December 5, 2022

Newsnap Kannada

The World at your finger tips!

hindi , bollywood , actress

'Dada Saheb Phalke' award to Hindi actress Asha Parekh ಹಿಂದಿ ನಟಿ ಆಶಾ ಪರೇಖ್ ಗೆ 'ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ

ಹಿಂದಿ ನಟಿ ಆಶಾ ಪರೇಖ್ ಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ

Spread the love

ಭಾರತೀಯ ಸಿನಿಮಾ ರಂಗದ ಹೆಸರಾಂತ ನಟಿ ಆಶಾ ಪರೇಖ್ ಅವರಿಗೆ 52ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಆಶಾ ಅವರಿಗೆ ಈ ಪ್ರಶಸ್ತಿ ಸಂದಿದೆ.

ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಈ ಅತ್ಯುನ್ನತ ಗೌರವವನ್ನು ‘ದಾದಾ ಸಾಹೇಬ್ ಫಾಲ್ಕೆ’ ಹೆಸರಿನಲ್ಲಿ ಕೊಡಲಾಗುತ್ತದೆ. ಕಳೆದ ಬಾರಿ ಈ ಗೌರವವು ರಜನಿಕಾಂತ್ ಅವರಿಗೆ ಸಂದಿತ್ತು.ಇದನ್ನು ಓದಿ –ಮಂಡ್ಯದಲ್ಲಿ PFI ಜಿಲ್ಯಾಧ್ಯಕ್ಷ ಸೇರಿ ನಾಲ್ವರು ಮುಖಂಡರ ಬಂಧನ – ಪ್ರತಿಭಟನೆ ಮಾಡಿದ ಕಾರ್ಯಕರ್ತರು

ಈ ಬಾರಿ ಆಶಾ ಅವರಿಗೆ ದೊರೆತಿದೆ. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆಯನ್ನು ಎಎನ್ಐ ಸಂಸ್ಥೆಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಂಡಿದೆ.

WhatsApp Image 2022 09 27 at 4.24.23 PM

ಭಾರತದ ಅತ್ಯುನ್ನತ ಸಿನಿಮಾ ಪ್ರಶಸ್ತಿಯಾಗಿರುವ ಈ ಗೌರವವು ಕನ್ನಡದ ಡಾ.ರಾಜ್ ಕುಮಾರ್ ಅವರಿಗೂ ದೊರೆತಿದೆ. ಅಲ್ಲದೇ, ವಿನೋದ್ ಖನ್ನಾ, ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ದಿಗ್ಗಜರು ಈ ಗೌರವವಕ್ಕೆ ಪಾತ್ರರಾಗಿದ್ದಾರೆ.

WhatsApp Image 2022 09 27 at 4.25.07 PM

1952ರಲ್ಲಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಆಶಾ ಪರೇಖ್ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ದಿಲ್ ದೇಕೆ ದೇಖೋ ಇವರು ನಾಯಕಿಯಾಗಿ ನಟಿಸಿದ್ದ ಮೊದಲ ಸಿನಿಮಾ. ಆಂದೋಲನ್ ಸಿನಿಮಾದಲ್ಲಿ ಕೊನೆಯ ಬಾರಿಗೆ ನಟಿಸಿ, ಅಲ್ಲಿಂದ ಸಿನಿಮಾ ರಂಗದಿಂದಲೇ ದೂರವಾದವರು. 79ರ ವಯಸ್ಸಿನ ಈ ನಟಿ ಇವತ್ತಿಗೂ ಸಿನಿಮಾ ರಂಗದ ಬಗ್ಗೆ ಅಷ್ಟೇ ಪ್ರೀತಿ, ಒಲವು ಇಟ್ಟುಕೊಂಡಿದ್ದಾರೆ.

error: Content is protected !!