ಸಿಎಂ,ತಜ್ಞರ ಜೊತೆ ಚರ್ಚಿಸಿ ಸಲಾಂ ಆರತಿ ಹೆಸರು ಬದಲಾವಣೆ: ಸಚಿವೆ ಜೊಲ್ಲೆ

Team Newsnap
1 Min Read

ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ’ಸಲಾಂ ಆರತಿ’ ಹೆಸರು ಬದಲಿಸುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರ ತೆಗೆದುಕೊಂಡಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿದ ನಂತರವೇ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ನವದೆಹಲಿಯಲ್ಲಿ ಹೇಳಿದರು.

ನವದೆಹಲಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಸಚಿವೆ ಸಲಾಂ ಆರತಿ ಹೆಸರು ಬದಲಿಸುವ ಬಗ್ಗೆ ಸಾಕಷ್ಟು ಮನವಿಗಳು ಬಂದಿದ್ದವು. ಈ ಹಿನ್ನೆಲೆ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ಮಾಡಿ ಹೆಸರು ಬದಲಿಸುವ ನಿರ್ಧಾರ ತೆಗೆದುಕೊಂಡಿದೆ ಎಂದರು.

ಸಲಾಂ ಆರತಿ ಎಂಬ ಪದ ಜನಪದ ರೂಢಿಯಲ್ಲಿ ಬಂದಿದೆ . ಇಲಾಖೆಯಲ್ಲಿ ಈ ಪದ ಬಳಕೆಯ ಬಗ್ಗೆ ಉಲ್ಲೇಖ ಇದೆಯೇ ಎಂದು ಪರಿಶೀಲಿಸಬೇಕಿದೆ. ಇದಕ್ಕೆಲ್ಲ 10-15 ದಿನಗಳ ಸಮಯ ಬೇಕು, ಪರಿಶೀಲನೆ ಬಳಿಕ ಅಂತಿಮವಾಗಿ ತಿರ್ಮಾನಿಸಿತ್ತೇವೆ. ಜನರ ಮನವಿ ಮೇರೆಗೆ ಪರಿಶೀಲನೆ ಮಾಡುತ್ತಿದ್ದೇವೆ ವಿನಹಃ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಶಾಲೆಗಳಲ್ಲಿ ಬಿಸಿಯೂಟ ಸಮಯ ಬದಲಾವಣೆ – ಶಿಕ್ಷಣ ಇಲಾಖೆ ಸೂಚನೆ

ಈ ನಡುವೆ ಮುಜರಾಯಿ ಇಲಾಖೆ ಹೆಸರನ್ನೇ ಬದಲಿಸುವ ಪ್ರಸ್ತಾಪವೂ ಇದೆ. ಯಾವುದೇ ಹೆಸರನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ. ಈ ಬಗ್ಗೆ ತಜ್ಞರು, ಇತಿಹಾಸಕಾರರು, ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಬೇಕು ಅವರ ಅಭಿಪ್ರಾಯ ಪಡೆದು ಬಳಿಕ ಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

Share This Article
Leave a comment