November 23, 2024

Newsnap Kannada

The World at your finger tips!

musk melon

ಖರ್ಬೂಜ (Muskmelon) ಹಣ್ಣಿನ ಪ್ರಯೋಜನಗಳು

Spread the love

ಬೇಸಿಗೆ (Summer) ಬಂತು,ಬೇಸಿಗೆಯ ಬಿಸಿಲ ಧಗೆಗೆ ತಾಜಾತನ ನೀಡುವ (Muskmelon) ಕರ್ಬೂಜ ಆರೋಗ್ಯಕ್ಕೂ ಒಳ್ಳೆಯದು,ಕರ್ಬೂಜ ಬೇಸಿಗೆ ಕಾಲದಲ್ಲಿ ಹೇರಳವಾಗಿ ಸಿಗುತ್ತವೆ, ಖರ್ಬೂಜ ಹಣ್ಣು ಶೇ.95% ರಷ್ಟು ನೀರಿನಂಶವನ್ನು ಹೊಂದಿದ್ದು, ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ ಹಾಗಾಗಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭ.

ಬೇಸಿಗೆಯಲ್ಲಿ ದೇಹ ನಿಜರ್ಲೀಕರಣಗೊಳ್ಳದಂತೆ ಹೆಚ್ಚೆಚ್ಚು ನೀರು ಕುಡಿಯಬೇಕಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೀಸನಲ್‌ ಹಣ್ಣು (Seasonal Fruits) ಗಳನ್ನು ತಿನ್ನಬೇಕಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹಸಿವಾದಾಗ ತಿನ್ನಲು ಅತ್ಯಂತ ಉಪಯೋಗಕಾರಿಯಾಗಿದೆ.

ಬೇಸಿಗೆಯಲ್ಲಿ ಡಿಹೈಡ್ರೇಶನ್ ಸಮಸ್ಯೆ ಕಾಡದಿರಲು ಕಲ್ಲಂಗಡಿ, ಮೂಸಂಬಿ, ಮಸ್ಕ್‌ಮೆಲನ್ ಮೊದಲಾದ ಹಣ್ಣುಗಳನ್ನು ತಿನ್ನುವಂತೆ ಶಿಫಾರಸು ಮಾಡಲಾಗುತ್ತದೆ. ಕರ್ಬೂಜ ಹಣ್ಣು ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‍ಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತವೆ.

ಖರ್ಬೂಜ (Muskmelon) ಸೇವಿಸುವುದರಿಂದ ಉತ್ತಮ ಆರೋಗ್ಯದ ಲಾಭಗಳ ಜೊತೆಗೆ ನಿಮ್ಮ ತ್ವಚೆಯನ್ನು ಸಹ ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಎ ಸಹ ಲಭ್ಯವಿದ್ದು, ಅವು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತವೆ.ನೀರಿನಂಶದ ಜೊತೆಗೆ ಕರ್ಬೂಜ ಹಣ್ಣು ತಂಪು ಮತ್ತು ಶಮನಕಾರಿ ಗುಣವನ್ನು ಹೊಂದಿದೆ. ಇದು ಎದೆ ಉರಿಯನ್ನು ಶಮನ ಮಾಡುತ್ತದೆ ಮತ್ತು ಮೂತ್ರಕೋಶಗಳಲ್ಲಿ ಇರುವ ಕಶ್ಮಲಗಳನ್ನು ಸ್ವಚ್ಛಗೊಳಿಸುತ್ತದೆ.

ಖರ್ಬೂಜ (Muskmelon) ಹಣ್ಣು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೂ ಉತ್ತಮ ಆಯ್ಕೆ. ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ಕೊಬ್ಬು ಹೆಚ್ಚಿಸದೇ ದೇಹಕ್ಕೆ ಶಕ್ತಿ ಒದಗಿಸುವ ಮೂಲಕ ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಕರ್ಬೂಜ ಹಣ್ಣು ಅಗ್ರಸ್ಥಾನ ಪಡೆಯುತ್ತದೆ.

ಕರ್ಬೂಜ (Muskmelon) ಹಣ್ಣು ಆರೋಗ್ಯಕ್ಕೆ ಅಗತ್ಯವಾದ ಸಮೃದ್ಧ ಪೋಷಕಾಂಶಗಳನ್ನು ಹೊಂದಿದೆ:

  • ಕ್ಯಾಲೋರಿ: 53
  • ಕೊಬ್ಬು: 0.19 ಗ್ರಾಂ
  • ಡಯೆಟರಿ ಫೈಬರ್: 0.9ಗ್ರಾಂ
  • ಕಾರ್ಬೋಹೈಡ್ರೇಟ್: 12ಗ್ರಾಂ
  • ಪ್ರೋಟಿನ್: 1ಗ್ರಾಂ
  • ಸೋಡಿಯಂ 23ಮಿಗ್ರಾಂ
  • ಮಿಟಮಿನ್ ಎ: 5276 ಐಯು
  • ಫೋಲಿಕ್ ಆಮ್ಲ:33 ಮೈಕ್ರೊಗ್ರಾಂ
  • ನಿಯಾಸಿನ್: 1ಮಿಗ್ರಾಂ
  • ವಿಟಮಿನ್ ಬಿ6: 1ಮಿಗ್ರಾಂ
  • ವಿಟಮಿನ್ ಸಿ : 57ಮಿಗ್ರಾಂ
  • ಕ್ಯಾಲ್ಸಿಯಂ: 14 ಮಿಗ್ರಾಂ
  • ಮೆಗ್ನೀಷಿಯಂ: 19 ಮಿಗ್ರಾಂ
  • ಪೊಟಾಶಿಯಂ: 417 ಮಿಗ್ರಾಂ
  • ಕ್ಯಾರೊಟಿನ್: 3219 ಮೈಕ್ರೊಗ್ರಾಂ

ಕರ್ಬೂಜ (Muskmelon) ಹಣ್ಣಿನ ಪ್ರಯೋಜನಗಳು

  1. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ –
    • ಒಂದು ಕಪ್ ಕರಬೂಜ ಹಣ್ಣಿನಲ್ಲಿ ಸುಮಾರು 57 ಮಿಲಿಗ್ರಾಮ್‍ನಷ್ಟು ವಿಟಮಿನ್ ಸಿ ಸತ್ವ ಅಡಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ನಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಷೀರಿಯಾಗಳು ದೇಹದ ಸರಿಯಾದ ಕಾರ್ಯ ನಿರ್ವಹಣೆ ಸಹಾಯ ಮಾಡುತ್ತದೆ.
  2. ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ತಡೆಯುತ್ತದೆ
    • ಈ ಹಣ್ಣಿನಲ್ಲಿರುವ ಆಕ್ಸಿಕೈನ್ ಎಂಬ ಪೋಷಕಾಂಶಕ್ಕೆ ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ನಿವಾರಿಸುವ ಶಕ್ತಿ ಇದೆ. ಕೇಸರಿ ಕರಬೂಜ ಹಣ್ಣಿನ ನಿಯಮಿತ ಸೇವನೆಯಿಂದ ಮೂತ್ರಪಿಂಡಗಳಲ್ಲಿರುವ ಕಲ್ಮಶಗಳು ನಿವಾರಣೆಯಾಗುವ ಮೂಲಕ ಇಲ್ಲಿ ಇನ್ನಷ್ಟು ಕಲ್ಲುಗಳಾಗುವುದರಿಂದ ರಕ್ಷಿಸುತ್ತದೆ.
  3. ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುತ್ತದೆ
    • ಇದರಲ್ಲಿರುವ ವಿಟಮಿನ್ ಸಿ ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನೀರಿನಂಶ ಹೊಟ್ಟೆಯ ಒಳಪದರದ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಹೊಟ್ಟೆಯ ಉರಿಯನ್ನು ಶಮನ ಗೊಳಿಸುತ್ತದೆ.
  4. ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ
    • ಒಂದು ವೇಳೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಸಾಮಾನ್ಯಕ್ಕೂ ಹೆಚ್ಚಿದ್ದರೆ ನಿತ್ಯವೂ ಕರಬೂಜ ಹಣ್ಣುಗಳನ್ನು ಸೇವಿಸುತ್ತಾ ಬನ್ನಿ. ಇದರಲ್ಲಿ ಕೊಲೆಸ್ಟ್ರಾಲ್ ಅಂಶ ಇಲ್ಲವೇ ಇಲ್ಲ. ಸಾಮಾನ್ಯ ಮಟ್ಟಕ್ಕೆ ಇಳಿಯಲು ನೆರವಾಗುತ್ತದೆ.
  5. ಮಧುಮೇಹವನ್ನು ನಿಯಂತ್ರಿಸುತ್ತದೆ
    • ಈ ಹಣ್ಣಿನ ನಿಯಮಿತ ಸೇವನೆಯಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸಬಹುದು. ಈ ಅದ್ಭುತ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುತ್ತದೆ.
  6. ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ
    • ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೃದಯದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಅಡಿನೋಸಿನ್ ಎಂಬ ಪೋಷಕಾಂಶಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣವಿರುವ ಕಾರಣ ರಕ್ತ ತೆಳುವಾಗಿರಲು ಹಾಗೂ ರಕ್ತನಾಳಗಳಲ್ಲಿ ಸರಾಗವಾಗಿ ಸಂಚರಿಸಲು ನೆರವಾಗುತ್ತದೆ.

ಕರಬೂಜ ಹಣ್ಣಿನ ಪಾನಕ (Muskmelon Juice)

Muskmelon juice
  1. ಕರಬೂಜ ಹಣ್ಣು
  2. ಬೆಲ್ಲ ರುಚಿಗೆ ತಕ್ಕಷ್ಟು
  3. ಒಣಶುಂಠಿ
  4. ಕಾಳು ಮೆಣಸು-ಅರ್ಧ ಚಮಚ
  5. ಚಿಟಿಕೆ ಉಪ್ಪು
  6. ಏಲಕ್ಕಿ ಪುಡಿ ಸ್ವಲ್ಪ
  7. ಸ್ವಲ್ಪ ನೀರು

ಪಾನಕ ತಯಾರಿಸುವ ವಿಧಾನ

ಬೆಲ್ಲವನ್ನು ಪುಡಿ ಮಾಡಿಕೊಳ್ಳಿ. ಒಣಶುಂಠಿಯನ್ನು ತುರಿದುಕೊಳ್ಳಿ. ಕಾಳು ಮೆಣಸನ್ನು ಸ್ವಲ್ಪ ತರಿಯಾಗಿ ದಪ್ಪವಾಗಿ ಕುಟ್ಟಿ,

ಪಾತ್ರೆಗೆ ನೀರು ಹಾಕಿ, ಅದಕ್ಕೆ ಕುಟ್ಟಿದ ಎಲ್ಲಾ ಸಾಮಾನುಗಳನ್ನು ಹಾಕಿ ಚೆನ್ನಾಗಿ ಕೈನಲ್ಲಿಯೇ ಕಿವುಚಿ. ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣನ್ನು ಸಹ ಸೇರಿಸಿ. ಅದನ್ನು ಹಾಗೆಯೇ ನುಣ್ಣಗಾಗುವಂತೆ ಕೈನಲ್ಲಿಯೇ ಹಿಸುಕಿ. ಬೆಲ್ಲ ಕರಗಿದ ನಂತರ ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿ. ಇದನ್ನು ತಣ್ಣಗೂ ಸೇವಿಸಬಹುದು. ಪಾನಕದಲ್ಲಿ ಹಣ್ಣಿನ ತೀರ ಚಿಕ್ಕದಾದ ತುಣುಕುಗಳು ಇರುತ್ತವೆ. ಅದು ಪಾನಕ ಕುಡಿಯುವಾಗ ಸಿಗುತ್ತದೆ. ಹಣ್ಣನ್ನು ಜೊತೆಯಲ್ಲಿ ತಿಂದರೆ ಅದು ಇನ್ನೂ ಚೆನ್ನಾಗಿರುತ್ತದೆ.

ನಿಮ್ಮ ಬೇಸಿಗೆಯನ್ನು ತಂಪು ಮಾಡಿಕೊಳ್ಳಲು ಇದನ್ನು ಓದಿ

  • Uses of ಕರ್ಬೂಜ (Muskmelon) in kannada
  • ಕರ್ಬೂಜ (Muskmelon) benefits
  • Summer fruits benefit
Copyright © All rights reserved Newsnap | Newsever by AF themes.
error: Content is protected !!