ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಪರಿಷ್ಕರಣೆಗೆ ಸಮಿತಿ ರಚನೆಗೆ ನಿರ್ಧಾರ : ಡಿಸೆಂಬರ್ ಅಂತ್ಯಕ್ಕೆ ವರದಿ

Team Newsnap
1 Min Read

ರಾಜ್ಯ ಸರ್ಕಾರ ತನ್ನ ನೌಕರರಿಗೆ ವೇತನ ಪರಿಷ್ಕರಣೆಮಾಡಲ ಸಮಿತಿ ರಚಿಸಲು ಸಿದ್ಧತೆ ಮಾಡಿಕೊಂಡಿದೆ. ದಸರಾ ನಂತರ ಸಮಿತಿ ರಚನೆಯಾಗಲಿದೆ , ಡಿಸೆಂಬರ್ ಅಂತ್ಯಕ್ಕೆ ವರದಿ ಮಂಡನೆಯಾಗಲಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ವೇತನ ಜಾರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

1) ಮೂಲ ವೇತನದಲ್ಲಿ ಡಿಎ ಶೇ. 25 ರಿಂದ 30ರಷ್ಟು ವಿಲೀನವಾಗುವ ಸಾಧ್ಯತೆ ಇದೆ

2) ಸುಮಾರು 6 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರಗಳ ಸಿಬ್ಬಂದಿ ಹಾಗೂ 4.50 ಲಕ್ಷ ಪಿಂಚಣಿದಾರಾರಿಗೆ ಅನುಕೂಲವಾಗಲಿದೆ.

3) 17000 ಮೂಲವೇತನ ಡಿಎ ವಿಲೀನವಾದಾಗ 21 ಸಾವಿರ ರೂ.ಗೆ ಏರಿಕೆಯಾಗಲಿದೆ.

4) ರಾಜ್ಯದಲ್ಲಿ ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರಿಗೆ ವೇತನ ನೀಡುತ್ತಿದೆ

5) 7ನೇ ವೇತನ ಆಯೋಗ ರಚನೆಗೆ ಮತ್ತು ಕೇಂದ್ರ ಸರ್ಕಾರ ನೌಕರರಿಗೆ ಸಮನಾದ ವೇತನ, ಭತ್ಯೆ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿಯ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಮಿತಿ ರಚಿಸಿ ಮುಂದಿನ ಕ್ರಮಕ್ಕೆ ಸಿದ್ದತೆ ಮಾಡಿಕೊಂಡಿದೆ.

Share This Article
Leave a comment