ಮಜ್ಜಿಗೆ (Butter milk) ಬೇಸಿಗೆಗೆ ಉತ್ತಮ ಪಾನೀಯ – ಮಜ್ಜಿಗೆ ಸೇವಿಸಿದರೆ ಏನೆಲ್ಲಾ ಲಾಭ?

Team Newsnap
5 Min Read

Butter milk – ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎಂದು ಕರೆಯಲ್ಪಡುವ ಮಜ್ಜಿಗೆಗೆ ವಿಶೇಷ ಸ್ಥಾನವಿದೆ. ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಉಪಯೋಗವಾಗುತ್ತದೆ. ಬೇಸಿಗೆಯ ದಣಿವನ್ನು ನಿವಾರಿಸಲು ಮಜ್ಜಿಗೆ ಸೇವಿಸಬೇಕೆಂದು ಹಿರಿಯಲು ಸಲಹೆ ನೀಡುತ್ತಾರೆ. ಇದನ್ನು ಜೀರ್ಣಕ್ರಿಯೆಗೆ ಮದ್ದು ಎಂದೇ ಪರಿಗಣಿಸಲಾಗುತ್ತದೆ.

ಭಾರತೀಯರ ಭೋಜನವು ಮಜ್ಜಿಗೆಯ ಸೇವನೆಯೊಂದಿಗೆ ಕೊನೆಗೊಳ್ಳದಿದ್ದರೆ ಅದು ಅಪೂರ್ಣ.ಮಜ್ಜಿಗೆಯು ಕೇವಲ ಒಂದು ಆಹಾರ ಪದಾರ್ಥವಲ್ಲ,ಹಲವಾರು ಔಷಧಿಯ ಗುಣಗಳನ್ನು ಹೊಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಬೇಸಿಗೆ ಕಾಲ ಹತ್ತಿರವಾಗುತ್ತಿದೆ. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಾವು ಆರೋಗ್ಯಕಾರಿ ಪಾನೀಯಗಳ ಮೊರೆ ಹೋಗಬೇಕಾಗಿದೆ. ಇದಕ್ಕಾಗಿ ಪ್ರತಿದಿನ ಒಂದೊಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕಾಗಿದೆ.

ಮಜ್ಜಿಗೆ ಮಾಡುವ ವಿಧಾನ ಹೇಗೆ ?

ಹಸುವಿನ ಹಾಲಿನಿಂದ, ಶಾಸ್ತ್ರೋಕ್ತವಾಗಿ ತಯಾರಿಸಿದ ಮಜ್ಜಿಗೆ(Butter milk) ಉತ್ತಮವಾದದ್ದು. ಸಣ್ಣ ಉರಿಯಲ್ಲಿ ಕಾಯಿಸಿದ ಹಾಲನ್ನು ಉಗುರು ಬೆಚ್ಚಗಿರುವಾಗ ಹೆಪ್ಪು (ಸ್ವಲ್ಪ ಹುಳಿಮಜ್ಜಿಗೆ) ಹಾಕಿ 6 ರಿಂದ 8 ಗಂಟೆಗಳ ಕಾಲ ಬಿಟ್ಟರೆ ಮೊಸರು ಸಿದ್ಧ. ಅದಕ್ಕೆ 1:4 ಪ್ರಮಾಣದಲ್ಲಿ ನೀರು ಬೆರಸಿ ಕಡೆಯಬೇಕು. ನಂತರ ಬಂದ ಬೆಣ್ಣೆಯನ್ನು ತೆಗೆದು ಅದಕ್ಕೆ ಮತ್ತೆ ಸಾಕಷ್ಟು ನೀರು ಬೆರೆಸಿ ಉಪಯೋಗಿಸುವ ಮಜ್ಜಿಗೆ ಅಮೃತ ಸಮಾನ.

ಮಜ್ಜಿಗೆಯಂತಹ(Butter milk) ಆರೋಗ್ಯಕಾರಿ ಪಾನೀಯವನ್ನು ಕಡೆಗಣಿಸಿ, ತಂಪು ಪಾನೀಯಗಳನ್ನು ಊಟವಾದ ಬಳಿಕ ಕುಡಿಯುತ್ತಿದ್ದೇವೆ. ಇದು ಆರೋಗ್ಯಕ್ಕೆ ತುಂಬಾ ಮಾರಕ. ಇದರ ಬದಲು ಮಜ್ಜಿಗೆ(Butter milk) ಕುಡಿದರೆ ಅದರಿಂದ ದೇಹವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೆರವಾಗುವುದು.

ಮಜ್ಜಿಗೆ ಇಲ್ಲದ ಊಟ
ಗೊಜ್ಜಗರಿಲ್ಲದ ಅರಮನೆ
ಯಾಜಮಾನರಿಲ್ಲದ ಮನೆ
ಈ ಮೂರು ಲಜ್ಜೆ ಕಣಯ್ಯ
ಎಂದು ಕವಿ ಸರ್ವಜ್ಞ ಮಜ್ಜಿಗೆ ಹಿರಿಮೆಯನ್ನು ಹೊಗಳಿದ್ದಾರೆ.

ಮಸಾಲ ಮಜ್ಜಿಗೆಗೆ(Butter milk) ಏನೆಲ್ಲಾ ಮಿಶ್ರಣ ಮಾಡುತ್ತಾರೆ ?

  • ಮಜ್ಜಿಗೆಗೆ ಹಸಿಮೆಣಸು
  • ಉಪ್ಪು
  • ಜೀರಿಗೆ ಪುಡಿ
  • ಚಾಟ್ ಮಸಾಲಾ
  • ಕೊತ್ತಂಬರಿ ಸೊಪ್ಪು
  • ಶುಂಠಿ
  • ಕರಿಬೇವು
  • ಇಂಗು ಅಥವಾ ಬೆಳ್ಳುಳ್ಳಿ

ಮೊದಲಾದವುಗಳನ್ನು ಕೊಂಚ ಕೊಂಚವಾಗಿ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಬೇಸಿಗೆಗೆ ಇದಕ್ಕಿಂತ ಉತ್ತಮವಾದ ಪೇಯ ಇನ್ನೊಂದಿಲ್ಲ.

ಇಂದಿನ ಲೇಖನದಲ್ಲಿ ಮಜ್ಜಿಗೆ ಕುಡಿಯುವುದರ ಆರೋಗ್ಯ ಪ್ರಯೋಜನಗಳು ಯಾವುದು ಎಂಬುದರ ವಿವರ ಇಲ್ಲಿದೆ

  1. ಒಳ್ಳೆಯ ಕೊಬ್ಬಿನಾಂಶ ಈ ಪಾನೀಯದಲ್ಲಿದೆ, ಮಜ್ಜಿಗೆ ಫ್ಯಾಟ್ ಬರ್ನರ್ ಆಗಿ ಕೆಲಸ ಮಾಡುವುದರಿಂದ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ.
  2. ಪ್ರತಿದಿನ ಒಂದೊಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಂಡರೆ ರಕ್ತದೊತ್ತಡದ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಹೃದಯದ ಸಮಸ್ಯೆನೂ ಕಡಿಮೆ ಆಗುತ್ತದೆ.
  3. ಮಜ್ಜಿಗೆಯಲ್ಲಿ(Butter milk) ವಿಶೇಷ ಬಗೆಯ ಪ್ರೋಟಿನ್ ಅಂಶ ಇದೆ
    ತಜ್ಞರೇ ಹೇಳುವ ಪ್ರಕಾರ, ನಾವು ಸೇವಿಸುವ ಆಹಾರ ಪದ್ಧತಿಯಲ್ಲಿ ಆದಷ್ಟು ಪ್ರೋಟೀನ್ ಅಂಶ ಹೆಚ್ಚಿರುವ ಆಹಾರಗಳಿಗೆಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.
  4. ಪ್ರೋಟೀನ್ ಅಂಶ ಹೆಚ್ಚಿರುವ ಮಜ್ಜಿಗೆಯ ವಿಷಯಕ್ಕೆ ಬರುವುದಾದರೆ, ರಕ್ತದ ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕೂಡ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೃದಯದ ಆರೋಗ್ಯಕ್ಕೆ ಕೂಡ ಸಮಸ್ಯೆ ಎದುರಾಗುವುದಿಲ್ಲ.
  5. ಉತ್ತಮ ಬ್ಯಾಕ್ಟೀರಿಯಾವು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯನ್ನು ತಡೆಯುತ್ತದೆ. ಜೊತೆಗೆ ಮಜ್ಜಿಗೆಯಲ್ಲಿ ವಿಟಮಿನ್ ಡಿ ಅಂಶವಿದ್ದು, ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
  6. ನಮ್ಮ ತ್ವಚೆಗೆ ತುಂಬಾ ಸಹಾಯಕ ಮಜ್ಜಿಗೆಯೂ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆಯ ಕಾಂತಿಯನ್ನು ಕೂಡ ಹೆಚ್ಚಿಸಲು ನೆರವಾಗುತ್ತದೆಯಂತೆ! ಇದಕ್ಕೆ ಮುಖ್ಯ ಕಾರಣ ಮಜ್ಜಿಗೆಯಲ್ಲಿಅಧಿಕ ಪ್ರಮಾಣದಲ್ಲಿ ಕಂಡುಬರುವ ಆಲ್ಫಾ ಹೈಡ್ರಾಕ್ಸಿ ಎನ್ನುವ ಆಮ್ಲ, ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
  7. ತ್ವಚೆಯ ಮೇಲೆ ಮೂಡುವ ಮೊಡವೆ ಗುಳ್ಳೆಗಳು, ನೆರಿಗೆ, ಸುಕ್ಕುಗಳು ಮತ್ತು ಗೆರೆಗಳು ನೈಸರ್ಗಿಕವಾಗಿ ಮಾಯವಾಗಿ ಮುಖದ ಸೌಂದರ್ಯ ಹೆಚ್ಚಾಗಬೇಕೆಂದರೆ, ಪ್ರತಿದಿನ ನಿಯಮಿತವಾಗಿ ಮಜ್ಜಿಗೆಯನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಕೂಡ ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
  8. ಅಜೀರ್ಣ ಸಮಸ್ಯೆ ಹೋಗಲಾಡಿಸುತ್ತದೆ, ಕೆಲವೊಮ್ಮೆ ನಾವು ಆಹಾರ ಸೇವನೆ ಮಾಡುವ ವಿಧಾನದಲ್ಲಿ ಸ್ವಲ್ಪ ಏರು-ಪೇರಾದರೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಕಾಡಲು ಶುರುವಾಗುತ್ತದೆ.
  9. ಊಟವಾದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿದರೆ ಆಗ ಹೊಟ್ಟೆ ಉಬ್ಬರ, ತೇಗು, ಬಾಯಿಯಲ್ಲಿ ನೀರು ಬರುವುದು ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.
  10. ಇದು ಹಸಿವನ್ನು ಹೆಚ್ಚಿಸಿದರೂ ನೀವು ಅನಾರೋಗ್ಯಕಾರಿ ಹಾಗೂ ಜಂಕ್ ಫುಡ್ ತಿನ್ನುವುದನ್ನು ಇದು ಕಡಿಮೆ ಮಾಡುವುದು.
  11. ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಲಿನ ಪ್ರತಿರೂಪವಾದ ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಅಂಶಕ್ಕೆ ಯಾವುದೇ ಕೊರತೆ ಇಲ್ಲ! ಹೀಗಾಗಿ ದಿನನಿತ್ಯ ಒಂದೊಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಮೂಳೆಗಳ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಬಹುದು.
  12. ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುವ ಕೀಲು ನೋವು, ಮಂಡಿ ನೋವು ಸಮಸ್ಯೆ ಇದ್ದವರು ಆದಷ್ಟು ಊಟದ ನಂತರ ಮಜ್ಜಿಗೆ(Butter milk) ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
  13. ಜೀರ್ಣಕ್ರಿಯೆಗೆನೆರವಾಗುವ ಜತೆಗೆ ಇದರಲ್ಲಿ ಇರುವಂತಹ ಪ್ರೊಬಯೊಟಿಕ್ ಸೂಕ್ಷ್ಮಜೀವಿಗಳು, ಹೊಟ್ಟೆಯ ಸೋಂಕಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾದ ಬೆಳವಣಿಗೆ ಯನ್ನು ತಡೆಯುವುದು.
  14. ದೇಹದಲ್ಲಿ ನೀರಿನಂಶ ಹೆಚ್ಚಿರುವುದು ಬಹಳ ಒಳ್ಳೆಯದು.ಅದರಲ್ಲೂ ಬೇಸಿಗೆ ಕಾಲದಲ್ಲಿ ದೇಹದಲ್ಲಿ ನಿರ್ಜಲೀಕರಣವಾಗೋದು ಸಾಮಾನ್ಯ.ಮಜ್ಜಿಗೆ ಕುಡಿಯುವುದರಿಂದ ಕಡಿಮೆ ಡಿಹೈಡ್ರಷನ್ ಆಗುತ್ತದೆ.
  15. ಮಜ್ಜಿಗೆಯಲ್ಲಿ ವಿಟಮಿನ್ ಬಿ ಸಂಕೀರ್ಣ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ವಿಟಮಿನ್ ಕೊರತೆ ಇರುವಂತಹವರು ನಿಶ್ಯಕ್ತಿ ಮತ್ತು ರಕ್ತಹೀನತೆ ನಿವಾರಣೆ ಮಾಡಲು ಮಜ್ಜಿಗೆ ಬಳಸಿಕೊಳ್ಳಬೇಕು.

ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ಒಂದು ಪ್ರಾಚೀನ ವೈದ್ಯಗಾದೆ. ಭಾರತೀಯ ಊಟದಲ್ಲಿ ಮಜ್ಜಿಗೆ ಕೊನೆಯ ಘಟ್ಟ. ಒಟ್ಟಾರೆಯಾಗಿ ಹೇಳುವುದಾದರೆ ಬೇಸಿಗೆ ಕಾಲ ಹತ್ತಿರವಾಗುತ್ತಿದೆ. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಾವು ಆರೋಗ್ಯಕಾರಿ ಪಾನೀಯಗಳ ಮೊರೆ ಹೋಗಬೇಕಾಗಿದೆ. ಇದಕ್ಕಾಗಿ ಪ್ರತಿದಿನ ಒಂದೊಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕಾಗಿದೆ.

ಮಜ್ಜಿಗೆ ಎಂದರೆ ಎಲ್ಲರಿಗೂ ಇಷ್ಟಾನೇ. ಬಿರು ಬೇಸಿಗೆಯನ್ನು ದಣಿದು ಬಂದು ಮಜ್ಜಿಗೆ ಕುಡಿದಾಗ ದಣಿವನ್ನು ಇದು ತಕ್ಷಣ ನಿವಾರಿಸುತ್ತದೆ. ಊಟ ಮಾಡಿದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿದರೇನೇ ಹಿತ ಎನಿಸುತ್ತದೆ. ಆದರೆ ಮೊಸರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಜನ ಮೊಸರು ಬೆಸ್ಟ್ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಮಜ್ಜಿಗೆಗಿಂತ ಮೊಸರು ಉತ್ತಮವೇ? ಖಂಡಿತಾ ಇಲ್ಲಾ. ಮಜ್ಜಿಗೆಯೇ ಉತ್ತಮ ಎನ್ನುತ್ತಾರೆ ತಜ್ಞರು.

ರಷ್ಯಾ ದಾಳಿಗೆ ಉಕ್ರೇನ್ ತತ್ತರಗೊಂಡಿದೆ. ಬಾಂಬ್ ದಾಳಿ ವೇಳೆ ತಂದೆ-ತಾಯಿಯನ್ನು ಕಳೆದುಕೊಂಡ ಬಾಲಕನೊಬ್ಬನ ಆಕ್ರಂದನ ನಡು ಬೀದಿಯಲ್ಲೇ ಮುಗಿಲು ಮುಟ್ಟಿರುವ ಮನಕಲಕುವ ದೃಷ್ಯದ ವೀಡಿಯೋವೊಂದು ವೈರಲ್ ಆಗಿದೆ.

ರಷ್ಯಾ ಉಕ್ರೇನ್ ಮೇಲೆ ಎಲ್ಲಾ ಕಡೆ ದಾಳಿ ನಡೆಸುತ್ತಿದೆ. ಜನವಸತಿ ಪ್ರದೇಶದ ಮೇಲೆ ಫೈಟರ್ ಜೆಟ್‍ಗಳ ಬಾಂಬ್ ದಾಳಿಯಾಗುತ್ತಿದೆ.

ಜನರು ತಮ್ಮ ಬಂಧು ಬಳಗವನ್ನು ಕಳೆದುಕೊಂಡಿರುವ ದುಃಖದಲ್ಲಿದ್ದಾರೆ. ಬಾಂಬ್ ಸ್ಫೋಟದಲ್ಲಿ ಧೈರ್ಯ ತುಂಬುತ್ತಿದ್ದ ಪೋಷಕರನ್ನೇ ಕಳೆದುಕೊಂಡ ಬಾಲಕ ಗೋಳಾಟ ನಡೆಸುತ್ತಿದ್ದಾನೆ.

ಆದರೆ ಅಲ್ಲಿರುವವರ್ಯಾರು ಆತನನ್ನು ಸಮಾಧಾನ ಪಡಿಸಲು ಜನರಿಲ್ಲದ ಪರಿಸ್ಥಿತಿಯಲ್ಲದ ಸ್ಥಿತಿಯಲ್ಲಿದ್ದಾರೆ. ಜನರು ಯಾವಾಗ ಎಲ್ಲಿ ಬಾಂಬ್ ದಾಳಿ ಉಂಟಾಗುತ್ತದೆ ಎನ್ನುವ ಭೀತಿಯಲ್ಲಿದ್ದಾರೆ.

ಬಾಂಬ್ ಸ್ಫೋಟಕ್ಕೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದೆ, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್‍ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

ಇಂಟರ್‍ ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ. ಈ ಮಧ್ಯೆಯೂ ಉಕ್ರೇನ್ ಅಧ್ಯಕ್ಷ ದಿಟ್ಟತನದ ಮಾತಗಳನ್ನಾಡಿದ್ದಾರೆ.

Share This Article
Leave a comment