ಮುರುಘಾ ಸ್ವಾಮೀಜಿ ಪೀಠ ತ್ಯಾಗದ ಅಂತಿಮ ನಿರ್ಧಾರಕ್ಕೆ ಸೆ.29 ರಂದ ಮಹತ್ವದ ಸಭೆ

Team Newsnap
1 Min Read

ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಅವರನ್ನು ಪೀಠದಿಂದ ಕೆಳಗೆ ಇಳಿಸಲು, ಸೆ. 29 ರಂದು ಲಿಂಗಾಯತ ಮುಖಂಡರು ಮಹತ್ವದ ಸಭೆ ಕರೆದಿದ್ದಾರೆ.

ಮುರುಘಾ ಸ್ವಾಮೀಜಿ ಪೀಠತ್ಯಾಗ ಮಾಡೇ ಇಲ್ಲ ಇದರಿಂದಾಗಿ ಶ್ರೀಮಠದ ದೈನಂದಿನ ಧಾರ್ಮಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಸವಾಲು ಎದುರಾಗಿದೆ, ಈ ಕುರಿತು ಚರ್ಚಿಸಲು ಸೆ.29 ರಂದು ವೀರಶೈವ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ.ಇದನ್ನು ಓದಿ -40 ಕ್ಕೂ ಹೆಚ್ಚು PFI, SDPI ಕಾರ್ಯಕರ್ತರ ವಶ: ರಾಜ್ಯ ಪೊಲೀಸರಿಂದ ಶಾಕ್‌

ಮಾಜಿ ಸಚಿವ ಹೆಚ್. ಏಕಾಂತಯ್ಯ ನೇತೃತ್ವದಲ್ಲಿ ಸಿಬಾರದ ಎಸ್ಸೆನ್ ಸ್ಮಾರಕದಲ್ಲಿ ಬೆಳಗ್ಗೆ 11.30 ಕ್ಕೆ ಸಭೆ ಕರೆಯಲಾಗಿದೆ ಸಭೆಯ ಕುರಿತು ಸಮಾಜದ ಮುಖಂಡರಿಗೆ ಪತ್ರವೊಂದನ್ನು ಕಳುಹಿಸಲಾಗಿದೆ.

Share This Article
Leave a comment