ಎಸ್‌.ನಿಜಲಿಂಗಪ್ಪ ( S. Nijlingappa )

Team Newsnap
2 Min Read

ರಾಷ್ಟ್ರ ನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ – (ಡಿಸೆಂಬರ್ 10, 1902 )ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಎಂಬ ಚಿಕ್ಕಹಳ್ಳಿಯೊಂದರ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಎಸ್. ನಿಜಲಿಂಗಪ್ಪನವರು ಶಾಂತ ಸ್ವಭಾವ ಮತ್ತು ಸಜ್ಜನಿಕೆಗೆ ಪ್ರಸಿದ್ದರಾದ ದೇಶಪ್ರೇಮಿ ಮತ್ತು ರಾಜಕಾರಣಿ.

ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಪದವಿ ಓದಿದ ಅವರು ಪುಣೆಯ ಕಾನೂನು ಕಾಲೇಜಿನಲ್ಲಿ ಲಾ ಪದವಿ ಪಡೆದರು.

ಅವರ ರಾಜಕೀಯ ಜೀವನ ಪ್ರಾರಂಭವಾದದ್ದು 1936ರಲ್ಲಿ. ಡಾ.ಎನ್‌.ಎಸ್‌.ಹರ್ಡಿಕರ್‌ರೊಡನೆ ಸಂಪರ್ಕ ಬೆಳೆಸಿ ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡು ನಂತರ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾದರು.

ಚಿತ್ರದುರ್ಗ ಕ್ಷೇತ್ರದಿಂದ ಪ್ರತಿನಿಧಿಸಿ ಕೇಂದ್ರ ಸಂಸತ್ತಿನ ಸದಸ್ಯರಾದರು. ಅವರನ್ನು ಆಧುನಿಕ ಕರ್ನಾಟಕದ ನಿರ್ಮಾಣಕಾರರೆಂದು ಕರೆಯಲಾಗುತ್ತದೆ. ಅವರು ವ್ಯವಸಾಯ, ನೀರಾವರಿ, ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ವಿಶೇಷ ಅಭಿವೃದ್ಧಿಯನ್ನು ಮಾಡಿದರು.

ಎಸ್‌.ನಿಜಲಿಂಗಪ್ಪ ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರಲ್ಲಿ ಎಸ್‌.ನಿಜಲಿಂಗಪ್ಪ ಪ್ರಮುಖರು. ಸಿದ್ಧವನಹಳ್ಳಿ ನಿಜಲಿಂಗಪ್ಪನವರು ಹಿರಿಯ ಕಾಂಗ್ರೆಸ್‌ ರಾಜಕಾರಣಿಯಾಗಿದ್ದರು. ಎರಡು ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಆನ್‌ ಲೈನ್‌ ನ ಪ್ರಥಮ ಕನ್ನಡ ಶಿಕ್ಷಕಿ ಎಸ್ತರ್‌ ಶಾಮಸುಂದರ್

ಮೊದಲ ಅಧಿಕಾರಾವಧಿ 1956 ರಿಂದ 1958 ರವರೆಗೂ ಹಾಗೂ ಎರಡನೆ ಅಧಿಕಾರಾವಧಿ 1962 ರಿಂದ 1968. ನಿಜಲಿಂಗಪ್ಪ ಅವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲೂ, ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಏಕಕಾಲದಲ್ಲಿ ತೊಡಗಿಸಿಕೊಂಡಿದ್ದ ಕ್ರಿಯಾಶೀಲ ನಾಯಕರಾಗಿದ್ದರು.

ಕರ್ನಾಟಕದ ಏಕೀಕರಣ ಮತ್ತು ಅಭಿವೃದ್ಧಿಗಾಗಿ ದುಡಿದ ನಿಜಲಿಂಗಪ್ಪನವರಿಗೆ 1999 ರಲ್ಲಿ ಕರ್ನಾಟಕ ಸರ್ಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ಕರ್ನಾಟಕದ ಏಕೀಕರಣ, ಶರಾವತಿ ಜನವಿದ್ಯುತ್ ಯೋಜನೆ, ಕೃಷ್ಣಾ ಮೇಲ್ಡಂಡೆ ಯೋಜನೆಗಳು ಹೀಗೆ ಹಲವಾರು ಯೋಜನೆಗಳು ನಿಜಲಿಂಗಪ್ಪನವರ ನೆನಪು ನಾಡಿನ ಜನಮನದಲ್ಲಿ ಹಚ್ಚ ಹಸಿರಾಗಿ ಇಡಬಲ್ಲವು.

ನಿಜಲಿಂಗಪ್ಪನವರ ಮತ್ತೊಂದು ಪ್ರಮುಖವಾದ ಕೆಲಸವೆಂದರೆ, ಟಿಬೇಟ್ ಸಮುದಾಯದವರಿಗೆ ಕರ್ನಾಟಕದಲ್ಲಿ ಆಶ್ರಯ ಒದಗಿಸಿದ್ದು. ಕರ್ನಾಟಕದಲ್ಲಿನ ಟಿಬೇಟಿಯನ್ನರ ಮನಗಳಲ್ಲಿ ನಿಜಲಿಂಗಪ್ಪನವರು ಸದಾ ನೆಲೆಸಿರುತ್ತಾರೆ. ಈ ಕಾರಣಕ್ಕಾಗಿಯೇ, ಚಿತ್ರಗುರ್ಗದಲ್ಲಿನ ಅವರ ಸ್ಮಾರಕವನ್ನು ‘ದಲಾಯಿ ಲಾಮ’ರವರು ಉದ್ಘಾಟಿಸಿದರು.

ಅಧಿಕಾರ/ಹುದ್ದೆ ಅವಧಿ

ಮೈಸೂರು ವಿಧಾನ ಪರಿಷತ್ತು 1937 – 1938

ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ 1936 – 1940

ಸದಸ್ಯರು, ಮೈಸೂರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ 1938 – 1950

ಪ್ರಧಾನ ಕಾರ್ಯದರ್ಶಿ, ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ 1942 – 1945

ಅಧ್ಯಕ್ಷರು, ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ 1945 – 1946

ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ 1946

ಸದಸ್ಯರು, ಭಾರತದ ಸಂವಿಧಾನ ಸಭೆ ಮತ್ತು ತಾತ್ಕಾಲಿಕ ಸಂಸತ್ತು 1946

ಸದಸ್ಯರು ಮತ್ತು ಅಧ್ಯಕ್ಷರು, ಮೈಸೂರು ಸಂವಿಧಾನ ಸಭೆ 1948 – 1950

ಸದಸ್ಯರು, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ 1949

ಸದಸ್ಯರು, ಗೋಪಾಲ್ ರಾವ್ ವಿಚಾರಣಾ ಸಮಿತಿ, ಮೈಸೂರು ಸರ್ಕಾರ

ಅಧ್ಯಕ್ಷರು, ಇಂಡಿಯನ್ ಆಯಿಲ್ ಸಂಸ್ಥೆ 1959 – 1962

ಅಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ 1968

ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ 1956 – 1958

ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ 1962 – 1968

ಸದಸ್ಯರು, ಚಿತ್ರದುರ್ಗ ಕ್ಲಬ್ 1929

ಕಾರ್ಯದರ್ಶಿ, ಚಿತ್ರದುರ್ಗ ಕ್ಲಬ್ 1935 – 1937

ಸದಸ್ಯ, ಸಂವಿಧಾನ ಕ್ಲಬ್, ನವದೆಹಲಿ.

Share This Article
Leave a comment