ರಾಜ್ಯದ ಶಾಲೆಗಳಲ್ಲಿ ಬಿಸಿಯೂಟ ಸಮಯ ಬದಲಾವಣೆ – ಶಿಕ್ಷಣ ಇಲಾಖೆ ಸೂಚನೆ

Team Newsnap
1 Min Read
  • ಶಿಕ್ಷಣ ಇಲಾಖೆಯು ರಾಜ್ಯದ ಶಾಲಾ ಮಕ್ಕಳ ಬಿಸಿಯೂಟ ಸಮಯದ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು, 1-5 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ 1.45 ರವರೆಗೆ ಬಿಸಿಯೂಟ ವಿತರಿಸಲು ಸೂಚನೆ ನೀಡಿದೆ.

ಶಾಲೆಗಳಲ್ಲಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಸಾಲಾಗಿ ನಿಲ್ಲಿಸಿ ಆಹಾರ ವಿತರಿಸುವುದು ಹಾಗೂ ಕಡಿಮೆ ಸಮಯದಲ್ಲಿ ಊಟ ಸ್ವೀಕರಿಸುವುದು, ಲೋಟ,ತಟ್ಟೆ ತೊಳೆಯುವಾಗ ನೂಕನುಗ್ಗಲು ತಡೆಗಟ್ಟುವುದಕ್ಕಾಗಿ 1 ರಿಂದ 5 ನೇ ತರಗತಿ ಮಕ್ಕಳಿಗೆ 1 ಗಂಟೆಯಿಂದ 1.45 ರವರೆಗೆ . 6 ರಿಂದ 10 ನೇ ತರಗತಿ ಮಕ್ಕಳಿಗೆ 2 ರಿಂದ 2.45 ರವರೆಗೆ ಬಿಸಿಯೂಟ ವಿತರಿಸಲು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಬಿಜೆಪಿ ಎಂಎಲ್ ಸಿ ಅಡಗೂರು ವಿಶ್ವನಾಥ್ ಕಾಂಗ್ರೆಸ್ ಸೇರುವುದು ಪಕ್ಕಾ

ರಾಜ್ಯ ಸರ್ಕಾರದ ಮೌಲ್ಯಮಾಪನ ಪ್ರಾಧಿಕಾರ ಮತ್ತು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾಡಿರುವ ವಿವಿಧ 20 ಶಿಫಾರಸುಗಳನ್ನು ಮಾಡಿದೆ.

Share This Article
Leave a comment