ಭರತನಾಟ್ಯ ವಿಭಾಗ – ರಾಜ್ಯಮಟ್ಟಕ್ಕೆ ನವ್ಯಶ್ರೀ ಆಯ್ಕೆ

Team Newsnap
1 Min Read

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಭರತನಾಟ್ಯ ಸ್ಪರ್ಧೆಯಲ್ಲಿ ಸಂತ ಜೋಸೆಫ್ ಪ್ರೌಢಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ ಬಿ.ಎಂ. ನವ್ಯಶ್ರೀ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ನಗರದ ಲಕ್ಷ್ಮೀ ಜನಾರ್ದನ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 7 ತಾಲ್ಲೂಕುಗಳಿಂದ 7 ಸ್ಪರ್ಧಿಗಳು ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ಬಿ.ಎಂ.ನವ್ಯಶ್ರೀ ಪ್ರಥಮ ಸ್ಥಾನ ಪಡೆದಿದ್ದಾಳೆ. ಮಾನವನ ಮೆದುಳಿಗೆ ರೋಬೋಟ್ ಚಿಪ್ – ಎಲೋನ್ ಮಸ್ಕ್

ನವ್ಯಶ್ರೀ ಅವರು `ಆಂದೋಲನ’ ಪತ್ರಿಕೆಯ ಜಿಲ್ಲಾ ಹಿರಿಯ ವರದಿಗಾರ, ತಾಲ್ಲೂಕಿನ ಹೊಸಬೂದನೂರು ಗ್ರಾಮದ ಬಿ.ಟಿ. ಮೋಹನ್ ಕುಮಾರ್ ಮತ್ತು ಎಂ.ಆರ್.ಜ್ಯೋತಿ ಅವರ ಪುತ್ರಿಯಾಗಿದ್ದು, ಕಳೆದ 9 ವರ್ಷದಿಂದ ಗುರುದೇವ ಲಲಿತಕಲಾ ಅಕಾಡೆಮಿಯ ನಿರ್ದೇಶಕಿ, ವಿದುಷಿ ಚೇತನಾ ರಾಧಾಕೃಷ್ಣ ಅವರ ಬಳಿ ಭರತನಾಟ್ಯ ಕಲಿಯುತಿದ್ದಾರೆ.
ಇವರ ಸಾಧನೆಗೆ ಸಂತ ಜೋಸೆಫರ ಶಾಲೆ ಪ್ರೌಢಶಾಲೆಯ ಶಿಕ್ಷಕ ವೃಂದ ಮತ್ತು ವಿದುಷಿ ಚೇತನಾ ರಾಧಾಕೃಷ್ಣ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share This Article
Leave a comment