ಫೇಸ್​​ಬುಕ್​ ಲವ್​; ಮದುವೆಗೆ ನಿರಾಕರಿಸಿದ ಯುವಕನ ಮೇಲೆ ಆ್ಯಸಿಡ್​ ದಾಳಿ – ಮಹಿಳೆ ಬಂಧನ

Team Newsnap
1 Min Read

ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬಳು ಯುವಕನ ಮೇಲೆ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ನವೆಂಬರ್ 16 ರಂದು ಕೇರಳದ ತಿರುವನಂತಪುರಂನಲ್ಲಿ ತಡವಾಗಿ ಬೆಳಕಿಗೆ ಬಂದಿದೆ

ಆ್ಯಸಿಡ್​ ದಾಳಿಗೆ ಒಳಗಾಗಿರುವ ಯುವಕ ಅರುಣ್​ (28)ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆ್ಯಸಿಡ್​ ದಾಳಿ ಮಾಡಿದ 35 ವರ್ಷದ ಮಹಿಳೆ ಷಿಬಾಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಸಂದರ್ಭದಲ್ಲಿ ಮಹಿಳೆಗೂ ಆ್ಯಸಿಡ್​ನಿಂದ ಗಾಯಗಳಾಗಿವೆ ಯುವಕನ ದೂರಿನ ಅನ್ವಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಆ್ಯಸಿಡ್​ ದಾಳಿಗೆ ಒಳಗಾಗಿರುವ ಯುವಕ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದು, ಮುಖ ಹಾಗೂ ಕುತ್ತಿಗೆ ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ದಾಖಲು :

ಯುವತಿ ಆ್ಯಸಿಡ್​​ ದಾಳಿ ನಡೆಸಿದ ದೃಶ್ಯಗಳು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿವೆ

ಈ ಮಹಿಳೆಗೆ ಫೇಸ್​​ಬುಕ್​​ನಲ್ಲಿ ಯುವಕನ ಪರಿಚಯವಾಗಿ ಇಬ್ಬರ ನಡುವೆ ಕೆಲ ಸಮಯದ ಬಳಿಕ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.

ಆದರೆ ಆಕೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದ ಬಳಿಕ ಯುವಕ ಮಹಿಳೆಯಿಂದ ದೂರವಾಗಲು ಮುಂದಾದ .

ಮಹಿಳೆ ಮಾತ್ರ ಯುವಕನನ್ನು ಬ್ಲ್ಯಾಕ್​ ಮೇಲ್​ ಮಾಡಿ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದಳಂತೆ. ಇದಕ್ಕೆ ಯುವಕ ಒಪ್ಪದ ಕಾರಣ ಆ್ಯಸಿಡ್ ಮಾಡಿದ್ದಾಳೆ ಎಂದು ಹೇಳಲಾಗಿದೆ.

Share This Article
Leave a comment