ನಿಷೇದಿತ ಅರಣ್ಯ ಪ್ರದೇಶದಲ್ಲಿ ಸಫಾರಿ : ಜಗ್ಗಿ ಸದ್ಗುರು, ಅಸ್ಸಾಂ CM ವಿರುದ್ದವೇ ಎಫ್​ಐಆರ್

Team Newsnap
1 Min Read

ಅಸ್ಸಾಂನ ನಿಷೇಧಿತ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಸಫಾರಿಗೆ ಹೋಗಿದ್ದ ಅಸ್ಸಾಂ ಸಿಎಂ ಹಾಗೂ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್​ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವನ್ಯಜೀವ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಅಂತ ದೂರು ದಾಖಲಾಗಿದೆ. ಒಬ್ಬರು ಆಧ್ಯಾತ್ಮಿಕ ಗುರು. ಮತ್ತೊಬ್ಬರು ಮುಖ್ಯಮಂತ್ರಿಯಂತಹ ಜವಾಬ್ದಾರಿ ಹುದ್ದೆಯನ್ನು ನಿಭಾಯಿಸುತ್ತಿರುವವರು. ಮತ್ತೊಬ್ಬರು ಇದೇ ಸರ್ಕಾರದಲ್ಲಿ ಮಂತ್ರಿ ಹುದ್ದೆಯಲ್ಲಿರುವವರು.

ಅಸ್ಸಾಂನ ಕಾಜಿರಂಗ ನ್ಯಾಷನಲ್ ಪಾರ್ಕ್​​ನಲ್ಲಿ ರಾತ್ರಿ ವೇಳೆ ಸಫಾರಿಗೆ ನಿಷೇಧ ಇದ್ರೂ ರೂಲ್ಸ್ ಬ್ರೇಕ್ ಮಾಡಿರುವ ಆರೋಪ ಕೇಳಿ ಬಂದಿದೆ. ಸ್ಥಳೀಯರೇ ಈ ಬಗ್ಗೆ ದೂರು ನೀಡಿದ್ದಾರೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ಜೀಪ್ ಸಫಾರಿ ಮಾಡಿದ ಆರೋಪದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಹಾಗೂ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಕೇಸ್ ದಾಖಲಾಗಿದೆ. ರಾತ್ರಿ ವೇಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜೀಪ್ ಸಫಾರಿ ನಡೆಸಿದ್ದಕ್ಕಾಗಿ ನಿನ್ನೆ ದೂರು ದಾಖಲಿಸಲಾಗಿದೆ. ನವರಾತ್ರಿಯಲ್ಲಿ ದೇವಿಯ ಒಂಬತ್ತು ಅವತಾರಗಳು

ಅರಣ್ಯದಂಚಿನಲ್ಲಿ ವಾಸಿಸುವ ಜನರು ನೀಡಿದ್ದ ದೂರು ಆಧರಿಸಿ ಎಫ್​ಐಆರ್ ದಾಖಲಿಸಲಾಗಿದೆ. ಇನ್ನು ಕಾಜಿರಂಗದಲ್ಲಿ ನಡೆದ ಚಿಂತನಾ ಶಿಬಿರವೊಂದರಲ್ಲಿ ಸದ್ಗುರು ಜಗ್ಗಿ ವಾಸುದೇವ್​​​ ಭಾಗಿಯಾಗಿದ್ದರು.

Share This Article
Leave a comment