ದೇಶದಲ್ಲಿ ಪಿಎಫ್​​ಐ ಸಂಘಟನೆ 5 ವರ್ಷ ಬ್ಯಾನ್​ – ಕೇಂದ್ರದ ಆದೇಶ

Team Newsnap
1 Min Read

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪದ ಮೇಲೆ ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ವನ್ನು 5 ವರ್ಷಗಳ ಕಾಲ ನಿಷೇಧಿಸಿದೆ.

ಕೇಂದ್ರ ಗೃಹ ಸಚಿವಾಲಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಅಥವಾ ಅಂಗಸಂಸ್ಥೆ ಅಥವಾ ರಂಗಗಳನ್ನು ಕಾನೂನುಬಾಹಿರ ಸಂಘ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ UAPA ಕಾಯ್ದೆ ಅಡಿ ಆದೇಶ ಹೊರಡಿಸಿದೆ.

ಪಿಎಫ್‌ಐ ಅಂಗ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಲಾಗಿದೆ.

PFI ಮುಖಂಡರ ಮನೆ ಮೇಲೆ ಎನ್​​ಐಎ ದಾಳಿ ಮಾಡಿದ್ದ ಸಂದರ್ಭದಲ್ಲಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಹಾಗೂ ದೇಶದಾದ್ಯಂತ ವಿಧ್ವಂಸಕಾರಿ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಖಚಿತ ಸಾಕ್ಷ್ಯಧಾರ ಲಭ್ಯ ಹಿನ್ನೆಲೆ PFI ನಿಷೇಧ ಮಾಡಲಾಗಿದೆ. ಮುರುಘಾ ಸ್ವಾಮೀಜಿ ಪೀಠ ತ್ಯಾಗದ ಅಂತಿಮ ನಿರ್ಧಾರಕ್ಕೆ ಸೆ.29 ರಂದ ಮಹತ್ವದ ಸಭೆ

ಕೇಂದ್ರ ಸರ್ಕಾರದ ಮೇಲೆ PFI ಸಂಘಟನೆ ನಿಷೇಧಕ್ಕೆ ಮಾಡಲು ವ್ಯಾಪಕ ಒತ್ತಡವೂ ಕೂಡ ಕೇಳಿ ಬಂದಿತ್ತು.ವಿದೇಶಗಳಿಂದ ಅಕ್ರಮ ದೇಣಿಗೆ, ಸಾರ್ವಜನಿಕರ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಪಿಎಫ್‌ಐ ಕಚೇರಿಗಳು ಹಾಗೂ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು.

Share This Article
Leave a comment