ತೂಕ ಹೆಚ್ಚಳಕ್ಕೆ ಕಾರಣವಾಗುವ ಪ್ರಮುಖ ಅಂಶವೆಂದರೆ ಒಂದು ಜಡ ಜೀವನಶೈಲಿ, ನೈಸರ್ಗಿಕವಾಗಿ ಮನೆಯಲ್ಲಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಆಹಾರ ಪದ್ಧತಿಯಲ್ಲಿ ನಿತ್ಯವೂ ಸರಿಯಾದ ಕ್ರಮವನ್ನು ಅನುಸರಿಸಿದರೆ ಮಾತ್ರವೇ ಸುಮಾರು ತೂಕ ಇಳಿಕೆ ಸಾಧ್ಯವಾಗುತ್ತದೆ.
ನಾವು ಸಾಮಾನ್ಯ ಎಂದು ಅಂದುಕೊಳ್ಳುವ ಬಿಸ್ಕತ್ತು, ಕುರುಕು ತಿಂಡಿಗಳು, ಚಾಕಲೇಟು, ಕೇಕ್, ಚೀಸ್, ಪಿಜ್ಜಾ ಇತ್ಯಾದಿಗಳೆಲ್ಲಾ ನಮಗೆ ರುಚಿಕರ ಎಂದೆನ್ನಿಸಿದರೂ, ವಾಸ್ತವದಲ್ಲಿ ಇವು ತೂಕ ಇಳಿಕೆಯ ಪ್ರಯತ್ನಗಳಿಗೆ ಹಿನ್ನಡೆ ನೀಡುತ್ತವೆ.
ದೇಶದಲ್ಲಿ ಹಲವಾರು ವಿಭಿನ್ನ ಆಹಾರಗಳು ಲಭ್ಯವಿದೆ. ನಿಮ್ಮ ತೂಕ ಇಳಿಸಲು ಸಹಾಯ ಮಾಡುವ ಕೆಲ ಆಹಾರಗಳ ಲಿಸ್ಟ್ ಇಲ್ಲಿದೆ.
ರಾಗಿ – ರಾಗಿ ತಿಂದವ ನಿರೋಗಿ ಎಂಬುದು ಕನ್ನಡದ ಒಂದು ಗಾದೆ. ಇದಕ್ಕೆ ಗಾಢ ಕೆಂಪು ಬಣ್ಣ ಬರಲು ಇದರಲ್ಲಿರುವ ಆಗಾಧ ಪ್ರಮಾಣದ ಕಬ್ಬಿಣದ ಅಂಶ ಕಾರಣ. ಕಬ್ಬಿಣ ನಮ್ಮ ರಕ್ತಕಣಗಳಿಗೆ ಅವಶ್ಯವಾಗಿ ಬೇಕಾಗಿರುವ ಅಂಶವಾಗಿದೆ ಹಾಗೂ ಹೀಮೋಗ್ಲೋಬಿನ್ ಉತ್ಪಾದನೆಗೆ ಅಗತ್ಯವಾಗಿದೆ.

ಈ ಧಾನ್ಯದಲ್ಲಿ ಗರಿಷ್ಟ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಲವಣಗಳಿವೆ. ಕರಗದ ನಾರಿನಂಶವೂ ಹೆಚ್ಚೇ ಇರುವ ಕಾರಣ ರಾಗಿ ಅತಿ ನಿಧಾನವಾಗಿ ಜೀರ್ಣಗೊಳ್ಳುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಅತಿ ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಪ್ಪಿಸುತ್ತದೆ.
ಜೋಳ – ಪುಟ್ಟ ದುಂಡಗಿನ ಏಕದಳ ಧಾನ್ಯವಾಗಿದ್ದು ವಿಟಮಿನ್ ಬಿ, ಮೆಗ್ನೀಶಿಯಂ ಮತ್ತು ಆಂಟಿ ಆಕ್ಸಿಡೆಂಟುಗಳು, ಫ್ಲೇವನಾಯ್ಡುಗಳು, ಫಿನಾಲಿಕ್ ಆಮ್ಲಗಳು ಮತ್ತು ಟ್ಯಾನಿನ್ ಗಳಿಂದ ಸಮೃದ್ಧವಾಗಿರುವ ಆಹಾರವೂ ಆಗಿದೆ.

ಜೋಳದ ಸೇವನೆಯಿಂದ ದಿನದ ಅವಶ್ಯಕತೆಯ ಇಪ್ಪತ್ತು ಶೇಖಡಾ ನಾರಿನಂಶ ದೊರಕುತ್ತದೆ.ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲವನ್ನು ನೀಡುತ್ತದೆ.
ಸಜ್ಜೆ – ಪ್ರೋಟೀನ್, ಕರಗದ ನಾರಿನಂಶ, ಮೆಗ್ನೀಶಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಮೊದಲಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದೆ.

ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ ಹಾಗೂ ತೂಕ ಇಳಿಸುವ ವ್ಯಕ್ತಿಗಳಿಗೆ ಹೇಳಿ ಮಾಡಿಸಿದಂತಹ ಧಾನ್ಯವಾಗಿದೆ. ಸಮೃದ್ಧವಾಗಿರುವ ನಾರಿನಂಶ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತದೆ ಹಾಗೂ ಕ್ಯಾಲೋರಿಗಳನ್ನೂ ಏರಿಸುವುದಿಲ್ಲ.
ಚಿಯಾ ಬೀಜ – ಕೆಲವು ಆಹಾರ ಧಾನ್ಯಗಳಂತೆಯೇ ಈ ಚಿಯಾ ಬೀಜ ಕೂಡ ಒಂದು. ಇವುಗಳು ನೋಡುವುದಕ್ಕೆ ಅಂಡಾಕಾರವಾಗಿದ್ದು, ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತವೆ. ದೇಹದ ತೂಕ ಹೆಚ್ಚಿರುವ ವ್ಯಕ್ತಿಗಳು ಈ ಚಿಯಾ ಬೀಜಗಳನ್ನು ಪ್ರತಿನಿತ್ಯ ಸೇವಿಸಬಹುದು. ಹೀಗೆ ಸೇವಿಸುವುದರಿಂದ ತೂಕವು ಕಡಿಮೆಯಾಗುವುದಲ್ಲದೇ, ಬೆಲ್ಲಿ ಫ್ಯಾಟ್ ಅನ್ನು ಕೂಡ ಕರಗಿಸುತ್ತದೆ.

ನವಣೆ – ಈ ಧಾನ್ಯವೂ ಕಬ್ಬಿಣ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ಸಮತೋಲನದಲ್ಲಿ ಇರಿಸಲು ನವಣೆ ಅತ್ಯುತ್ತಮವಾಗಿದೆ.

ಕಾರ್ಬೋಹೈಡ್ರೇಟುಗಳು, ಕರಗುವ ನಾರಿನಂಶ ಉತ್ತಮ ಪ್ರಮಾಣದಲ್ಲಿದ್ದು ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಅತ್ಯುತ್ತಮವಾದ ಆಹಾರವನ್ನಾಗಿಸಿದೆ.
ಅಗಸೆ ಬೀಜ – ಸ್ಥೂಲಕಾಯ ಹೊಂದಿರುವವರಿಗೆ ಅಗಸೆ ಬೀಜ ರಾಮಬಾಣ. ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಇದು ಪ್ರಯೋಜನಕಾರಿ. ಪ್ರತಿದಿನ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಶೇ. 6 ರಿಂದ ಶೇ.11 ರಷ್ಟು ಕಡಿಮೆ ಮಾಡಬಹುದು.

ಸೂರ್ಯಕಾಂತಿ ಬೀಜ – ಸೂರ್ಯಕಾಂತಿ ಬೀಜಗಳಲ್ಲಿ ನಾರಿನ ಅಂಶ ಸಮೃದ್ಧವಾಗಿ ಕಂಡುಬರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶದ ಪ್ರಮಾಣ ತಗ್ಗುತ್ತಾ ಹೋಗುತ್ತದೆ.ಸೂರ್ಯಕಾಂತಿ ಬೀಜಗಳು ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿವೆ, ಆಹಾರದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಅತಿಯಾದ ಹಸಿವನ್ನು ತಡೆಯುತ್ತದೆ.

ಬಾರ್ಲಿ – ಬಾರ್ಲಿ ಫೈಬರ್ ನ ಅಂಶ. ಸಾಮಾನ್ಯವಾಗಿ ಯಾವುದೇ ಫೈಬರ್ ಹೊಂದಿರುವ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆ ಹಸಿವು ದೂರಾಗಿ ಬಹಳ ಹೊತ್ತಿನ ತನಕ ಹೊಟ್ಟೆ ತುಂಬಿದ ರೀತಿ ಇರುತ್ತದೆ. ಇದರಿಂದ ಬೇರೆ ರೀತಿಯ ಆಹಾರಗಳನ್ನು ಆಗಾಗ ಸೇವಿಸಬೇಕೆಂಬ ಮನಸ್ಸು ಬರುವುದಿಲ್ಲ.

ಹಾಗಾಗಿ ದೇಹದ ತೂಕ ಹೆಚ್ಚಾಗುವ ಪ್ರಮೇಯವೇ ಬರುವುದಿಲ್ಲ. ಜೊತೆಗೆ ಬಾರ್ಲಿ ನೀರಿನಲ್ಲಿರುವ ಫೈಬರ್ ನ ಅಂಶಗಳು ದೇಹದಿಂದ ವಿಷಕಾರಿ ಅಂಶಗಳನ್ನು ಹೊಡೆದೋಡಿಸುತ್ತವೆ. ಹಸಿವು – ರಹಿತ ಮತ್ತು ಕಲ್ಮಶ – ರಹಿತ ದೇಹ ಖಂಡಿತವಾಗಿ ದೈಹಿಕ ತೂಕವನ್ನು ಇಳಿಸುತ್ತದೆ.
ಮೆಂತ್ಯ – ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ಮೆಂತ್ಯ ಕಾಳನ್ನು ಜಗಿದು ತಿಂದರೆ ಹೆಚ್ಚುವರಿ ಕ್ಯಾಲೋರಿ ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತದೆ. ಮೆಂತೆ ಕಾಳಿನಲ್ಲಿರುವ ಪೌಷ್ಟಿಕಾಂಶಗಳು : ಕ್ಯಾಲರಿ : 320, ಕಾರ್ಬೋಹೈಡ್ರೇಟ್ : 58g, ಫೈಬರ್ – 25g , ಪ್ರೊಟೀನ್ – 23g,… ಇತ್ಯಾದಿ.

ಒಟ್ಟಿನಲ್ಲಿ ದಿನನಿತ್ಯ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥಗಳಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು,ನಮ್ಮ ಹಿರಿಯರು ಯಾವುದೇ ಒಂದು ಸೋಂಕು ಅಥವಾ ಕಾಯಿಲೆಗಳನ್ನು ಮನೆಯಲ್ಲಿಯೇ ಕೆಲವು ಪದಾರ್ಥಗಳಿಂದ ಗುಣಪಡಿಸುತ್ತಿದ್ದರು.
- ಮಂಡ್ಯ ನಗರಕ್ಕೆ ನೀರು ಸರಬರಾಜು ದರ ಮಾಸಿಕ 225 ರು ನಿಗದಿ – ಜಿಲ್ಲಾ ಮಂತ್ರಿ ಸೂಚನೆ
- 4144 ಮೆಟ್ರಿಕ್ ಟನ್ ದಾಟಿದ ‘ಮೈಸೂರು ಸ್ಯಾಂಡಲ್ ಸೋಪ್’ ಮಾಸಿಕ ಉತ್ಪಾದನೆ
- ನಂದಿನಿ ಹಾಲಿನ ದರ ಏರಿಕೆ ?
- ಶೀಘ್ರದಲ್ಲೇ BMTCಗೆ 921 ಎಲೆಕ್ಟ್ರಿಕ್ ಬಸ್ : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
- ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ರು ಅನುದಾನ ಬಿಡುಗಡೆ – ಸಿಎಂ
- ಐಸಿಸ್ ಉಗ್ರರ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ : ಯತ್ನಾಳ್