ಮಾನವನು ಸಂಘ ಜೀವಿ. ಸಮಾಜದ ಅವಿಭಾಜ್ಯ ಅಂಗವೂ ಹೌದು.ಮಾನವನಿಂದಲೇ ಸಮಾಜದ ಅಭಿವೃದ್ಧಿ ಮತ್ತು ಪ್ರಗತಿ.ಆದಿಕಾಲದ ಮಾನವರು ಬೇಟೆಯಾಡುತ್ತ ಬದುಕಿದರೆ, ಆಧುನಿಕ ಕಾಲದ ಮಾನವರು ಕೃಷಿಯಲ್ಲಿ ತೊಡಗಿಸಿಕೊಂಡು ಬದುಕಿಗೆ ಹೊಸ ಅರ್ಥವನ್ನು ನೀಡಿದನು. ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿ ಹೊಸ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿದ ಮಾನವ ತನ್ನ ಬುದ್ದಿ ಮತ್ತು ಕೌಶಲ್ಯದಿಂದ ಸಮಾಜವನ್ನು ಪ್ರತಿನಿತ್ಯ ಹೊಸ ಆಯಾಮಗಳತ್ತ ತಲುಪಿಸುತ್ತಿದ್ದಾನೆ ಎಂಬುವುದರಲ್ಲಿ ಸಂದೇಹವಿಲ್ಲ.
ಪ್ರಾಚೀನ ಕಾಲ, ಮಧ್ಯಕಾಲ ಹಾಗೂ ಆಧುನಿಕ ಕಾಲವೆಂದು ವಿಂಗಡಿಸುತ್ತಿದ್ದರೂ ಪ್ರತಿಯೊಂದು ಕಾಲಕ್ಕೂ ಅದರದೇ ಆದ ವಿಶೇಷತೆ ಇದೆ ಎಂಬುವುದು ಸಾರ್ವಕಾಲಿತ ಸತ್ಯ. ಹಳೇ ಕಾಲದ ಬದುಕಿನ ಶೈಲಿ ಮತ್ತು ಕಾಲಘಟ್ಟದ ಸೌಂದರ್ಯವನ್ನು ಹಿರಿಯರ ಮಾತಿನಲ್ಲಿ ಬಹಳಷ್ಟು ಬಾರಿ ಕೇಳಿರುತ್ತಿವೆ. ಪ್ರಸ್ತುತ ಸಮಾಜ ಆಧುನಿಕತೆಯ ಸ್ಪರ್ಶದಲ್ಲಿ ಮೆರೆತರು ಇಂದಿಗೂ ಕೂಡ ಹಳೇ ಕಾಲದ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ ಎಷ್ಟೋ ಹಳ್ಳಿ ಪ್ರದೇಶಗಳನ್ನು ಕಾಣಲು ಸಾಧ್ಯವಾಗುತ್ತಿರುವುದು ಸಂತೋಷದ ಸಂಗತಿ.
ಹೀಗೆ ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಾನವನು ತನ್ನ ಸಂಬಂಧಗಳನ್ನು ಸಂಕೀರ್ಣಗೊಳಿಸಿ ಮನುಷ್ಯರ ನಡುವೆ ಗಟ್ಟಿಯಾದ ಭಾಂದವ್ಯವನ್ನು ಬೆಳಸಿದ. ವಿಜ್ಞಾನ ತಂತ್ರಜ್ಞಾನದ ಸಹಾಯದಿಂದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕತೆಯಲ್ಲಿ ಪ್ರಗತಿಯನ್ನು ಕಂಡುಕೊಂಡನು.
ಮಾನವನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಬೇಕಾದ ಅವಕಾಶವನ್ನು ಮತ್ತು ಸ್ವಾತಂತ್ರ್ಯವನ್ನು ಹಾಗೂ ಹಕ್ಕುಗಳನ್ನು ಸಮಾಜ ನೀಡಿರುತ್ತದೆ. ಆನ್ ಲೈನ್ ನ ಪ್ರಥಮ ಕನ್ನಡ ಶಿಕ್ಷಕಿ ಎಸ್ತರ್ ಶಾಮಸುಂದರ್
ಪ್ರತಿಯೊಬ್ಬ ಮಾನವನ ಬದುಕಿನ ಎಲ್ಲಾ ಘಟ್ಟಗಳಲ್ಲೂ ಮಾನವ ಹಕ್ಕುಗಳು ನೆಲಸಿರುತ್ತವೆ. ಹುಟ್ಟಿನಿಂದಲೇ ತನ್ನ ಹಕ್ಕುಗಳಿಗೆ ಅರ್ಹನಾದ ಮಾನವನ ಬಹುಮುಖ್ಯವಾದ ಹಕ್ಕು ”ಬದುಕಲಿರುವ ಸ್ವಾತಂತ್ಯು”. ಒಂದು ಭೂ ಪ್ರದೇಶ ಅಥವಾ ಗಡಿ ಭಾಗಗಳಿಗೆ ಸೀಮಿತವಾಗಿರುವುದಲ್ಲ ಹೊರತು ಪ್ರಪಂಚದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಮಾನವ ಹಕ್ಕುಗಳು ಹಕ್ಕು ಅನ್ವಹಿಸುತ್ತವೆ. ಆಯಾ ರಾಷ್ಟ್ರಗಳಲ್ಲೂ ಮಾನವ ಹಕ್ಕುಗಳು ಚಾಲ್ತಿಯಲ್ಲಿದ್ದು ಸಂವಿಧಾನಾತ್ಮಕವಾಗಿ ಪ್ರತಿಯೊಂದು ಪ್ರಜೆಗೂ ಅವರವರ ಸರಕಾರ ನೀಡಲೇ ಬೇಕಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾದರೆ, ಅದಕ್ಕೆ ಬೇಕಾದ ಶಿಕ್ಷೆಯನ್ನು ವಿಧಿಸಲಾಗುವುದು ಮತ್ತು ಹಕ್ಕುಗಳಿಂದ ಯಾರಾದರೂ ವಂಚಿತರಾದರೆ, ಕೇಳಿ ಪಡೆದುಕೊಳ್ಳುವ ಸ್ವಾತಂತ್ರ್ಯವನ್ನು ಮಾನವನ್ನು ಹೊಂದಿರುತ್ತಾನೆ.
ಸಮಾಜದಲ್ಲಿ ಜನಿಸುವ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ, ಸ್ವಾತಂತ್ಯ್ರ, ಸಂರಕ್ಷಣೆ ಹಾಗೂ ಪ್ರೀತಿ ವಾತ್ಸಲ್ಯದಂತಹ ಮಾನವನ ವಿಕಾಸಕ್ಕೆ ಪೂರಕವಾದ ಎಲ್ಲವನ್ನು ಸಮಾನವಾಗಿ ಮಾನವನಿಗೆ ನೀಡಬೇಕಾಗಿದೆ ಎಂದು ಮಾನವ ಹಕ್ಕುಗಳು ಸೂಚಿಸುತ್ತ. ಬಡವ ಬಲ್ಲಿದ, ಕರಿಯ ಬಿಳಿಯ ಎಂಬಿತ್ಯಾದಿ ತಾರತಮ್ಯಗಳು ಮಾಡದೆ,ಗೌರವ, ಸಮಾನತೆ, ಆತ್ಮಾಭಿಮಾನದ ಬದುಕಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿ, ಅಗೌರವ, ಅವಮಾನ ಹಾಗೂ ಅಮಾನವೀಯ ಕೃತ್ಯಗಳಿಂದ ಮಾನವನನ್ನು ಕಾಪಾಡಿಕೊಳ್ಳಬೇಕೆಂದು ಮಾನವ ಹಕ್ಕುಗಳು ಪ್ರತಿಧ್ವನಿಸುತ್ತವೆ.
” ನಮ್ಮ ಸ್ಟಭಾವದಲ್ಲಿ ಅಂತರ್ಗತವಾಗಿರುವ ಎಲ್ಲಾ ಹಕ್ಕುಗಳು ಮಾನವ ಹಕ್ಕುಗಳಾಗಿದ್ದ, ಅವುಗಳು ಇಲ್ಲದೆ ಮಾನವನಾಗಲು ಸಾಧ್ಯವಿಲ್ಲ ಎಂಬುದು ಡಾ.ಯು ಚಂದ್ರರವರ ಅಭಿಪ್ರಾಯ. “ಬಸವಣ್ಣನವರ ಪ್ರಕಾರ ಸಕಲ ಜೀವಾತ್ಮರಿಗೆ ಲೇಸನು, ಬಯಸುವುದು ಎಲ್ಲರನು ಪ್ರೇಮದಿಂದ ಕಾಣುವುದು ಮಾನವ ಧರ್ಮ ಅದುವೇ ನಿಜವಾದ ಹಕ್ಕು” ಇನ್ನೂ ವೇದಗಳ ಪ್ರಕಾರ “ಪ್ರಪಂಚವನ್ನು ಒಂದು ಕುಟುಂಬದಂತೆ ಕಂಡು ವ್ಯಕ್ತಿ ವ್ಯಕ್ತಿಯನ್ನು ಗೌರವಿಸುವುದು ಹಾಗೂ ಸ್ನೇಹ ಸಂಬಂಧ ಬೆಳಸಿ, ಗೌರವಯುತ ಸಮಾಜ ರಚನೆಗೆ ಮಾನವ ಹಕ್ಕುಗಳು ಸಹಾಯಕ ಎಂಬ ಭಾವವಿದೆ.” ಹೀಗೆ ಅನೇಕಾನೇಕ ಮಹಾನಿಯರು ಮಾನವ ಹಕ್ಕುಗಳ ಬಗೆಗಿನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಕಾಣಬಹುದು..ಮಾನವ ಹಕ್ಕುಗಳೆಂದರೆ, ಮಾನವೀಯ ಮೌಲ್ಯಗಳಾಗಿವೆ ಎಂದು ಹೇಳಿದ ಬಸವಣ್ಣ ಮತ್ತು ವೇದಗಳ ವೀಕ್ಷಣೆ ಇಲ್ಲಿ ಮಾನವ ಹಕ್ಕುಗಳ ಶ್ರೇಷ್ಠತೆಯನ್ನು ಎತ್ತಿಹಿಡಿದಿದೆ.
ಯಾವುದನ್ನು ತಿನ್ನಬೇಕು, ಯಾವ ಧರ್ಮ ಸ್ವೀಕರಿಸಬೇಕು, ಪ್ರತಿಭಟಿಸಬೇಕು, ಮಾತನಾಡಬೇಕು, ಖರೀದಿಸಬೇಕು,ಧರಿಸಬೇಕು, ಪಡೆದುಕೊಳ್ಳಬೇಕು ಅಥವಾ ಅಂತರ ಕಾಪಾಡಿಕೊಳ್ಳಬೇಕು ಹೀಗೆ ಮಾನವನ ಎಲ್ಲಾ ರೀತಿಯ ಸ್ವಾತಂತ್ರ್ಯಕ್ಕೆ ಹೇರಿಕೆಗಳನ್ನು ತರುವುದು ಅಮಾನವೀಯತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಮಾನವ ಹಕ್ಕುಗಳು ಮಕ್ಕಳ, ಮಹಿಳೆಯರ, ಅಂಗವಿಕಲರ, ಅಲ್ಪಸಂಖ್ಯಾತರ, ಬುಡಕಟ್ಟು ಜನಾಂಗದವರ ಮತ್ತು ತೃತೀಯಲಿಂಗ ಸೇರಿದಂತೆ ಎಲ್ಲಾ ಶೋಷಿತ ವರ್ಗಗಳ ಅಭಿವೃದ್ಧಿ ಗೌರವಯುತ ಜೀವನಕ್ಕೆ ಬೇಕಾದ ವಿಶೇಷ ಹಕ್ಕುಗಳನ್ನು ಕಲ್ಪಿಸಲಾಗಿದೆ.
ವಿಶ್ವದೆಲ್ಲಡೆ ಕಾಲಕಾಲ್ಕೂ ಶೋಷಣೆಯನ್ನು ಎದುರಿಸುತ್ತಿರುವ ಮಕ್ಕಳಿಗೆ ವಿಶೇಷವಾದ ರಕ್ಷಣೆಯೊಂದಿಗೆ, ಕಡ್ದಾಯವಾಗಿ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿಯೇ ನೀಡಬೇಕು ಮತ್ತು ಆಹಾರ, ವಸತಿ, ವೈದ್ಯಕೀಯ ಸೇವೆಗಳನ್ನು ಒದಗಿಸಿಕೊಡಬೇಕು. ಸ್ತ್ರೀ ಪುರುಷರಲ್ಲಿ ಯಾವುದೆ ರೀತಿಯ ಭೇದ ಭಾವ ತೋರದೆ, ಮಹಿಳೆಯರಿಗೂ ಸಮಾನವಾದ ಸ್ವಾತಂತ್ರ್ಯವನ್ನು ಅವಕಾಶಗಳನ್ನು ಕೊಡಬೇಕು. ಡಿಸೆಂಬರ್ 18,1979 ರಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸ್ತ್ರೀಯರ ವಿರುದ್ಧ ನಡೆಯುವ ಎಲ್ಲಾ ತಾರತಮ್ಯವನ್ನು ಅಳಿಸಿ ಹಾಕುವ ಒಪ್ಪಂದವನ್ನು ಸ್ವೀಕರಿಸಿತು, 1981 ರಿಂದ 163 ರಾಷ್ಟ್ರಗಳಲ್ಲಿ ಈ ಒಪ್ಪಂದವು ಜಾರಿಗೆ ಬಂದಿರುತ್ತವೆ.
ಪುರುಷರಂತೆ ಸಮಾನ ಶಿಕ್ಷಣ,ಉದ್ಯೋಗ (ಪುರುಷರಂತೆ ಸಮಾನ ಸಂಬಳ),ಆಸ್ತಿ ಪಡೆಯುವ ಮಾರುವ ಹಕ್ಕು. ಸ್ತ್ರೀಯರಿಗೆ ಪುರುಷರಂತೆ ಸಮಾನ ಕಾನೂನಾತ್ಮಕ ರಕ್ಷಣೆ .ಪುರುಷರಂತೆ ಸ್ತ್ರೀಯರಿಗೂ ಕೌಟುಂಬಿಕ ಹಕ್ಕು ಮದುವೆ, ಮಕ್ಕಳು ಮತ್ತು ವಿಚ್ಚೇದನ ಹೊಂದಲು ಸಮಾನ ಹಕ್ಕು. ನಾಗರಿಕತ್ವವನ್ನು ಪಡೆಯುವ, ತೊರೆಯುವ ಹಕ್ಕು ಎಂಬಿತ್ಯಾದ ಹಕ್ಕುಗಳನ್ನು ಒಳಗೊಂಡ ಒಪ್ಪಂದವನ್ನು ವಿಶ್ವ ಸಂಸ್ಥೆ ಸ್ವೀಕರಿಸಿದೆ.
ವರದಕ್ಷಿಣೆ ಕಿರುಕುಳ ಮರಣ ಶಿಕ್ಷೆಯ ಅಪರಾಧವೆಂದು ಪರಿಗಣಿಸಲಾಗುತ್ತದೆ. ಮಹಿಳಾ ಆಯೋಗವನ್ನು ಜಾರಿಗೆ ತಂದ ಭಾರತ ಸರಕಾರ 1990 ರಲ್ಲಿ ಮಹಿಳಾ ಕಾಯ್ದೆಯನ್ನು ಜಾರಿಗೆ ತಂದಿದೆ. ನೈಸರ್ಗಿಕ ತೊಂದರೆಗಳಿಂದಾಗಿ ಅಂಗವಿಕಲರಾಗುವರು. ಇನ್ನೂ ಕೆಲವರು ಹುಟ್ಟಿನಿಂದಲೆ ಅಂಗವಿಕಲರಾದರೆ,ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿರುವರು ಇಂತಹ ಜನರು ತಮ್ಮ ಹಕ್ಕುಗಳಿಂದ ವಂಚಿತರಾಗಿ ಶೋಷಿತರಾಗಬಾರದು. ಅವರ ಸಾಮರ್ಥ್ಯವನ್ನು ಬಲಿಷ್ಠಗೊಳಿಸಲು ಸ್ಟಾವಲಂಬನೆಯ ಹಕ್ಕು, ಶಿಕ್ಷಣ, ದೈಹಿಕ ಚಿಕಿತ್ಸೆ,ಆರ್ಥಿಕ ಭದ್ರತೆ,ಕುಟುಂಬಸ್ಥರೊಂದಿಗೆ ಗುಣಮಟ್ಟದ ಜೀವನ, ತಮ್ಮನ್ನು ಹಾಗೂ ತಮ್ಮ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಕಾನೂನು ಪಡೆಯುವ ಹಕ್ಕುಗಳನ್ನು ಇವರು ಹೊಂದಿರುವರು.
ಮಾನವ ಸಮಾಜದ ಒಂದು ಅಂಗವಾದ ಬುಡಕಟ್ಟು ಜನಾಂಗ ಆಧುನಿಕತೆಯ ಆವಿಷ್ಕಾರದ ಬದುಕಿನಿಂದ ದೂರ ಸರಿದಿದ್ದರೂ ವಿಶ್ವದೆಲ್ಲೆಡೆ ಈ ಸಮುದಾಯ ಬೆಳೆದು ನಿಂತಿದೆ. ಇವರ ಮುಗ್ದತೆಯ ಕಾರಣದಿಂದ ಜಗತ್ತಿನಾದ್ಯಂತ
ಅತೀ ಹೆಚ್ಚು ಶೋಷಣೆಗೆ ಗುರಿಯಾಗುತ್ತಿದ್ದಾರೆ. ಈ ಜನಾಂಗದ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಸ್ಪಷ್ಟವಾದ ಮಾಹಿತಿ ಕೂಡ ಇದೆ.
ಎಲ್ಲಾ ಜನಾಂಗದ ರಕ್ಷಣೆಗೆ ನಿಂತಿರುವ ವಿಶ್ವ ಸಂಸ್ಥೆಯೂ ಭೂ ಒಡೆತನದ ಹಕ್ಕು, ಗ್ರಾಮೀಣ ಉದ್ದಿಮೆ, ಆರೋಗ್ಯ ಮತ್ತು ಸಾಮಾಜಿ ಭದ್ರತೆ, ಆಡಳಿತ ಸೇರಿದಂತೆ ಸಾಮಾನ್ಯ ಅವಕಾಶಗಳ ಹಕ್ಕುಗಳನ್ನು ನೀಡಿದೆ. ಧರ್ಮ ಅಥವಾ ಭಾಷಾ ಆಧಾರಿತ ಅಲ್ಪಸಂಖ್ಯಾತರು ಎಲ್ಲಿ ಇರುತ್ತಾರೊ ಅಂತವರಿಗೆ ಅವರ ಸಮುದಾಯವರೊಂದಿಗೆ ಸ್ವಂತ ಸಾಂಸ್ಕೃತಿಯನ್ನು ಅನುಭವಿಸುವ ಸ್ಟಧರ್ಮದ ಆಚರಣೆ ಮತ್ತು ಭಾಷೆಯನ್ನು ಬಳಸುವ ಹಕ್ಕನ್ನು ಹೊಂದಿರತಕ್ಕದ್ದು. 1993ರ ವ್ಹಯನ್ನಾ ಮಾನವ ಹಕ್ಕುಗಳ ಕುರಿತಾದ ಜಾಗತಿಕ ಸಮ್ಮೇಳನವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಿ, ಅಭಿವೃದ್ಧಿಗೊಳಿಸಲು ಒತ್ತಾಯಿಸಿತ್ತು.
ಮಾನವ ಹಕ್ಕುಗಳ ಪ್ರತಿಪಾದಕ ನೆಂದು ಕರೆಯುವ ರಾಜಾರಾಯ ಮೋಹನರಾಯ ಸತಿ ಪದ್ಧತಿ ಹಾಗೂ ಬಾಲ್ಯ ವಿವಾಹದ ವಿರುದ್ಧ ಕಠಿಣ ಹೋರಾಟ ಮಾಡಿದರು. ಬಹು ವಿವಾಹ ಪದ್ಧತಿ ವಿರೋಧಿಸಿ ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ಈಶ್ವರಚಂದ್ರ ವಿದ್ಯಾಸಾಗರ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕೆಂದು ಪ್ರತಿಪಾದಿಸಿದರು.
ಅತ್ಯಾವಶಕ ಹಾಗೂ ಮಹತ್ವಪೂರ್ಣವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ,ಅವರವರು ಆಯ್ಕೆ ಮಾಡುವ ದೈವವನ್ನು ಪೂಜಿಸಲಿರುವ ಸ್ವಾತಂತ್ರ್ಯ, ಬಯಕೆಯ ಸ್ವಾತಂತ್ರ್ಯ ಹಾಗೂ ಅಂಜಿಕೆಯಿಂದ ಮುಕ್ತನಾಗುವ ಈ ನಾಲ್ಕು ಸ್ವಾತಂತ್ರ್ಯಗಳ ಬಗ್ಗೆ 1941 ಜನವರಿ 6 ರಂದು ಉಲ್ಲೇಖಿಸಿ ಮಾತನಾಡಿದ ಅಮೇರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟರು ಮುಂದಿನ ತಲೆಮಾರಿನ ಪ್ರತಿಯೊಬ್ಬ ಪ್ರಜೆಯ ಜೀವನದ ಆಧಾರಸ್ತಂಭ ಮೇಲೆ ತಿಳಿಸಿದ ನಾಲ್ಕು ಸ್ವಾತಂತ್ರ್ಯಗಳು ಆಗಿರುತ್ತದೆ ಎಂಬ ಅವರ ಅಭಿಪ್ರಾಯ ವಾಸ್ತವ ಸತ್ಯವಾಗಿರುತ್ತದೆ.
ಮಾನವ ಶಿಕ್ಷಣದಿಂದ ವಂಚಿತನಾಗಿ ತನ್ನ ಹಕ್ಕುಗಳ ಬಗ್ಗೆ ಅರಿವಿಲ್ಲದಿರುವುದರಿಂದ ಪ್ರತಿ ನಿತ್ಯವೂ ತನ್ನ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂಬುದು ನನ್ನ ಅಭಿಪ್ರಾಯ. ನಿಮ್ಮದು? ಉನ್ನತ ಶಿಕ್ಷಣದಿಂದಲೇ ಮಾನವ ಹಕ್ಕುಗಳು ಸಕಾರಗೊಳ್ಳಲು ಸಾಧ್ಯ.
- ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
- ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
- ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ
- ಅಕ್ರಮ ಆಸ್ತಿ ಆರೋಪ: ಇಂದು ಲೋಕಾಯುಕ್ತ ಮುಂದೆ ಹಾಜರಾಗುವಾರಾ ಸಚಿವ ಜಮೀರ್ ಅಹ್ಮದ್?
- ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಡಿ.3 ರಂದು ಶಾಲೆ, ಅಂಗನವಾಡಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ
More Stories
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ