ರಾಜ್ಯದ 13 ಸೇರಿ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಇಂದು ಶಂಕು ಸ್ಥಾಪನೆ

Team Newsnap
2 Min Read

ಬೆಂಗಳೂರು:

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ( ಆಗಸ್ಟ್ 6) ಇಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ಉದ್ದಗಲಕ್ಕೂ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

508 ನಿಲ್ದಾಣಗಳನ್ನು 24,470 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು. ನಗರದ ಎರಡೂ ಬದಿಗಳ ಸರಿಯಾದ ಏಕೀಕರಣದೊಂದಿಗೆ ಈ ನಿಲ್ದಾಣಗಳನ್ನು ‘ನಗರ ಕೇಂದ್ರಗಳಾಗಿ’ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಯಾವ ರಾಜ್ಯದಲ್ಲಿ ಎಷ್ಟು ನಿಲ್ದಾಣ ? :

ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18 ನಿಲ್ದಾಣಗಳು ಸೇರಿವೆ. ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ಸೇರಿವೆ.

ಕರ್ನಾಟಕ 13 ರೈಲ್ವೆ ನಿಲ್ದಾಣಗಳು ಯಾವವು ?

ಬಳ್ಳಾರಿ ರೈಲ್ವೆ ನಿಲ್ದಾಣ – 16.7 ಕೋಟಿ ವೆಚ್ಚ

ಘಟಪ್ರಭಾ ರೈಲ್ವೆ ನಿಲ್ದಾಣ, ಬೆಳಗಾವಿ ಜಿಲ್ಲೆ – 18.2 ಕೋಟಿ ವೆಚ್ಚ

ಗೋಕಾಕ್ ರೋಡ್ ರೈಲ್ವೆ ನಿಲ್ದಾಣ, ಬೆಳಗಾವಿ – 17 ಕೋಟಿ ವೆಚ್ಚ

ಬೀದರ್ ರೈಲ್ವೆ ನಿಲ್ದಾಣ – 24.4 ಕೋಟಿ ವೆಚ್ಚ

ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ – 18.5 ಕೋಟಿ ವೆಚ್ಚ

ಹರಿಹರ ರೈಲ್ವೆ ನಿಲ್ದಾಣ, ದಾವಣಗೆರೆ – 25.2 ಕೋಟಿ ವೆಚ್ಚ

ಅಲ್ನಾವರ್ ರೈಲ್ವೆ ನಿಲ್ದಾಣ, ಧಾರವಾಡ – 17.2 ಕೋಟಿ ವೆಚ್ಚ

ಗದಗ ರೈಲ್ವೆ ನಿಲ್ದಾಣ – 23.2 ಕೋಟಿ ವೆಚ್ಚ

ಅರಸೀಕೆರೆ ರೈಲ್ವೆ ನಿಲ್ದಾಣ, ಹಾಸನ – 34.1 ಕೋಟಿ ವೆಚ್ಚ

ವಾಡಿ ರೈಲ್ವೆ ನಿಲ್ದಾಣ, ಕಲಬುರ್ಗಿ – 32.7 ಕೋಟಿ ವೆಚ್ಚ

ಕಲಬುರ್ಗಿ ಜಂಕ್ಷನ್ ಗುಲ್ಬರ್ಗ ರೈಲ್ವೆ ನಿಲ್ದಾಣ, ಕಲಬುರ್ಗಿ – 29.1 ಕೋಟಿ ವೆಚ್ಚ

ಶಹಾಬಾದ್ ರೈಲ್ವೆ ನಿಲ್ದಾಣ, ಕಲಬುರ್ಗಿ – 26.1 ಕೋಟಿ ವೆಚ್ಚ

ಕೊಪ್ಪಳ ರೈಲ್ವೆ ನಿಲ್ದಾಣ – 21.1 ಕೋಟಿ ವೆಚ್ಚ

Share This Article
Leave a comment