ಕಲುಷಿತ ಪ್ರಕೃತಿ, ಕಲಬೆರಕೆ ಆಹಾರ, ಅನಾರೋಗ್ಯಕರ ಜೀವನಶೈಲಿ, ಒತ್ತಡದ ಜಗತ್ತಿನಲ್ಲಿ ಮನುಷ್ಯ ತನ್ನನ್ನು ತಾನು ನೋಡಿಕೊಳ್ಳುವುದನ್ನು ಮರೆತಿದ್ದಾನೆ. ಒತ್ತಡದ ಜೀವನವು ರಕ್ತದೊತ್ತಡದ (Blood Pressure) ದರಗಳನ್ನು ಹೆಚ್ಚಿಸಲು ಪ್ರಮುಖ ಕಾರಣವಾಗಿದೆ.
ರಕ್ತದೊತ್ತಡ (Blood Pressure) ಎಂದರೇನು ಅದು ಜೀವಕ್ಕೆ ಹೇಗೆ ಅಪಾಯಕಾರಿ. ಅದನ್ನು ಹೇಗೆ ನಿಯಂತ್ರಿಸಬಹುದು. ಆರೋಗ್ಯಕರ ರಕ್ತದೊತ್ತಡವನ್ನು ಹೊಂದಲು ಜೀವನಶೈಲಿಯ ರಹಸ್ಯವೇನು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
WHO ಪ್ರಕಾರ, 30 ರಿಂದ 72 ವರ್ಷ ವಯಸ್ಸಿನ 42% ಜನರಿಗೆ ಬಿಪಿ ಇದೆ ಎಂದು ತಿಳಿದಿಲ್ಲ. ಬಿಪಿಗೆ ಕಾರಣವೇನು ರೋಗಲಕ್ಷಣಗಳು ಮತ್ತು ಚಿಕಿತ್ಸೆ ಏನು ಎಂದು ನೋಡೋಣ.
ಎಷ್ಟು ಬಿಪಿಯನ್ನು ಅಧಿಕ ಬಿಪಿ ಎಂದು ಪರಿಗಣಿಸಲಾಗುತ್ತದೆ
ಸಾಮಾನ್ಯ ಒತ್ತಡ 120/80. ನೀವು 140/110 ಅಥವಾ ಹೆಚ್ಚಿನ ರಕ್ತದೊತ್ತಡವನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸಿ
ರಕ್ತದೊತ್ತಡವನ್ನು(Blood Pressure) ಹೊಂದಿದ್ದರೆ ರೋಗಲಕ್ಷಣಗಳು ಏನು ?
- ತಲೆನೋವು
- ತಲೆತಿರುಗುವಿಕೆ
- ಆಯಾಸ
- ಉಸಿರಾಟದ ತೊಂದರೆ
- ಎದೆ ನೋವು
- ಮೂಗಿನ ರಕ್ತಸ್ರಾವ
ಯಾವ ರೀತಿಯ ಜೀವನಶೈಲಿಯು ರಕ್ತದೊತ್ತಡವನ್ನು ಉಂಟುಮಾಡುತ್ತದೆ ?
- ಮಾನಸಿಕ ಒತ್ತಡ: ರಕ್ತದೊತ್ತಡಕ್ಕೂ ಮಾನಸಿಕ ಒತ್ತಡಕ್ಕೂ ಬಹಳ ಅನ್ಯೋನ್ಯ ಸಂಬಂಧ. ಈಡಾದಾಗ ಉಂಟಾಗುವ ಅಹಿತಕರ ವಿದ್ಯಮಾನಗಳು ಬಿಪಿ ಒಂದೇ ಅಲ್ಲದೆ, ಅನೇಕ ಆತಂಕದ. ರೋಗಗಳಿಗೆ ನಾಂದಿಯಾಗುತ್ತದೆ. ಅತೀವ ಬಡತನ, ನಿರುದ್ಯೋಗ, ವೈವಾಹಿಕ ಸಮಸ್ಯೆ ಇನ್ನಿತರೆ ಕಾರಣಗಳು ಮಾನಸಿಕ ಖಿನ್ನತೆಗೆ ನೆರವಾಗುತ್ತವೆ.
- ಕೊಬ್ಬು ಸೇವನೆ: ಅತಿ ಹೆಚ್ಚಾಗಿ ಜಿಡ್ಡು ಪದಾರ್ಥ ಹಾಗೂ ಕರಿದ ಪದಾರ್ಥಗಳನ್ನು ಸೇವಿಸುವವರಲ್ಲಿ ಬಿಪಿ ಹೆಚ್ಚುವ ಸಂಭವವಿದೆ. ಕೊಬ್ಬಿನಿಂದ ಏರುವ ದೇಹ ತೂಕ, ಅದರಿಂದಲೇ ರಕ್ತದೊತ್ತಡವೂ ಏರುತ್ತದೆ. ಮುಖ್ಯವಾಗಿ ಡಾಲ್ವ, ಕೊಬ್ಬರಿ, ಎಣ್ಣೆ, ಬೆಣ್ಣೆ, ಪ್ರಾಣಿಜನ್ಯ ಕೊಬ್ಬು ಸೇವಿಸುವುದರಿಂದ ರಕ್ತದೊತ್ತಡ ಏರಿಕೆಯ ಅಪಾಯ ಹೆಚ್ಚು. ಇಂತಹ ಜಿಡ್ಡು ಪದಾರ್ಥಗಳಿಂದ ರಕ್ತದಲ್ಲಿ ಅಪಾಯಕಾರಿ. ಕೊಲೆಸ್ಟ್ರಾ ಲ್ ಅಂಶವೂ ಇರುತ್ತದೆ.
- ಅಧಿಕ ಉಪ್ಪು: `ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ’ ಎಂಬ ಮಾತು ಇದೆ. ಕೆಲವರಂತೂ ಉಪ್ಪಿಲ್ಲದೆ ತುತ್ತೆದವರು. ಆಹಾರದಲ್ಲಿ ಹೆಚ್ಚಿದ ಉಪ್ಪು ಬಳಕೆಯಿಂದ ಬಿಪಿ ಹೆಚ್ಚುಹೆಚ್ಚು ಬಾಧಿಸುತ್ತದೆ. ಚಿಪ್ಸ್, ಕಾರ, ಚಟ್ನಿ, ಉಪ್ಪಿನಕಾಯಿ ಬಳಸಿ ನಾಲಿಗೆ. ಚಪ್ಪರಿಸುತ್ತಲೇ ಬಿಪಿಯನ್ನು ಬರಮಾಡಿಕೊಳ್ಳುತ್ತಿದ್ದೇವೆ.
- ಕಾಫಿ-ಟೀ: ಪ್ರತಿದಿನ ಐದಾರು ಕಪ್‌ಗಳಿಗಿಂತ ಹೆಚ್ಚು ಬಾರಿ ಸ್ಟ್ರಾಂಗ್ ಕಾಫಿ ಸೇವಿಸುವವರಿಗೆ ರಕ್ತದೊತ್ತಡ ಹೆಚ್ಚುತ್ತದೆಂಬುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಪ್ರತಿ ಕಪ್. ಸ್ಟ್ರಾಂಗ್ ಕಾಫಿ ನಮ್ಮ ರಕ್ತದೊತ್ತಡವನ್ನು 10 ಮಿಲಿಮೀ. ನಷ್ಟು ಏರಿಸುತ್ತದೆ ಎಂಬುದು ಪ್ರಯೋಗಗಳಿಂದ ವೇದ್ಯವಾಗಿದೆ.
- ತಂಬಾಕು-ಧೂಮಪಾನ: ಇದು ಬಿಪಿ ಪ್ರಚೋದಕ. ತಂಬಾಕಿನಲ್ಲಿ ಅನೇಕ ವಿಷ ಪದಾರ್ಥಗಳಿವೆ. ಅವುಗಳಲ್ಲಿ ನಿಕೋಟಿವ್ ಹಾಗೂ ಇಂಗಾಲದ ಮಾನಾಕ್ಸೈಡ್ ದೇಹದಲ್ಲಿ `ನಾರ್ ಆಡ್ರಿನಲನ್’ ಎಂಬ ರಾಸಾಯನಿಕ ರಕ್ತದೊತ್ತಡ ಹೆಚ್ಚಿಸುತ್ತದೆ. ಧೂಮಪಾನ ಚಟದ ತೀವ್ರತೆ ಬಿಪಿಯನ್ನು ಹೆಚ್ಚಿಸುತ್ತದೆ. ತಂಬಾಕಿನಿಂದ ತಯಾರಾದ ಯಾವುದೇ ಪದಾರ್ಥದ ಸೇವನೆಯಿಂದ ಬಿಪಿ ಬರುತ್ತದೆ. ಎಂಬುದು ನಿಶ್ಚಿತ. ಮದ್ಯಪಾನ ಮದ್ಯಪಾನಿ ವ್ಯಸನಿಗಳಿಗೆ ಬಿಪಿ ಬರುವ ಸಾಧ್ಯತೆ ಹೆಚ್ಚು. ಮದ್ಯಪಾನ ಸೇವನೆಯನ್ನು ಸಂಪೂರ್ಣವಾಗಿ. ತ್ಯಜಿಸಿದರೆ ಕಾಲಾನುಕ್ರಮೇಣ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.
ಉತ್ತಮ ಬಿಪಿ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಆಹಾರ
- ಸಿಟ್ರಸ್ ಹಣ್ಣು
ಸಿಟ್ರಸ್ ಹಣ್ಣುಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವುಗಳು ಜೀವಸತ್ವಗಳು, ಖನಿಜಗಳು ಮತ್ತು ಸಸ್ಯ ಸಂಯುಕ್ತಗಳೊಂದಿಗೆ ಲೋಡ್ ಆಗುತ್ತವೆ, ಇದು ಅಧಿಕ ರಕ್ತದೊತ್ತಡದಂತಹ ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.- ಸಿಟ್ರಸ್ ಹಣ್ಣುಗಳು ಒಳಗೊಂಡಿರಬಹುದು:
- ದ್ರಾಕ್ಷಿಹಣ್ಣು
- ಕಿತ್ತಳೆ
- ನಿಂಬೆಹಣ್ಣುಗಳು
- ಸಿಟ್ರಸ್ ಹಣ್ಣುಗಳು ಒಳಗೊಂಡಿರಬಹುದು:
- ಹಸಿರು ಸೋಪುಗಳು – ಪಾಲಕ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಇದು ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ಗಳಿಂದ ಕೂಡಿದೆ, ಇದು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.
- ಕುಂಬಳಕಾಯಿ ಬೀಜಗಳು
- ಅಗಸೆಬೀಜ
- ಚಿಯಾ ಬೀಜ
- ಪಿಸ್ತಾ
- ಬಾದಾಮಿ
ಲೋ ಬ್ಲಡ್ ಪ್ರೆಷರ್ (Low Blood Pressure)
ಲೋ ಬ್ಲಡ್ ಪ್ರೆಷರ್ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಮಸ್ಯೆ. ಮುಖ್ಯವಾಗಿ ಅತೀ ಕಡಿಮೆ. ರಕ್ತದೊತ್ತಡಕ್ಕೆ ಲೋ ಬಿಪಿ ಎನ್ನುತ್ತೇವೆ. ಸಾಮಾನ್ಯವಾಗಿ ಆರೋಗ್ಯವಂತರಲ್ಲಿ ರಕ್ತದೊತ್ತಡ 120/80 ಮಟ್ಟದಲ್ಲಿರುತ್ತದೆ. ಅದು 90/60ಗಿಂತ ಕಡಿಮೆ ಇದ್ದಾಗ ಅದು ಲೋ ಬಿಪಿ. ಲೋ ಬ್ಲಡ್ ಪ್ರೆಷರ್ ವಿಶೇಷವಾಗಿ ಹಿರಿಯ ವಯಸ್ಕರಲ್ಲಿ ಕಾಯಿಲೆಯ (ಹೃದಯಕ್ಕೆ, ಮೆದುಳಿಗೆ ಅಥವಾ ಇತರೆ ಅಂಗಗಳಿಗೆ ಸರಿಯಾಗಿ ರಕ್ತ ಹೋಗದಿರುವುದರ ಸೂಚಕವಾಗಿರುತ್ತದೆ) ದೀರ್ಫಕಾಲದಿಂದ ಲೋ ಬಿಪಿ ಇದ್ದು ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇದಲ್ಲಿ ಹೆಚ್ಚು ಕಡಿಮೆ ಆಗಿ ಗಂಭೀರ ಸ್ಥಿತಿ ಆಗಬಹುದು.
ಲೋ ಬ್ಲಡ್ ಪ್ರೆಷರ್ ಕಾರಣವೇನು?
ಆತೀ ಕಡಿಮೆ ರಕ್ತದೊತ್ತಡಕ್ಕೆ ಕಾರಣ ಸ್ಪಷ್ಟವಿಲ್ಲ.
- ವಿಪರೀತ ಬಿಸಲು
- ಥೈರಾಯಿಡ್ (ಕಡಿಮೆ /ಹೆಚ್ಚಾದಾಗ)
- ಗರ್ಭಾಧಾರಣೆ
- ಡಯಾಬಿಟಿಸ್ / ಬ್ಲಡ್ ಶುಗರ್ ಕಡಿಮೆಯಾಗುವುದು
- ಹೃದಯ ವೈಪಲ್ಯ, ಹೃದಯದ ಲಯ ತಪ್ಪಿದಾಗ, ರಕ್ತನಾಳಗಳು ವಿಶಾಲ ಅಥವಾ ಅಗಲವಾದಾಗ.
- ಲಿವರ್ ಕಾಯಿಲೆ
ಇದ್ದಕ್ಕಿದ್ದಂತೆ ಬೀಪಿ ಕಡಿಮೆಯಾದರೆ ಪ್ರಾಣಾಪಾಯ ತರಬಲ್ಲದು. ತೀವ್ರ ರಕ್ತಸ್ರಾವ, ದೇಹದ ಉಷ್ಣತೆ ಅತೀ ಕಡಿಮೆ ಆದಾಗ, ಅತೀ ಉಷ್ಣವಾದಾಗ, ಹೃದಯ ಸ್ನಾಯುವಿನ ಕಾಯಿಲೆ, ಹೃದಯ ವೈಪಲ್ಯವಾದಾಗ, ತೀವ್ರ ರಕ್ತದ ಸೋಂಕು, ವಾಂತಿಯ ಕಾರಣ ಡಿಹೈಡ್ರೇಷನ್ ಆದಾಗ, ಅತಿಸಾರ ಅಥವಾ ಜ್ವರ. ಮದ್ಯಪಾನ, ಔಷಧ ಅಲರ್ಜಿ ಇವು ರಕ್ತದೊತ್ತಡ ಕಡಿಮೆಯಾಗಲು ಕಾರಣಗಳಾಗಿವೆ.
ಯಾರ್ಯಾರಿಗೆ ಬರಬಹುದು?
ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧ ತೆಗೆದುಕೊಳ್ಳುವವರಲ್ಲಿ ಪೋಸ್ಟುರಲ್ ಹೈಪೋಟೆನ್ಸನ್ ಅತಿ ಸಾಮಾನ್ಯ. ಗರ್ಭಧಾರಣೆ, ವಿಪರೀತ ಭಾವನ್ಮಾತಕ ವ್ಯಕ್ತಿತ್ವ, ರಕ್ತನಾಳಗಳು ಕಠಿಣವಾದಾಗ ಅಥವಾ ಡಯಾಬಿಟಿಸ್. ಹಿರಿಯ ವಯಸ್ಕರಲ್ಲಿ ಇದು ತೀರಾ ಕಾಡುತ್ತದೆ, ಅದರಲ್ಲೂ ವಿಪರೀತ ಬ್ಲಡ್‌ಪೆಷರ್ ಇರುವವರಲ್ಲಿ. ಪೋಸ್ಟುರಲ್ ಹೈಪೊಟೆನ್ಸನ್‌ಗೆ ಕಾರಣಗಳು ಹಲವಾರು. ದೇಹದ ದ್ರವ ಕಡಿಮೆ ಆದಲ್ಲಿ, ಆಹಾರ ಇಲ್ಲದಿದ್ದರೆ, ಬಿಸಿಲಲ್ಲಿ ಬಹುಕಾಲ ನಿಂತಾಗ ಅಥವಾ ತೀರಾ ದಣಿವಾದಾಗ, ಕೆಲವರಲ್ಲಿ ವಯಸ್ಸಿನ ಕಾರಣದಿಂದಲೂ ಔಷಧ, ಆಹಾರ, ಮಾನಸಿಕ ಒತ್ತಡಗಳಿಂದ ಹೀಗಾಗುವುದಂಟು ಹಲವಾರು ಔಷಧಗಳು ಹೈಯುರಿಟಿಕ್ಸ್, ಬೀಟಾ ಬ್ಲಾಕರ್ಸ್, ಕ್ಯಾಲ್ಡಿಯಂ ಚಾನೆಲ್ ಬ್ಲಾಕರ್ಸ್, ಏಸ್ ಇನ್‌ಹಿಬಿಟರ್ಸ್ ಹೈಪೊಟೆನ್ಸನ್ ಉಂಟು ಮಾಡುತ್ತದೆ ಎಂದು ಹೇಳಬಹುದು.ಆದ್ದರಿಂದ ಲೋ ಬಿಪಿಯನ್ನು ಯಾರೂ ಕೂಡ ನಿರ್ಲಕ್ಷಿಸಲಾಗದು. ಹಾಗಾಗಿ ಸೂಕ್ತ ವೇಳೆಯಲ್ಲೇ ವೈದ್ಯರನ್ನು ಕಂಡು ಚಿಕಿತ್ಸೆಗೆ ಮುಂದಾಗುವುದು ಒಳಿತು. ಅಡುಗೆ ಅರಮನೆಹೊಸ ರುಚಿ
ಕಡಿಮೆ ಬಿಪಿ ಸಂಭವಿಸಿದಾಗ ಏನು ಮಾಡಬೇಕು ?
ಬೀಪಿ ಕಡಮೆ ಆಗಿ ಪ್ರಜ್ಞಾಹೀನರಾಗಿದ್ದಲ್ಲಿ ಈ ಅಗಾಂತ ಭಂಗಿಯಲ್ಲಿ ಮಂಗಿಸಿ. ತಲೆದಿಂಬುಗಳು ಅಥವಾ ಪುಟ್ಟ ಸ್ಟೂಲ್ ಇದ್ದಲ್ಲಿ ಅದನ್ನು ಪಾದದ ಕೆಳಗೆ ಇರಿಸಿ. ಕಾಲನ್ನು ಎತ್ತರದಲ್ಲಿ ಇಟ್ಟಾಗ ರಕ್ತದ ಸಂಚಾರ ಹೃದಯಕ್ಕೆ ಆಗಿ ಬೀಪಿ ನಾರ್ಮಲ್ ಸ್ಥಿತಿಗೆ ಬರುತ್ತದೆ. ವ್ಯಕ್ತಿಯನ್ನು ಆದಷ್ಟು ಬೆಚ್ಚಗೆ ಮತ್ತು ಹಿತವಾಗಿರುವಂತೆ ನೋಡಿಕೊಳ್ಳಿ. ವ್ಯಕ್ತಿಗೆ ಕತ್ತಿನ ಭಾಗದಲ್ಲಿ ಏನೂ ಗಾಯವಾಗಿಲ್ಲ ಎಂದಿದ್ದರೆ ಮಾತ್ರ ತಲೆಯನ್ನು ಒಂದು ಕಡೆ ತಿರುಗಿಸಿ. ವೈದ್ಯರಿಗೆ ಆಂಬ್ಯುಲೆನ್‌ಸ್‌ಗೆ ಕೂಡಲೇ ಪೋನ್ ಮಾಡಿ ಚಿಕಿತ್ಸೆಗೆ ಅನುವಾಗಬೇಕು. ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತಿ.
What is Blood Pressure (BP) how it is dangerous to life. how can it be controlled. what is the secret of lifestyle to have a healthy blood pressure. here is answer for all your question #BP Blood Pressure#bloodpressureinkannada #bloodpressure #lowbp #kannadahealth #mandya #mysore #bengluru #india
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!