುಹಾಕಿದ್ದೇನೆ ಎಂದರು.
ಮಾಜಿಸಿಎಂ ಎಸ್‌ಎಂ ಕೃಷ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಬಗ್ಗೆ ಎಸ್‌ಟಿಎಸ್ ಅಸಮಾಧಾನ ವ್ಯಕ್ತಡಿಸಿದರು.
ಜಮೀನು , ಸೈಟ್ ಮಾಡುವ ಆಸಾಮಿ :
ಹಾಲಿ MLC ಅಪ್ಪಾಜಿ ಗೌಡ ಮಾತ್ರ ಯಾವೊಬ್ಬ ಗ್ರಾ.ಪಂ ಸದಸ್ಯರ ಮನೆಗೆ ತೆರಳಿ ಒಂದು ಸ್ವೀಟ್ ಬಾಕ್ಸ್ ಕೂಡ ಕೊಟ್ಟವನಲ್ಲ ಎಂದು ಜೆಡಿಎಸ್ ಅಪ್ಪಾಜಿಗೌಡರ ಬಗ್ಗೆ ವಿಶ್ಲೇಷಣೆ ಮಾಡಿದರು.
ಎಲ್ಲಿ ಜಮೀನಿದೆ, ಎಲ್ಲಿ ಸೈಟ್ ಮಾಡಬಹುದು ಎಂಬ ಬಗ್ಗೆ ಗಮನಕೊಟ್ಟವನು ಅಪ್ಪಾಜಿಗೌಡ. ಜನಸೇವೆ ಮಾಡುವ ಭಾವನೆ ಆತನಲ್ಲಿಲ್ಲ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು