ಮಾನವನ ಮೆದುಳಿಗೆ ರೋಬೋಟ್ ಚಿಪ್ – ಎಲೋನ್ ಮಸ್ಕ್

Team Newsnap
1 Min Read
A robot chip for the human brain - Elon Musk ಮಾನವನ ಮೆದುಳಿಗೆ ರೋಬೋಟ್ ಚಿಪ್ - ಎಲೋನ್ ಮಸ್ಕ್

ನ್ಯೂರಾಲಿಂಕ್ (Neuralink) ಕಂಪನಿ ಮಾನವರ ಮೆದುಳಿಗೆ ಅಳವಡಿಸಬಹುದಾದ ರೋಬೋಟ್ ಚಿಪ್ (Chip) ಅನ್ನು ಶೀಘ್ರವೇ ಪರೀಕ್ಷಿಸಲಿದೆ ಎಂದು ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ತಿಳಿಸಿದ್ದಾರೆ.

ಮಸ್ಕ್‌ನ ಸ್ಟಾರ್ಟ್ಅಪ್ ನ್ಯೂರಾಲಿಂಕ್ ನಿರ್ಮಿಸಿರುವ ಈ ಚಿಪ್ ಮನುಷ್ಯನಿಗೆ ಅಳವಡಿಸಲಾದಲ್ಲಿ ಆತ ತನ್ನ ಆಲೋಚನೆಗಳ ಮೂಲಕ ನೇರವಾಗಿ ಕಂಪ್ಯೂಟರ್‌ಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಈ ತಂತ್ರಜ್ಞಾನದ ಪರೀಕ್ಷೆಯ ಬಳಿಕ ಮಸ್ಕ್ ಸ್ವತಃ ಈ ಚಿಪ್ ಅನ್ನು ಹೊಂದಲು ಬಯಸಿರುವುದಾಗಿ ಮಸ್ಕ್ ಹೇಳಿದ್ದಾರೆ. 123 ಸ್ಥಾನ ಪಡೆದು JDS ಅಧಿಕಾರಕ್ಕೆ ಬಂದರೆ ದಲಿತ ಸಿಎಂ ಮಾಡಲು ನಾವು ಸಿದ್ಧ – ಹೆಚ್‌ಡಿಕೆ

WhatsApp Image 2022 12 02 at 3.48.32 PM

ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಚಿಪ್ ಒಂದು ವೇಳೆ ಯಶಸ್ವಿಯಾದರೆ, ಇದು ಮಾನವನ ಮೆದುಳನ್ನು ನಿಯಂತ್ರಿಸಲು ಸಹಾಯ ಮಾಡಲಿದೆ. ಸ್ನಾಯುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರದ ವ್ಯಕ್ತಿಗಳೂ ಸಕ್ರಿಯರಾಗುತ್ತಾರೆ. ಮಾನವನ ಬೆನ್ನುಹುರಿ ತುಂಡಾಗಿದ್ದರೂ ಆತನ ದೇಹ ಸಂಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗಿಸುವ ಸಾಮರ್ಥ್ಯ ಇದೆ. ಆ ವ್ಯಕ್ತಿ ಮೆದುಳಿನಿಂದಲೇ ಯಂತ್ರಗಳ ಜೊತೆ ಸಂವಹಿಸಬಹುದು ಎಂದು ವರದಿಗಳು ತಿಳಿಸಿವೆ.

2019ರ ಜುಲೈನಲ್ಲಿ ನ್ಯೂರಾಲಿಂಕ್ 2020ರಲ್ಲಿಯೇ ಮಾನವರ ಮೇಲೆ ಈ ಚಿಪ್‌ನ ಮೊದಲ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಈಗಾಗಲೇ ಈ ನಾಣ್ಯದ ಗಾತ್ರದ ಚಿಪ್‌ಗಳನ್ನು ಪ್ರಾಣಿಗಳ ತಲೆಬುರುಡೆಗಳಲ್ಲಿ ಅಳವಡಿಸಿ ಪರೀಕ್ಷೆ ನಡೆಸಲಾಗಿದೆ.

ಈ ಚಿಪ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ನಾವು ಎಫ್‌ಡಿಎಗೆ (ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸಲ್ಲಿಸಿದ್ದೇವೆ. ಅಲ್ಲಿಂದ ಅನುಮತಿ ಪಡೆದರೆ, ಇನ್ನು ಕೇವಲ 6 ತಿಂಗಳುಗಳಲ್ಲಿ ನಾವು ಮಾನವರಲ್ಲಿ ಮೊದಲ ಬಾರಿಗೆ ಚಿಪ್ ಅಳವಡಿಸಲು ಸಾಧ್ಯವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ.

Share This Article
Leave a comment