ನಟಿ ದಿವ್ಯಾ – ಅರ್ನವ್​ ಕೇಸ್​ಗೆ ಮತ್ತೆ ಟ್ವಿಸ್ಟ್ : ಮಲೇಶಿಯಾ ಮಂಗಳಮುಖಿಯ ಜೊತೆಯೂ ವಿವಾಹವಾಗಿದ್ದ!

Team Newsnap
1 Min Read

ಕಿರುತೆರೆ ನಟಿ ದಿವ್ಯಾ ಶ್ರೀಧರ್-ಅರ್ನವ್​ ಪ್ರಕರಣ ಮತ್ತೆ ಹೊಸ ತಿರುವು ಕಂಡುಕೊಂಡಿದೆ ಈ ಪ್ರಕರಣದಲ್ಲಿ ಮಲೇಶಿಯಾ ಮೂಲದ ಮಂಗಳಮುಖಿಯ ಪ್ರವೇಶವಾಗಿದೆ. ಆಕೆಯ ಜೊತೆ ಮದುವೆಯಾಗಿ ಎರಡು ವರ್ಷ ಅರ್ನವ್ ಸಂಸಾರ ನಡೆಸಿದ್ದ ಎಂಬ ಸಂಗತಿ ಈಗ ಆಡಿಯೋ ಮೂಲಕ ವೈರಲ್ ಆಗಿದೆ.

ನಟಿ ದಿವ್ಯಾ ಶ್ರೀಧರ್ ಪತಿ ಅರ್ನವ್​​, ಸದ್ಯ ಜೈಲು ಸೇರಿದ್ದಾನೆ . ಅಕ್ಟೋಬರ್ 4ರಂದು ಪತಿ ಹಲ್ಲೆ ಮಾಡಿದ್ದಾಗಿ ದಿವ್ಯಾ ದೂರು ದಾಖಲಿಸಿದ್ದರು. ಆ ಬಳಿಕ ಚೆನ್ನೈ ಪೊಲೀಸರು ಕಳೆದ ಶುಕ್ರವಾರ ಅರ್ನವ್​​​ನನ್ನು ಬಂಧಿಸಿದ್ದಾರೆ. ಮದುವೆಗಾಗಿ ಧರ್ಮಾಂತರವಾಗಿದ್ದ ದಿವ್ಯಾ, ಆ ಬಳಿಕ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟಿದ್ದಾರೆ.

ಈಗ ಈಕೆ ಹೆಸರು ಪ್ರಿಯದರ್ಶಿನಿ. ಮಲೇಶಿಯಾ ಮೂಲದ ಮಂಗಳಮುಖಿ. ಈಕೆಯ ಜೊತೆಯೂ ಅರ್ನವ್​​​ ಸಂಬಂಧ ಹೊಂದಿದ್ದ ಎಂಬುವುದು ಬಯಲಾಗಿದೆ.

ಪ್ರೀತಿಸಿ ಮದುವೆಯಾಗಿ ಕೈಕೊಟ್ಟಿರೋದಾಗಿ ಆಡಿಯೋ ಬಾಂಬ್ ಬಹಿರಂಗವಾಗಿದೆ. ದಿವ್ಯಾ ಮತ್ತು ಅರ್ನವ್ ಕೇಸ್ ಗಮನಿಸಿದ ಮಂಗಳಮುಖಿ ಪ್ರಿಯದರ್ಶಿನಿ, ಚೆನ್ನೈನ ಸ್ನೇಹಿತೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಈ ಮಾತುಕತೆಗಳು ವೈರಲ್​​ ಆಗಿದೆ. ಮಳವಳ್ಳಿಯಲ್ಲಿ ಬಾಲಕಿ ಅತ್ಯಾಚಾರ,ಹತ್ಯೆ :ಕುಟುಂಬಕ್ಕೆ 10 ಲಕ್ಷ ರು ಪರಿಹಾರ- ಸಿಎಂ ಘೋಷಣೆ

ಅರ್ನವ್ ಓರ್ವ ಹೆಣ್ಣುಬಾಕ. ಅವನೊಬ್ಬ ಸೈಕೋ ಅಂತ ದೂರಿದ್ದಾರೆ. ಅರ್ನವ್ ಚೆನ್ನೈನಲ್ಲಿ ಓದುವಾಗಲೇ ನನ್ನ ಪ್ರೀತಿಸಿ ನಂಬಿಸಿ ಸಹ ಜೀವನ ನಡೆಸಿದ್ದಾನೆ. ನಾನು ಮಂಗಳಮುಖಿ ಅಂತ ಗೊತ್ತಿದ್ದರೂ ನನ್ನ ಜೊತೆ ವಿವಾಹವಾಗಿದ್ದ. ಎರಡು ವರ್ಷ ಒಟ್ಟಿಗೆ ಕಳೆದು ನನ್ನ ಜೊತೆ ಲೈಫ್ ಲೀಡ್ ಮಾಡೋಕೆ ಆಗಲ್ಲ ಅಂತ ದೂರ ಮಾಡಿದ. ನಾನು ಅವನಿಂದ ದೂರ ಆಗಿ ಮಲೇಶಿಯಾದಲ್ಲಿ ಸೆಟಲ್ ಆದೆ ಅಂತ ಆಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.

Share This Article
Leave a comment