ಕೆ.ಆರ್.ಎಸ್ ಪೋಲೀಸ್ ಠಾಣಾ ವ್ಯಾಪ್ತಿಯ ಹುಲಿಕೆರೆ ಗ್ರಾಮದ ಪೋಲೀಸ್ ಮುಖ್ಯ ಪೇದೆಯೊಬ್ಬರ ಮನೆಗೆ ಹಾಡುಹಗಲೇ ಕನ್ನ ಹಾಕಿರುವ ಕಳ್ಳರು 95 ಗ್ರಾಂ ನ 3.80 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರವಿ ನಿವಾಸದಲ್ಲಿ ಕಳ್ಳತನವಾಗಿದೆ ಶುಕ್ರವಾರ ಪತ್ನಿ ಜೊತೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ತೆರಳಿ, ಸಂಜೆ ವಾಪಸ್ ಬಂದಾಗ ಮನೆಯಲ್ಲಿದ್ದ ಚಿನ್ನಾಭರಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯ ಬಾಗಿಲು ಮತ್ತು ಬೀರುವನ್ನು ಒಡೆಯದೇ ಕೀ ಮೂಲಕವೇ ತೆರೆದು ಒಡವೆಗಳನ್ನು ಕಳ್ಳತನ ಮಾಡಲಾಗಿದೆ. ರವಿ ಆಸ್ಪತ್ರೆಗೆ ತೆರಳುವಾಗ ತಮ್ಮ ಮನೆಯ ಮುಂಬಾಗಿಲ ಕೀ ಅನ್ನು ಮನೆಯ ಮುಂದಿರುವ ಜಾಗದಲ್ಲಿ ಇಟ್ಟು ಹೋಗಿರುವುದನ್ನು ನೋಡಿರುವ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಪತ್ನಿ ಬಿಂದು ಕೆ.ಆರ್.ಸಾಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜ್ಯದ ಶಾಲೆಗಳಲ್ಲಿ ಬಿಸಿಯೂಟ ಸಮಯ ಬದಲಾವಣೆ – ಶಿಕ್ಷಣ ಇಲಾಖೆ ಸೂಚನೆ
ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
More Stories
ಮೊಬೈಲ್ ನೋಡಲು ಬಿಡಲಿಲ್ಲವೆಂದು ನೇಣು ಬಿಗಿದು ಬಾಲಕ ಆತ್ಮಹತ್ಯೆ
ಸುಮಲತಾ ರಾಜ್ಯ ರಾಜಕೀಯ ಪ್ರವೇಶಕ್ಕೆ ಬೆಂಬಲಿಗರ ಗ್ರೀನ್ ಸಿಗ್ನಲ್
ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?