ಬಿಜೆಪಿ ಎಂಎಲ್ ಸಿ ಅಡಗೂರು ವಿಶ್ವನಾಥ್ ಕಾಂಗ್ರೆಸ್ ಸೇರುವುದು ಪಕ್ಕಾ

Team Newsnap
1 Min Read
Village bird 'Vishwanath' Congress inclusion fix in Uttarayana Punyakala ಉತ್ತರಾಯಣ ಪುಣ್ಯಕಾಲದಲ್ಲಿ ಹಳ್ಳಿ ಹಕ್ಕಿ 'ವಿಶ್ವನಾಥ್' ಕಾಂಗ್ರೆಸ್ ಸೇರ್ಪಡೆ ಫಿಕ್ಸ್

ಹಳ್ಳಿ ಹಕ್ಕಿ ಅಡಗೂರು ಎಚ್ ವಿಶ್ವನಾಥ್ ಕಾಂಗ್ರೆಸ್ ಪಕ್ಷ ಸೇರುವುದು ಪಕ್ಕಾ ಆದಂತಾಗಿದೆ. ಈ ಕುರಿತಂತೆ ಸಧ್ಯದಲ್ಲೇ ಅಧೀಕೃತ ಪ್ರಕಟನೆಯೂ ಹೊರ ಬೀಳುವ ಸಾಧ್ಯತೆ ಇದೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅರ್ಧ ಗಂಟೆ ಮಾತುಕತೆ ನಡೆಸಿದರು

ಮಾತೃಪಕ್ಷಕ್ಕೆ ವಾಪಸ್ಸು ಮರಳಲು ವಿಶ್ವನಾಥ್ ಉತ್ಸುಕರಾಗಿದ್ದಾರೆಂಬುದು ಅವರ ಈಗಿನ ನಡೆಯಿಂದ ಗೊತ್ತಾಗುತ್ತದೆ. ಮಾನವೀಯ ಮೌಲ್ಯಗಳೇ ನಿಜವಾದ ಮಾನವ ಹಕ್ಕು

ವಿಶ್ವನಾಥ್ ತಮ್ಮನ್ನು ಭೇಟಿಯಾದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಇನ್ನು ಹಲವರು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು

ವಿಶ್ವನಾಥ್ ಅವರನ್ನು ಗುಣಗಾನ ಮಾಡಿದ ಡಿಕೆಶಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿ ತಂದಿದ್ದೇ ವಿಶ್ವನಾಥ್ ಎಂದು ಡಿಕೆಶಿ ಮೆಚ್ಚುಗೆ ಮಾತುಗಳನ್ನು ಆಡಿದರು

Share This Article
Leave a comment