ಕಳೆದ 3 ವರ್ಷಗಳಿಂದ ಬಿಜೆಪಿಯಲ್ಲಿರುವ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಈಗ ಮರಳಿ ಗೂಡಿಗೆ ಸೇರಲು ಕಸರತ್ತು ನಡೆಸ್ತಿದ್ದಾರಾ? ವಿಶ್ವನಾಥ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರಾ ಅನ್ನೋ ಅನುಮಾನ ಹುಟ್ಟಿಸಿದೆ.
ಬಿಜೆಪಿ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸದ್ದಿಲ್ಲದೇ ಇಬ್ಬರು ಘಟಾನುಘಟಿ ಕಾಂಗ್ರೆಸ್ ನಾಯಕರನ್ನು ಬ್ಯಾಕ್ ಟು ಬ್ಯಾಕ್ ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
ವಿಶ್ವನಾಥ್ ಅವರು, ನಿನ್ನೆಯಷ್ಟೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ , ಅದರ ಬೆನ್ನಲ್ಲೇ ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ. ಇವತ್ತು ಬೆಳಗ್ಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ವಿಶ್ವನಾಥ್ ಭೇಟಿ ಕೊಟ್ಟರು. ಅರ್ಧ ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರ ಜತೆ ವಿಶ್ವನಾಥ್ ಮಾತುಕತೆ ನಡೆಸಿದರು.
ಸಿದ್ದರಾಮಯ್ಯನವರ ನಡೆಯಿಂದ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ನಂತರ ಜೆಡಿಎಸ್‌ನಲ್ಲೂ ವೈಮನಸ್ಸು ಬಂದು ಸಮ್ಮಿಶ್ರ ಸರ್ಕಾರ ಕೆಡವಿ 16 ಜನ ವಲಸಿಗರ ಜತೆ ತಾವೂ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಆದರೆ ಬಿಜೆಪಿಯಲ್ಲಿ ಮಾತ್ರ ಈವರೆಗೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಕರ್ನಾಟಕ ಸರ್ಕಾರದಿಂದ 2,500 ರೂ.ಗಳಲ್ಲಿ ತಿಮ್ಮಪ್ಪನ ದರ್ಶನಕ್ಕೆ ಸ್ಪೆಷಲ್ ಪ್ಯಾಕೇಜ್
ಹಿರಿತನಕ್ಕೆ ಮಾನ್ಯತೆಯೂ ಸಿಗಲಿಲ್ಲ. ಸಾಲದ್ದಕ್ಕೆ ಉಪಚುನಾವಣೆಯಲ್ಲಿ ಸಹ ಸೋತರು. ಬಹಳ ಕಸರತ್ತು ನಡೆಸಿ ಸಾಹಿತ್ಯ ಕೋಟಾದಿಂದ ಪರಿಷತ್‌ಗೆ ನಾಮ ನಿರ್ದೇಶನಗೊಂಡರು. ಆದರೆ ಬಿಜೆಪಿಯಲ್ಲಿದ್ರೂ ಅಲ್ಲಿನ ನಾಯಕರನ್ನು ಸತತವಾಗಿ ಟೀಕಿಸುತ್ತಲೇ ಬಂದರು. ಸದ್ಯ ಅವರು ಈಗ ಬಿಜೆಪಿಯಿಂದಲೂ ಮಾನಸಿಕವಾಗಿ ದೂರವಾಗಿದ್ದಾರೆ.
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು
ಪಿಯು ಕಾಲೇಜು 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಮ್ಮತಿ