ರಾಜ್ಯಕ್ಕೂ ಮಾಂಡೌಸ್ ಚಂಡಮಾರುತ ಎಫೆಕ್ಟ್ : 5 ದಿನ ಮಳೆ, ಚಳಿಯ ಅಲರ್ಟ್

Team Newsnap
1 Min Read

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರೂ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಂಜೆಯ ಹೊತ್ತಿಗೆ ಚಳಿಯ ಪ್ರಮಾಣ ಹೆಚ್ಚಾಗಲಿದೆ, 5 ದಿನ ಚಳಿಯೊಂದಿಗೆ ಮೋಡ ಕವಿದ ವಾತಾವರಣವೂ ಮುಂದುವರಿಯಲಿದೆ

ಹವಾಮಾನ ಇಲಾಖೆ ಮಾಹಿತಿಯಂತೆ
ಮಾಂಡೌಸ್ ಚಂಡಮಾರುತ ಕರ್ನಾಟಕ ಮೂಲಕ ಅರಬ್ಬೀ ಸಮುದ್ರದ ಕಡೆ ಹೋಗಲಿದೆ. ಈ ಚಂಡಮಾರುತದ ಎಫೆಕ್ಟ್ ದಕ್ಷಿಣ ಜಿಲ್ಲೆಗಳಿಗೆ ಉಂಟಾಗಲಿದೆ. ಇಂದು ಮತ್ತು ನಾಳೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಮಳೆ, ಚಳಿ ಮುಂದುವರಿಯುವ ಬಗ್ಗೆ ಮುನ್ಸೂಚನೆ ಇದೆ ಗುಜರಾತ್ ನಲ್ಲಿ ಮೋದಿ , ಶಾ ಮೋಡಿಯ ಅಸಲಿ ಕಥೆ !

ತಮಿಳುನಾಡಿನಲ್ಲಿ ಮಾಂಡಸ್ ಅಬ್ಬರ ಹೆಚ್ಚಾಗಿದೆ ಭಾರಿ ಮಳೆ ಸುರಿಯುತ್ತಿದೆ ಆ ರಾಜ್ಯದ 25 ಜಿಲ್ಲೆಗಳ ಶಾಲೆಗಳಿಗೆ ರಜೆ ನೀಡಲಾಗಿದೆ. ಮಾನವೀಯ ಮೌಲ್ಯಗಳೇ ನಿಜವಾದ ಮಾನವ ಹಕ್ಕು

ಬೆಂಗಳೂರು, ಚಾಮರಾಜನಗರ, ಕೋಲಾರ, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಸದ್ಯ ಬೆಂಗಳೂರಿನ ಉಷ್ಣಾಂಶ 23 ರಿಂದ 22ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆ ನೀಡಿದೆ.
ಇಂದು ಮತ್ತು ನಾಳೆ ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ 6 ಎಂಎಂ ಮಳೆಯಾಗುವ ಸಾಧ್ಯತೆಯಿದೆ.

Share This Article
Leave a comment