ಗುಜರಾತ್ ನಲ್ಲಿ ಮೋದಿ , ಶಾ ಮೋಡಿಯ ಅಸಲಿ ಕಥೆ !

Team Newsnap
2 Min Read

ಗುಜರಾತ್ ನಲ್ಲಿ 7ನೇ ಬಾರಿ ಅಧಿಕಾರಕ್ಕೆ ಏರುವ ಮೂಲಕ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದೆ. ಈ ಅದ್ಭುತ ಸಾಧನೆ ಹಿಂದೆ ನಿರೀಕ್ಷೆಗೂ ನಿಲುಕುವ ಫಲಿತಾಂಶ ಬರಲು ಮೋದಿ, ಶಾ ಜೋಡಿ ಬಹಳ ಶ್ರಮ, ತಂತ್ರಗಾರಿಕೆ ಎದ್ದು ಕಾಣುತ್ತದೆ. 1995 ರಿಂದ 27 ವರ್ಷಗಳ 7 ಬಾರಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಸುಲಭದ ಮಾತೂ ಅಲ್ಲ.

ಮೋದಿ, ಶಾಗೆ ಟಾಸ್ಕ್ :

2024ರ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕಾದರೆ ತವರು ರಾಜ್ಯವನ್ನು ಗೆಲ್ಲಲ್ಲೇ ಬೇಕು ಎಂಬ ಟಾಸ್ಕ್ ಇತ್ತು . ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚುನಾವಣೆಗೂ ಒಂದು ವರ್ಷದ ಮೊದಲೇ ಪ್ಲಾನ್‌ ಮಾಡಿದ್ದರು. ಗುಜರಾತ್ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ಮಾಹಿತಿ ತಿಳಿದ ಮೋದಿ, ಶಾ ಜೋಡಿ ಕಳೆದ ವರ್ಷವೇ ಸಂಪುಟ ಪುನರ್ ರಚನೆ ಮಾಡಿ ತಂತ್ರಗಾರಿಕೆ ಮಾಡಿದರು.

ಸಂಪುಟದಲ್ಲಿ ಹಿರಿಯರಿಗೆ ಕೊಕ್‌ ನೀಡಿ ‘ ಯುವ ಕ್ಯಾಬಿನೆಟ್’ ರಚನೆ ಮಾಡಿದರು ಹಿರಿಯ ನಾಯಕರಾದ ನಿತೀನ್ ಪಟೇಲ್, ವಿಜಯ್ ರೂಪಾನಿ ಸೇರಿದಂತೆ ಎಂಟು ಹಿರಿಯರನ್ನು ಕ್ಯಾಬಿನೆಟ್‌ನಿಂದ ತೆಗೆದು ಆದಿವಾಸಿ, ಒಬಿಸಿ, ಪಾಟಿದಾರ್ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು.

20 ವರ್ಷದ ಬಳಿಕ ಪಾಟಿದಾರ್ ಸಮುದಾಯಕ್ಕೆ‌ ಸಿಎಂ ಸ್ಥಾನ ಸಿಕ್ಕಿತ್ತು. ಉತ್ತರ ಪ್ರದೇಶದಲ್ಲೂ ಬಿಜೆಪಿ ಸಣ್ಣ ಸಣ್ಣ ಸಮುದಾಯದ ನಾಯಕರಿಗೆ ಮಂತ್ರಿ ಸ್ಥಾನ ಮತ್ತು ಚುನಾವಣೆಯಲ್ಲಿ ಟಿಕೆಟ್‌ ನೀಡಿತ್ತು.  ಈ ತಂತ್ರಗಾರಿಕೆ ಯಶ್ವಸಿಯಾದ ಬೆನ್ನಲ್ಲೇ ಅದನ್ನೂ ಗುಜರಾತ್‌ನಲ್ಲೂ ಅಳವಡಿಸಿದ್ದು ಯಶಸ್ವಿಯಾಗಿದೆ.

ಸಂಪುಟದಿಂದ ಹಿರಿಯರನ್ನು ಕೈ ಬಿಟ್ಟು ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಯಿತು. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ 27 ರ್‍ಯಾಲಿ ಮಾಡಿದ್ದರು. ಅಷ್ಟೇ ಅಲ್ಲದೇ ಎರಡು ಐತಿಹಾಸಿಕ ರೋಡ್ ಶೋ ಮೂಲಕ ಗುಜರಾತಿಗಳ ಮನಗೆದ್ದಿದ್ದರು. ಡಿ 12 ರಂದು ಭುಪೇಂದ್ರ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿ ಪದಗ್ರಹಣ

ಪಾಟೀದಾರ್ ಸಮುದಾಯದ ಭೂಪೇಂದ್ರ ಪಟೇಲ್‌ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಪಾಟೀದಾರ್ ಸಮುದಾಯದ ಅಸಮಾಧಾನವನ್ನು ಚಾಣಕ್ಯ ಜೋಡಿ ತಣ್ಣಗೆ ಮಾಡಿತ್ತು.
2017ರಲ್ಲಿ ಬಿಜೆಪಿಗೆ ಸಡ್ಡು ಹೊಡೆದಿದ್ದ ಪಾಟೀದಾರ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಹಾಗೂ ಒಬಿಸಿ ಯುವ ನಾಯಕ ಅಲ್ಪೇಶ್ ಠಾಕೂರ್ ಅವರನ್ನು ಬಿಜೆಪಿಗೆ ಸೇರಿಸಲಾಯಿತು. ಹೋರಾಟ ಮಾಡುವ ನಾಯಕರೇ ಬಿಜೆಪಿ ಸೇರಿದ್ದರಿಂದ ಅವರ ಅಭಿಮಾನಿಗಳು ಸಹಜವಾಗಿಯೇ ಬಿಜೆಪಿ ಪರ ನಿಂತರು, ಹೋರಾಟದ ಕಿಚ್ಚು ಕಡಿಮೆಯಾಯಿತು. ಕಾಂಗ್ರೆಸ್ ಮಣ್ಣು ಮುಕ್ಕಿತು.

ಕರ್ನಾಟಕದತ್ತ ಹೆಜ್ಜೆ !

ಗುಜರಾತ್ ನಲ್ಲಿ ಪ್ರಚಂಡ ಗೆಲುವು ತಂದುಕೊಟ್ಟ ಮೋದಿ, ಅಮಿತ್ ಶಾ ಮುಂದಿನ ಹೆಜ್ಜೆಗಳು ಕರ್ನಾಟಕ ರಾಜಕೀಯ ಅಂಗಳಕ್ಕೆ ಧಾವಿಸಲಿವೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಬಿಜೆಪಿ ವರಿಷ್ಠರ ನಡೆಸುವ ತಂತ್ರಗಾರಿಕೆಯನ್ನು ರಾಜ್ಯ ನಾಯಕರು ಒಪ್ಪಬೇಕು. ಇಲ್ಲದೇ ಹೋದರೆ ರಾಜ್ಯದಲ್ಲಿ ಬಿಜೆಪಿ ಮಕಾಡೆ ಮಲಗಲಿದೆ.

Share This Article
Leave a comment