ಪೋಷಕರನ್ನು ಕಳೆದುಕೊಂಡು ಬಾಲಕ ನಡುಬೀದಿಯಲ್ಲೇ ಆಕ್ರಂದನ

Team Newsnap
1 Min Read

ರಷ್ಯಾ ದಾಳಿಗೆ ಉಕ್ರೇನ್ ತತ್ತರಗೊಂಡಿದೆ. ಬಾಂಬ್ ದಾಳಿ ವೇಳೆ ತಂದೆ-ತಾಯಿಯನ್ನು ಕಳೆದುಕೊಂಡ ಬಾಲಕನೊಬ್ಬನ ಆಕ್ರಂದನ ನಡು ಬೀದಿಯಲ್ಲೇ ಮುಗಿಲು ಮುಟ್ಟಿರುವ ಮನಕಲಕುವ ದೃಷ್ಯದ ವೀಡಿಯೋವೊಂದು ವೈರಲ್ ಆಗಿದೆ.

ರಷ್ಯಾ ಉಕ್ರೇನ್ ಮೇಲೆ ಎಲ್ಲಾ ಕಡೆ ದಾಳಿ ನಡೆಸುತ್ತಿದೆ. ಜನವಸತಿ ಪ್ರದೇಶದ ಮೇಲೆ ಫೈಟರ್ ಜೆಟ್‍ಗಳ ಬಾಂಬ್ ದಾಳಿಯಾಗುತ್ತಿದೆ.

ಜನರು ತಮ್ಮ ಬಂಧು ಬಳಗವನ್ನು ಕಳೆದುಕೊಂಡಿರುವ ದುಃಖದಲ್ಲಿದ್ದಾರೆ. ಬಾಂಬ್ ಸ್ಫೋಟದಲ್ಲಿ ಧೈರ್ಯ ತುಂಬುತ್ತಿದ್ದ ಪೋಷಕರನ್ನೇ ಕಳೆದುಕೊಂಡ ಬಾಲಕ ಗೋಳಾಟ ನಡೆಸುತ್ತಿದ್ದಾನೆ.

ಆದರೆ ಅಲ್ಲಿರುವವರ್ಯಾರು ಆತನನ್ನು ಸಮಾಧಾನ ಪಡಿಸಲು ಜನರಿಲ್ಲದ ಪರಿಸ್ಥಿತಿಯಲ್ಲದ ಸ್ಥಿತಿಯಲ್ಲಿದ್ದಾರೆ. ಜನರು ಯಾವಾಗ ಎಲ್ಲಿ ಬಾಂಬ್ ದಾಳಿ ಉಂಟಾಗುತ್ತದೆ ಎನ್ನುವ ಭೀತಿಯಲ್ಲಿದ್ದಾರೆ.

ಬಾಂಬ್ ಸ್ಫೋಟಕ್ಕೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದೆ, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್‍ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

ಇಂಟರ್‍ ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ. ಈ ಮಧ್ಯೆಯೂ ಉಕ್ರೇನ್ ಅಧ್ಯಕ್ಷ ದಿಟ್ಟತನದ ಮಾತಗಳನ್ನಾಡಿದ್ದಾರೆ.

Share This Article
Leave a comment